More

    ಸಾಮಾಜಿಕ ಕಾರ್ಯಗಳಿಂದ ವ್ಯಕ್ತಿತ್ವದ ತುಲನೆ

    ಅರಕೇರಾ: ಬಡವರಿಗೆ ಆರ್ಥಿಕ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶನಿವಾರ ಆಶೀರ್ವಚನ ನೀಡಿದರು. ಯಾರದೇ ವ್ಯಕ್ತಿತ್ವವನ್ನು ಅವರು ಮಾಡುವ ಸಾಮಾಜಿಕ ಕಾರ್ಯಗಳಿಂದ ಅಳೆಯಬಹುದು ಎಂದರು. ಗೊಲ್ಲಪಲ್ಲಿ ವಾಲ್ಮೀಕಿ ಗುರುಪೀಠದ ವರದಾನೇಶ್ವರ ಸ್ವಾಮೀಜಿ ಮಾತನಾಡಿ, ದುಂದು ವೆಚ್ಚ ಕಡಿವಾಣ ಹಾಕಲು ಸಾಮೂಹಿಕ ವಿವಾಹಗಳು ಶ್ರೀರಕ್ಷೆಯಾಗಿವೆ. ಸಾಧು, ಸಂತರು, ಶರಣರ ಆಶೀರ್ವಾದಿಂದ ನಡೆಯುವ ಸಾಮೂಹಿಕ ವಿವಾಹ ಎಂದಿಗೂ ಶ್ರೀಮಂತ ಎಂದರು.

    ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ ಮಾತನಾಡಿ, 15 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು ಎಂದರು. ಪ್ರಮುಖರಾದ ಸತ್ಯನಾರಾಯಣ ನಾಯಕ ಪೊ.ಪಾ, ತಿಮ್ಮಪ್ಪ ನಾಯಕ ಪೊ.ಪಾ, ರವಿ ಪಾಟೀಲ್, ಸೀತಣ್ಣ ನಾಯಕ ಗುರಿಕಾರ, ವಿರುಪಣ್ಣ ನಾಯಕ ದೊರೆ, ಬಸವರಾಜ ಕ್ವಾಟೆ ದೊರೆ, ಬೂದೆಪ್ಪ ಸಾಹುಕಾರ, ಬಸವರಾಜ ಮಾಲಿ ಪಾಟೀಲ್, ಚಂದ್ರಕಾಂತ ಶೆಟ್ಟಿ, ಸಿದ್ದಾರ್ಥ ಹವಲ್ದಾರ್, ಸಲೀಂ ಜಾನಿ, ಲಕ್ಕಪ್ಪ ಗೌಡ ಚಿಂಚೋಡಿ, ಸಿದ್ದಣ್ಣ ದೊಂಡಂಬಳಿ, ಮಹಾಂತೇಶ ಪೂಜಾರಿ, ನಾಗಯ್ಯ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts