More

    ಬೆಂಗಳೂರಿನಲ್ಲಿ ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ ಆರಂಭ

    ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಕ್ರಿಕೆಟ್ ಅಕಾಡೆಮಿಯನ್ನು (ಎಂಎಸ್‌ಡಿಸಿಎ) ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಬಿದರಹಳ್ಳಿ ಹೋಬಳಿಯ ಕಾಡ ಅಗ್ರಹಾರದಲ್ಲಿ ಗೇಮ್‌ಪ್ಲೇ ಮತ್ತು ಆರ್ಕಾ ಸ್ಪೋರ್ಟ್ಸ್ ಕಂಪನಿಗಳ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಅಕಾಡೆಮಿಗೆ ಆಟಗಾರರ ನೋಂದಣಿ ಪ್ರಕ್ರಿಯೆ ಈಗಾಗಲೆ ಆರಂಭಗೊಂಡಿದ್ದು, ನವೆಂಬರ್ 7ರಿಂದ ತರಬೇತಿ ಪ್ರಕ್ರಿಯೆ ಶುರುವಾಗಲಿದೆ.

    ‘ಅತ್ಯುತ್ತಮ ತಾಂತ್ರಿಕತೆ ಮತ್ತು ತಂತ್ರಜ್ಞಾನದೊಂದಿಗೆ 360 ಡಿಗ್ರಿ ತರಬೇತಿ ಒದಗಿಸುವುದು ನಮ್ಮ ಧ್ಯೇಯವಾಗಿದೆ. ಗುಣಮಟ್ಟದ ಕೋಚ್ ಮತ್ತು ಫಿಟ್ನೆಸ್ ತಜ್ಞರು ಇರಲಿದ್ದಾರೆ. ಕ್ರಿಕೆಟರ್‌ಗಳನ್ನು ರೂಪಿಸುವುದಷ್ಟೇ ನಮ್ಮ ಉದ್ದೇಶವಲ್ಲ. ಸ್ಮಾರ್ಟ್ ಕ್ರಿಕೆಟರ್‌ಗಳನ್ನು ಸಿದ್ಧಪಡಿಸಲಿದ್ದೇವೆ. ಮಾನಸಿಕ ಮತ್ತು ದೈಹಿಕ ಕೌಶಲ ಕಲಿಕೆಗಾಗಿ ಎಂಎಸ್‌ಡಿಸಿಎಗೆ ಸೇರಿ’ ಎಂದು ಧೋನಿ ಅಕಾಡೆಮಿಗೆ ವರ್ಚುವಲ್ ಮೂಲಕ ಚಾಲನೆ ನೀಡುವ ವೇಳೆ ಹೇಳಿದ್ದಾರೆ.

    6 ವರ್ಷಗಳ ಹಿಂದೆ ಆರಂಭಗೊಂಡಿರುವ ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ ಈಗಾಗಲೆ ಭಾರತದೆಲ್ಲೆಡೆ 50ಕ್ಕೂ ಅಧಿಕ ನಗರಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ವಿದೇಶದಲ್ಲೂ 3 ಕೇಂದ್ರಗಳಿವೆ. ಒಟ್ಟಾರೆ 500ಕ್ಕೂ ಅಧಿಕ ಕೋಚ್‌ಗಳು ಈ ಅಕಾಡೆಮಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಪಂಜಾಬ್ ಕಿಂಗ್ಸ್ ತೊರೆಯಲಿದ್ದಾರೆ ಕೆಎಲ್ ರಾಹುಲ್! ಹೊಸ ತಂಡ ಯಾವುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts