More

    ರಾಂಚಿಯಲ್ಲಿ ಧೋನಿಗಾಗಿ ವಿದಾಯದ ಪಂದ್ಯವಾಡಿಸಲಿ ಎಂದ ಜಾರ್ಖಂಡ್​ ಮುಖ್ಯಮಂತ್ರಿ

    ರಾಂಚಿ: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಅವರಿಗಾಗಿ ಜಾರ್ಖಂಡ್​ನ ರಾಜಧಾನಿ ರಾಂಚಿಯಲ್ಲಿ ವಿದಾಯದ ಪಂದ್ಯ ಆಯೋಜಿಸಲಿ ಎಂದು ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೋರೆನ್​, ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಒತ್ತಾಯಿಸಿದ್ದಾರೆ. ಎಂಎಸ್​ ಧೋನಿ, ದೇಶದ ಹಾಗೂ ಜಾರ್ಖಂಡ್​ ರಾಜ್ಯದ ಹೆಮ್ಮೆಯ ವ್ಯಕ್ತಿ. ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಜಾರ್ಖಂಡ್​ ಕ್ರಿಕೆಟಿಗನನ್ನು ಬ್ಲೂ ಜೆಸಿರ್ಯಲ್ಲಿ ನೋಡಲು ಆಗುವುದಿಲ್ಲ.ಆದರೆ, ಅದೆಷ್ಟೋ ಅಭಿಮಾನಿಗಳ ಆಸೆ ಇನ್ನು ಈಡೇರಿಲ್ಲ. ಹೀಗಾಗಿ ಧೋನಿಗಾಗಿ ರಾಂಚಿಯಲ್ಲಿ ವಿದಾಯದ ಪಂದ್ಯ ಆಯೋಜಿಸಬೇಕು ಎಂದು ಹೇಮಂತ್​ ಹೇಳಿದ್ದಾರೆ.

    ಇದನ್ನೂ ಓದಿ: PHOTOS: ಫೋಟೋಗಳ ಮೂಲಕ ಧೋನಿ ಸಾಧನೆ ಅನಾವರಣಗೊಳಿಸಿದ ಬಿಸಿಸಿಐ

    ಬಿಸಿಸಿಐ ಧೋನಿಗೆ ವಿದಾಯದ ಪಂದ್ಯ ಆಯೋಜಿಸಬೇಕು. ಇದು ವಿಶ್ವದಾದ್ಯಂತ ಇರುವ ಅವರ ಅಭಿಮಾನಿಗಳ ಅನುಕೂಲಕ್ಕಾಗಿ ಕ್ರಿಕೆಟ್​ ಮಂಡಳಿ ಒತ್ತಾಯಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೇಮಂತ್​ ಸೋರೆನ್​ ತಿಳಿಸಿದ್ದಾರೆ. 2004ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಧೋನಿ, ಭಾರತೀಯ ಕ್ರಿಕೆಟ್​ನಲ್ಲೇ ತಮ್ಮದೇ ಛಾಪು ಮೂಡಿಸಿದರು ಎಂದರು. ವಿಶ್ವ ಕ್ರಿಕೆಟ್​ನಲ್ಲೇ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ ಎಂದು ರಾಂಚಿ ಹುಡುಗನನ್ನು ಹೇಮಂತ್​ ಶ್ಲಾಘಿಸಿದ್ದಾರೆ.

    ಇದನ್ನೂ ಓದಿ: ಸ್ಟಂಪಿಂಗ್​ನಲ್ಲಿ ಎಂ.ಎಸ್​. ಧೋನಿ ಪಿಕ್​ಪಾಕೆಟ್​ಗಿಂತಲೂ ವೇಗವಂತೆ: ಹೇಳಿದ್ಯಾರು ಗೊತ್ತಾ?

    ಧೋನಿ, ಅಂದಿನ ಬಿಹಾರದ ರಾಂಚಿಯಲ್ಲಿ ಜನಿಸಿದರು. ಬಳಿಕ ಜಾರ್ಖಂಡ್​, ಬಿಹಾರದಿಂದ ಬೇರ್ಪಟ್ಟು ಪ್ರತ್ಯೇಕ ರಾಜ್ಯವಾಯಿತು. ರಾಂಚಿ, ಜಾರ್ಖಂಡ್​ನ ರಾಜಧಾನಿ ಆಯಿತು. ದೇಶೀಯ ಕ್ರಿಕೆಟ್​ನಲ್ಲಿ ಬಿಹಾರ, ಜಾರ್ಖಂಡ್​ ಹಾಗೂ ಪೂರ್ವ ವಲಯ ತಂಡಗಳನ್ನು ಪ್ರತಿನಿಧಿಸಿದ್ದಾರೆ. 39 ವರ್ಷದ ಧೋನಿ, 131 ಪ್ರಥಮ ದರ್ಜೆ ಪಂದ್ಯಗಳಿಂದ 7038 ರನ್​ ಸಿಡಿಸಿದ್ದಾರೆ. ಇದೀಗ ಜಾರ್ಖಂಡ್​ ಮುಖ್ಯಮಂತ್ರಿ ವಿದಾಯ ಪಂದ್ಯ ಆಯೋಜಿಸಬೇಕೆಂದು ಬಲವಾದ ಮನವಿ ಮಾಡಿದ್ದಾರೆ.

    VIDEO: ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ಪಾಕ್ ಆಟಗಾರ್ತಿಯ ಸಂದೇಶ ಹೀಗಿದೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts