More

    ಸುಶಾಂತ್ ಸಾವಿನ ಬಗ್ಗೆ ಧೋನಿ ಮೌನವೇಕೆ?

    ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಜೀವನ ಆಧಾರಿತ ಸಿನಿಮಾಗೆ, ಸ್ವತಃ ಧೋನಿಯೇ ಅಭಿನಯಿಸಿದ್ದಾರೆಯೇ ಎನ್ನುವಷ್ಟರ ಮಟ್ಟಿಗೆ ಜೀವ ತುಂಬಿದವರು ಸುಶಾಂತ್ ಸಿಂಗ್ ರಜಪೂತ್. ಈ ಪ್ರತಿಭಾವಂತ ನಟನ ಸಾವು ಈಗ ಬಾಲಿವುಡ್ ಮಾತ್ರವಲ್ಲ ಕ್ರಿಕೆಟ್ ಲೋಕದಲ್ಲೂ ಸೂತಕದ ಛಾಯೆ ತಂದಿದೆ. ಆದರೆ ತಮ್ಮ ಪಾತ್ರಕ್ಕೆ ಜೀವ ತುಂಬಿದ ನಟನ ದುರಂತ ಸಾವಿನ ಬಗ್ಗೆ ಧೋನಿ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆಗಳು ಬಂದಿಲ್ಲ. ಕ್ರಿಕೆಟ್ ಲೋಕದ ದಿಗ್ಗಜರೆಲ್ಲ ಕಂಬನಿ ಮಿಡಿದಿದ್ದರೂ, ಧೋನಿ ಮಾತ್ರ ಮೌನ ವಹಿಸಿದ್ದಾರೆ. ಲಾಕ್‌ಡೌನ್ ವೇಳೆ ಅವರು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿರುವುದರಿಂದ ಧೋನಿ ಮನಸ್ಸಿಗೆ ಇದು ಎಷ್ಟು ಆಘಾತಕಾರಿ ವಿಷಯ ಎಂಬುದು ಇನ್ನೂ ಅಭಿಮಾನಿಗಳಿಗೆ ತಿಳಿದುಬಂದಿಲ್ಲ.

    ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಬಾಲಿವುಡ್ ಸಹೋದ್ಯೋಗಿಗಳು ಏನು ಹೇಳುತ್ತಾರೆ?

    ಧೋನಿ ತಮ್ಮದೇ ಅಧಿಕೃತ ಟ್ವಿಟರ್, ಇನ್‌ಸ್ಟಾಗ್ರಾಂ ಖಾತೆಗಳನ್ನು ಹೊಂದಿದ್ದಾರೆ. ಆದರೆ ಲಾಕ್‌ಡೌನ್ ವೇಳೆ ಅವರಿಗೆ ಇದರಲ್ಲಿ ಚಟುವಟಿಕೆಯಿಂದಿರುವುದು ಇಷ್ಟವಿಲ್ಲ ಎಂದು ಅವರ ಪತ್ನಿ ಸಾಕ್ಷಿ ಸಿಂಗ್ ಇತ್ತೀಚೆಗೆ ಹೇಳಿಕೊಂಡಿದ್ದರು. ‘ಸುಶಾಂತ್ ಸಾವಿನ ಸುದ್ದಿಯನ್ನು ನಂಬಲಾಗುತ್ತಿಲ್ಲ. ಇಷ್ಟು ಬೇಗ ಹೋಗಿಬಿಟ್ಟರೇ’ ಎಂದು ಸಾಕ್ಷಿ ಸೋಮವಾರ ತಮ್ಮ ಖಾತೆಯಿಂದ ಟ್ವೀಟಿಸಿದ್ದರೂ, ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ. ಈ ನಡುವೆ ಧೋನಿ, ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ನಟನ ಸಾವಿನ ಬಗ್ಗೆ ಮೌನ ಮುರಿಯದಿರುವುದು, ಕನಿಷ್ಠ ಸಂತಾಪ ವ್ಯಕ್ತಪಡಿಸದಿರುವುದು ಟೀಕೆಗಳಿಗೂ ಗುರಿಯಾಗುತ್ತಿದೆ. ಈ ಸಮಯದಲ್ಲಾದರೂ ಧೋನಿ, ಸಾಮಾಜಿಕ ಜಾಲತಾಣಗಳ ಸ್ವಯಂ ನಿರ್ಬಂಧದಿಂದ ಹೊರಬರಬಹುದಾಗಿತ್ತು ಎನ್ನಲಾಗುತ್ತಿದೆ.

    ಇದನ್ನೂ ಓದಿ: ಮಳೆ ನಡುವೆ ಮುಗಿಯಿತು ಸುಶಾಂತ್​ ಸಿಂಗ್​ ಅಂತ್ಯಕ್ರಿಯೆ

    ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸುಶಾಂತ್‌ಗೆ ಶ್ರದ್ಧಾಂಜಲಿ ಸಲ್ಲಿಸದ ಮಾತ್ರಕ್ಕೆ ಧೋನಿಗೆ ಈ ಸುದ್ದಿಯಿಂದ ಆಘಾತ ಆಗಿಲ್ಲ ಎನ್ನುವುದು ಸರಿಯಲ್ಲ. ಧೋನಿ ಅವರ ಆಪ್ತ ಹಾಗೂ ಧೋನಿ ಸಿನಿಮಾದ ನಿರ್ದೇಶಕ ನೀರಜ್ ಪಾಂಡೆ ಪ್ರಕಾರ, ಸುಶಾಂತ್ ಸಾವಿನ ಸುದ್ದಿ ಕೇಳಿದ ಬಳಿಕ ಧೋನಿ ತೀವ್ರವಾಗಿ ದುಃಖಿತರಾಗಿದ್ದಾರೆ. ಈ ಆಘಾತಕಾರಿ ಸುದ್ದಿಯಿಂದಾಗಿ ಅವರು ಸಂಪೂರ್ಣವಾಗಿ ಮಂಕಾಗಿದ್ದಾರೆ.

    ಇದನ್ನೂ ಓದಿ: ಯುಎಸ್ ಓಪನ್‌ಗೆ ಆಟಗಾರರಿಂದಲೇ ವಿರೋಧ!

    ಸುಶಾಂತ್ ಸಾವಿನ ಸುದ್ದಿ ತಿಳಿದ ಬಳಿಕ ನೀರಜ್ ಪಾಂಡೆ ಭಾನುವಾರ ಮಧ್ಯಾಹ್ನ ಧೋನಿಗೆ ಕರೆ ಮಾಡಿದ್ದರಂತೆ. ಸಾವಿನ ಸುದ್ದಿ ಕೇಳಿದ ಬಳಿಕ ಧೋನಿ ಮಂಕಾದರು. ಈ ಸುದ್ದಿಯನ್ನು ಅವರಿಗೆ ನಂಬಲು ಸಾಧ್ಯವಾಗಲಿಲ್ಲ ಎಂದು ನೀರಜ್ ಪಾಂಡೆ ತಿಳಿಸಿದ್ದಾರೆ. ಸುಶಾಂತ್ ಸಾವಿನ ಬಳಿಕ ಭಾನುವಾರ ಹಲವಾರು ಸೆಲೆಬ್ರಿಟಿಗಳು ಸಂತಾಪ ವ್ಯಕ್ತಪಡಿಸಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವಿಟರ್‌ನಲ್ಲಿ ಕಂಬನಿ ಮಿಡಿದಿದ್ದರು.

    ಧೋನಿ ಸೋಷಿಯಲ್ ಮೀಡಿಯಾದಿಂದ ದೂರ, ಸಾಕ್ಷಿ ಬಳಿ ಇದೆ ಸಿಂಪಲ್ ಕಾರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts