More

    ಕೌಟುಂಬಿಕ ಆಸ್ಪತ್ರೆಯಲ್ಲೇ ಉತ್ತರ ಕೊರಿಯಾ ಸರ್ವಾಧಿಕಾರಿಗೆ ಚಿಕಿತ್ಸೆ; ಹೃದಯ ಶಸ್ತ್ರಚಿಕಿತ್ಸೆ ಬಳಿಕ ವಿಷಮಿಸಿದ ಆರೋಗ್ಯ

    ನವದೆಹಲಿ: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಹೃದ್ರೋಗದಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಅವರ ಆರೋಗ್ಯ ವಿಷಮಿಸಿದೆ ಎಂದು ಹೇಳಲಾಗುತ್ತಿದೆ.

    ಸರ್ವಾಧಿಕಾರಿಯ ಕುಟುಂಬಸ್ಥರಿಗೆಂದೇ ರಾಜಧಾನಿ ಪ್ಯಾಂಗ್​ಯಾಂಗ್​ನಿಂದ 150 ಕಿ.ಮೀ. ದೂರದ ಹ್ಯಾಂಗ್​ ಸ್ಯಾನ್​ನಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆಯಲ್ಲಿ ಕಿಮ್​ ಜಾಂಗ್​ ಉನ್​ಗೆ ಚಿಕಿತ್ಸೆ ಕೊಡಲಾಗುತ್ತಿದೆ. ಜಪಾನ್​, ಜರ್ಮನಿಯಿಂದ ಆಮದು ಮಾಡಿಕೊಂಡ ಉಪಕರಣಗಳನ್ನು ಬಳಸಿಕೊಂಡು ವಿದೇಶದಲ್ಲಿ ತರಬೇತಿ ಪಡೆದಿರುವ ವೈದ್ಯರು ಚಿಕಿತ್ಸೆ ಕೊಡುತ್ತಿರುವುದಾಗಿ ಡೈಲಿ ಎನ್​ಕೆ ಎಂಬ ದಕ್ಷಿಣ ಕೊರಿಯಾದ ಇಂಟರ್ನೆಟ್​ ನ್ಯೂಸ್​ ಪೋರ್ಟಲ್​ ವರದಿ ಮಾಡಿದೆ.

    ಯಾವುದೇ ಬಗೆಯ ಬೇಹುಗಾರಿಕೆ ಸಮಸ್ಯೆ ಬಾರದಂತೆ ನೋಡಿಕೊಳ್ಳುವ ಉದ್ದೇಶದಿಂದ 1994ರಲ್ಲಿ ಈ ಆಸ್ಪತ್ರೆಯನ್ನು ಹ್ಯಾಂಗ್​ ಸ್ಯಾನ್​ನಲ್ಲಿ ನಿರ್ಮಿಸಲಾಯಿತು ಎಂದು ವಿವರಿಸಲಾಗಿದೆ.

    ವಿಪರೀತ ಧೂಮಪಾನ ಮಾಡುತ್ತಿದ್ದ ಕಿಮ್​ ಜಾಂಗ್​ ಉನ್​ ದಢೂತಿ ದೇಹ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರಲ್ಲಿ ಹೃದ್ರೋಗ ಕಾಣಿಸಿಕೊಂಡಿದ್ದು, ಇದಕ್ಕಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ಡೇಲಿ ಎನ್​ಕೆ ಈ ಹಿಂದೆ ವರದಿ ಮಾಡಿತ್ತು.

    ಹಲ್ಲು ನೋವು ಬಂದರೆ ಇನ್ನೆರಡು ತಿಂಗಳು ಚಿಕಿತ್ಸೆ ಸಿಗುವುದು ಅನುಮಾನ, ಇದು ಕೋವಿಡ್​ 19 ಗಿಫ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts