More

    ಚಾಕೋಲೇಟ್ ಉದ್ಯಮಕ್ಕೂ ಕಾಲಿಟ್ಟ ಎಂಎಸ್ ಧೋನಿ…!

    ನವದೆಹಲಿ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, ತವರು ರಾಜ್ಯ ಜಾರ್ಖಂಡ್ ರಾಜಧಾನಿ ರಾಂಚಿಯ ಹೊರವಲಯದಲ್ಲಿ ತಮ್ಮದೇ ಫಾರ್ಮ್ ಹೌಸ್‌ನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಗೂ ಮೊದಲೇ ಹಲವು ಉದ್ಯಮಗಳಲ್ಲಿ ತೊಡಗಿದ್ದರು. ಕಳೆದ ವರ್ಷ ಕುಕ್ಕುಟೋದ್ಯಮದಲ್ಲಿ ಧೋನಿ ಬಂಡವಾಳ ಹೂಡಿದ್ದರು. ಇದೀಗ ಚಾಕೋಲೇಟ್ ಉದ್ಯಮಕ್ಕೂ ಧೋನಿ ಕಾಲಿಟ್ಟಿದ್ದಾರೆ. ಹೆಲಿಕಾಪ್ಟರ್ ಶಾಟ್‌ಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಧೋನಿ ಅದರಿಂದಲೇ ಸ್ಫೂರ್ತಿ ಪಡೆದ ಚಾಲೋಲೇಟ್ ಉದ್ಯಮಕ್ಕೆ ಕೈಹಾಕಿದ್ದಾರೆ. ಮುಂಬೈ ಮೂಲದ 7ಇಂಕ್‌ಬ್ರಿವ್ಸ್ ಸಂಸ್ಥೆಯಲ್ಲಿ ಧೋನಿ ಪಾಲುದಾರರಾಗಿದ್ದಾರೆ.

    ಇದನ್ನೂ ಓದಿ: ಲಾಕ್ ಡೌನ್ ನಡುವೆಯೂ ಮುಂಬೈನಲ್ಲಿ ಐಪಿಎಲ್ ಪಂದ್ಯಗಳಿಗೆ ಅನುಮತಿ 

    ನೂತನ ಚಾಕೋಲೇಟ್ ಹಾಗೂ ಪಾನೀಯಗಳು (ಆಲ್ಕೋಹಾಲಿಕ್-ಆಲ್ಕೋಹಾಲಿಕ್ ರಹಿತ) ಕಾಪ್ಟರ್-7 ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಧೋನಿ ಹೆಲಿಕಾಪ್ಟರ್ ಶಾಟ್ ಹಾಗೂ ಧೋನಿ ಜೆರ್ಸಿ ಸಂಖ್ಯೆಯೇ ಇದಕ್ಕೆ ಸ್ಫೂರ್ತಿಯಾಗಿದೆ. 7ಇಂಕ್‌ಬ್ರಿವ್ಸ್‌ನಂಥ ಕಂಪನಿಗೆ ರಾಯಭಾರಿ ಹಾಗೂ ಪಾಲೂದಾರನಾಗಿರುವುದು ಸಂತೋಷದ ವಿಷಯ ಎಂದು ಧೋನಿ ಪ್ರಕಟಿಸಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ. ಮುಂಬೈ, ಪುಣೆ, ಗೋವಾ ಹಾಗೂ ಬೆಂಗಳೂರಿನ ಶಾಖೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಉತ್ತರ ಪ್ರದೇಶ, ಹರಿಯಾಣ, ಜಾರ್ಖಂಡ್, ಪಂಜಾಬ್ ಹಾಗೂ ಚಂಡೀಗಢದಲ್ಲಿ ಶೀಘ್ರವೇ ಶಾಖೆಗಳು ಆರಂಭಗೊಳ್ಳಲಿವೆ.

    ಇದನ್ನೂ ಓದಿ: ಮಧ್ಯದ ಲೋಗೋ ಇರುವ ಜೆರ್ಸಿ ತೊಡುವುದಿಲ್ಲ ಎಂದು ಮೊಯಿನ್ ಅಲಿ 

    ಚಾಕೋಲೇಟ್ ಕವರ್‌ಗಳು ಧೋನಿ ತೊಟ್ಟಿರುವ ವಿವಿಧ ಜೆರ್ಸಿಗಳ ಬಣ್ಣಗಳನ್ನು ಒಳಗೊಂಡಿವೆ. ಅಲ್ಲದೆ, ‘ಅನ್‌ಡೈಯಿಂಗ್,ಕಾಂಟ್ ಸ್ಟಾಪ್, ವೊಂಟ್ ಸ್ಟಾಪ್ ಸ್ಪಿರಿಟ್’ (ಅಮರವಾದ..ಎಂದು ನಿಲ್ಲಿಸದ, ಎಂದು ನಿಲ್ಲದ ಉತ್ಸಾಹ) ಎಂದು ಅಡಿಬರಹ ನೀಡಲಾಗಿದೆ. ಚಾಲೋಕೇಟ್ ಆಕಾರಕ್ಕೆ ಮೈಸೂರು ಮೂಲದ ಚಾಕೋಲೇಟ್ ಬ್ರ್ಯಾಂಡ್ ನವಿಲುನಾದ ಮುಖ್ಯಸ್ಥ ಡೇವಿಡ್ ಬೆಲೊ ನೀಡಿದ್ದಾರೆ.

    ಈ ಸ್ಟಾರ್ ಕ್ರಿಕೆಟಿಗರಿಗೆ ಇದುವೇ ಕೊನೆಯ ಐಪಿಎಲ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts