ಕೌಟುಂಬಿಕ ಆಸ್ಪತ್ರೆಯಲ್ಲೇ ಉತ್ತರ ಕೊರಿಯಾ ಸರ್ವಾಧಿಕಾರಿಗೆ ಚಿಕಿತ್ಸೆ; ಹೃದಯ ಶಸ್ತ್ರಚಿಕಿತ್ಸೆ ಬಳಿಕ ವಿಷಮಿಸಿದ ಆರೋಗ್ಯ

ನವದೆಹಲಿ: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಹೃದ್ರೋಗದಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಅವರ ಆರೋಗ್ಯ ವಿಷಮಿಸಿದೆ ಎಂದು ಹೇಳಲಾಗುತ್ತಿದೆ. ಸರ್ವಾಧಿಕಾರಿಯ ಕುಟುಂಬಸ್ಥರಿಗೆಂದೇ ರಾಜಧಾನಿ ಪ್ಯಾಂಗ್​ಯಾಂಗ್​ನಿಂದ 150 ಕಿ.ಮೀ. ದೂರದ ಹ್ಯಾಂಗ್​ ಸ್ಯಾನ್​ನಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆಯಲ್ಲಿ ಕಿಮ್​ ಜಾಂಗ್​ ಉನ್​ಗೆ ಚಿಕಿತ್ಸೆ ಕೊಡಲಾಗುತ್ತಿದೆ. ಜಪಾನ್​, ಜರ್ಮನಿಯಿಂದ ಆಮದು ಮಾಡಿಕೊಂಡ ಉಪಕರಣಗಳನ್ನು ಬಳಸಿಕೊಂಡು ವಿದೇಶದಲ್ಲಿ ತರಬೇತಿ ಪಡೆದಿರುವ ವೈದ್ಯರು ಚಿಕಿತ್ಸೆ ಕೊಡುತ್ತಿರುವುದಾಗಿ ಡೈಲಿ ಎನ್​ಕೆ ಎಂಬ ದಕ್ಷಿಣ ಕೊರಿಯಾದ ಇಂಟರ್ನೆಟ್​ ನ್ಯೂಸ್​ ಪೋರ್ಟಲ್​ ವರದಿ … Continue reading ಕೌಟುಂಬಿಕ ಆಸ್ಪತ್ರೆಯಲ್ಲೇ ಉತ್ತರ ಕೊರಿಯಾ ಸರ್ವಾಧಿಕಾರಿಗೆ ಚಿಕಿತ್ಸೆ; ಹೃದಯ ಶಸ್ತ್ರಚಿಕಿತ್ಸೆ ಬಳಿಕ ವಿಷಮಿಸಿದ ಆರೋಗ್ಯ