More

    ಧವನ್​ V/s ಧವನ್​, ಪುತ್ರನೊಂದಿಗೆ ಶಿಖರ್​ ಧವನ್​ ಅವರ ಕ್ವಾರಂಟೈನ್​ ಪ್ರೀಮಿಯರ್​ ಲೀಗ್​

    ನವದೆಹಲಿ: ಕೋವಿಡ್​ 19 ಲಾಕ್​ಡೌನ್​ನಿಂದಾಗಿ ಯಾವುದೇ ಕ್ರಿಕೆಟ್​ ಸರಣಿಗಳು ನಡೆಯುತ್ತಿಲ್ಲ. ಐಪಿಎಲ್​ ಕೂಡ ಮುಂದೂಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಉಳಿದಿರುವ ಕ್ರಿಕೆಟ್​ ಆಟಗಾರರು ಪತ್ನಿ, ಮಕ್ಕಳೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ.

    ಆದರೆ ಮಕ್ಕಳ ಬೇಸರ ನೀಗಿಸಲು ಮನೆಯೊಳಗೆ ಕ್ರಿಕೆಟ್​ ಆಡುವ ಅನಿವಾರ್ಯತೆ ಉಂಟಾಗಿದೆ. ಇಂಥ ಅನಿವಾರ್ಯತೆಯಲ್ಲೇ ಟೀಂ ಇಂಡಿಯಾದ ಆರಂಭಿಕ ಶಿಖರ್​ ಧವನ್​, ಪುತ್ರ ಝೋರಾವರ್​ ಜತೆ ಮನೆಯಲ್ಲೇ ಕ್ರಿಕೆಟ್​ ಆಡುತ್ತಿದ್ದಾರೆ.

    ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಅವರು, ಕ್ವಾರಂಟೈನ್​ ಪ್ರೀಮಿಯರ್​ ಲೀಗ್​, ಧವನ್​ V/s ಧವನ್​ ಎಂಬ ಅಡಿಬರಹ ಕೊಟ್ಟಿದ್ದಾರೆ. ಈ ದೃಶ್ಯದಲ್ಲಿ ಝೋರಾವರ್​ ಬೌಲಿಂಗ್​ ಮಾಡುತ್ತಿದ್ದರೆ, ಧವನ್​ ರಕ್ಷಣಾತ್ಮಕವಾಗಿ ಆಡುತ್ತಿದ್ದಾರೆ.

    ಇದಕ್ಕೂ ಮುನ್ನ ಟ್ವೀಟ್​ ಮಾಡಿದ್ದ ಶಿಖರ್​ ಧವನ್​, ಲಾಕ್​ಡೌನ್​ನ ಈ ಅವಧಿಯಲ್ಲಿ ಪ್ರಾಣಿಗಳು ಊಟ, ನೀರು ಸಿಗದೆ ಪರದಾಡುತ್ತಿವೆ. ಇವುಗಳ ಸಹಾಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದರು.

    ಕೌಟುಂಬಿಕ ಆಸ್ಪತ್ರೆಯಲ್ಲೇ ಉತ್ತರ ಕೊರಿಯಾ ಸರ್ವಾಧಿಕಾರಿಗೆ ಚಿಕಿತ್ಸೆ; ಹೃದಯ ಶಸ್ತ್ರಚಿಕಿತ್ಸೆ ಬಳಿಕ ವಿಷಮಿಸಿದ ಆರೋಗ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts