More

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯ ಶ್ಲಾಘನೀಯ

    ಕಾನಹೊಸಹಳ್ಳಿ: ಅರ್ಥಿಕವಾಗಿ ಹಿಂದುಳಿದ ಹಾಗೂ ನಿರ್ಗತಿಕರಿಗೆ ಸೂರು ಕಲ್ಪಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಹೊಸಪೇಟೆ ಬಿಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ ಹೇಳಿದರು.

    ಇದನ್ನೂ ಓದಿ: ಮಹಿಳೆಯರ ಪ್ರಗತಿಗೆ ಧರ್ಮಸ್ಥಳ ಯೋಜನೆ ವೇದಿಕೆ

    ಸಮೀಪದ ಗುಂಡುಮುಣುಗು ಗ್ರಾಮದ ನಿವಾಸಿ ವೃದ್ಧೆ ಸಂಜಿವಮ್ಮಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ವಾತ್ಸಲ್ಯ ಗೃಹ ನಿರ್ಮಿಸಿ ಶುಕ್ರವಾರ ಹಸ್ತಾಂತರಿಸಿ ಮಾತನಾಡಿದರು.

    ಯೋಜನೆ ಮೂಲಕ ಸಾಲಸೌಲಭ್ಯ ಪಡೆದು ಮಹಿಳೆಯರು ಸಂಘಟಿತರಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಪ್ರತಿ ಯೋಜನೆಯನ್ನು ಫಲಾನುಭವಿಗಳಿಗೆ ತಲುಪಿಸುತ್ತಿರುವುದು ಮೆಚ್ಚುವಂತದ್ದು ಎಂದರು.

    ಕಲ್ಯಾಣ ಕರ್ನಾಟಕ ವಿಭಾಗದ ಕೊಪ್ಪಳ ಪ್ರಾದೇಶಿಕ ಕಚೇರಿಯ ನಿರ್ದೇಶಕ ಬಿ.ಗಣೇಶ್ ಮಾತನಾಡಿ, ವಾತ್ಸಲ್ಯ ಯೋಜನೆ ನಿರ್ಗತಿಕರ ಬದುಕನ್ನು ಹಸನಾಗಿಸುವ ಕಾರ್ಯಕ್ರಮವಾಗಿದೆ.

    ತಾಲೂಕಿನಲ್ಲಿ ಇದೇ ಮೊದಲನೇ ಮನೆಯಾಗಿದ್ದು, ಈವರೆಗೆ ರಾಜ್ಯದಲ್ಲಿ 60,402 ಸರ್ವೇಕ್ಷಣಾ ವರದಿ ಆಗಿದ್ದು, ಸುಮಾರು 16 ಸಾವಿರಕ್ಕೂ ಹೆಚ್ಚು ಮನೆ ನಿರ್ಮಿಸಿ ಹಸ್ತಾಂತರ ಮಾಡಿದ್ದಾರೆ. ಸಂಘದ ಸದಸ್ಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಶಾಸನ ನೀಡಲಾಗುತ್ತಿದೆ. ಸಂಜೀವಮ್ಮಗೆ ಮನೆ ನಿರ್ಮಿಸಿಕೊಡುವ ಜತೆಗೆ ಪ್ರತಿ ತಿಂಗಳು ಸಾವಿರ ರೂಪಾಯಿ ಮಾಶಾಸನ ನೀಡಲಾಗುತ್ತಿದೆ ಎಂದರು.

    ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಗುಂಡುಮುಣಗು ಗ್ರಾಪಂ ಅಧ್ಯಕ್ಷ ಅಂಜಿನಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೂಡ್ಲಿಗಿ ಯೋಜನಾಧಿಕಾರಿ ಸಂತೋಷ್ ಕುಮಾರ್, ತಾಪಂ ಮಾಜಿ ಉಪಾದ್ಯಕ್ಷ ಎಸ್.ಪಿ.ಪ್ರಕಾಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸಕ್ಕೂಬಾಯಿ, ಲೆಕ್ಕಪರಿಶೋಧಕರಾದ ಅಶ್ವಿನಿಕುಮಾರಿ,

    ಚಿಕ್ಕಜೋಗಿಹಳ್ಳಿ ವಲಯ ಮೇಲ್ವಿಚಾರಕರಾದ ಹೇಮಲತಾ, ಮಂಜುಭಾರ್ಗವ, ರೈತ ಮುಖಂಡ ಜಿ.ಪಿ.ಗುರುಲಿಂಗಪ್ಪ, ಚಂದ್ರಣ್ಣ, ಸೇವಾ ಪ್ರತಿನಿಧಿಗಳಾದ ರಾಮಚಂದ್ರಪ್ಪ, ತಿಪ್ಪೇಸ್ವಾಮಿ, ರವಿಕುಮಾರ್, ಸುನಂದಬಾಯಿ, ಕುರಿಹಟ್ಟಿ ರಾಜೇಶ್ವರಿ, ರವಿ, ಅಸ್ಮಾ, ಕೊಟ್ರಮ್ಮ, ಲಕ್ಷ್ಮೀ, ನಾಗಭೂಷಣ, ವಿಎಚ್ ಕರಿಬಸಪ್ಪ, ಗೋವಿಂದರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts