More

    ಗ್ರಾಮೀಣಾಭಿವೃದ್ಧಿಗೆ ಯೂಟ್ಯೂಬ್ ವಾಹಿನಿ ಆರಂಭಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ

    ಧರ್ಮಸ್ಥಳ: ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶೃದ್ಧಾ ಅಮಿತ್ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್​​ಕೆಡಿಆರ್​ಡಿಪಿ) ಟ್ರಸ್ಟ್ ಮಾಹಿತಿ ಪ್ರಸಾರಕ್ಕಾಗಿ ಯೂಟ್ಯೂಬ್​​ ವಾಹಿನಿ ಆರಂಭಿಸಿದೆ.

    ಸದಸ್ಯರ ಆರ್ಥಿಕ ಸಬಲೀಕರಣದ ಜತೆಗೆ ಅವರ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ವೈಯಕ್ತಿಕ ಅಭಿವೃದ್ಧಿಗೆ ವಿವಿಧ ಮೂಲಗಳಿಂದ ಮಾಹಿತಿಯನ್ನು ಒದಗಿಸುವ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ನಿರಂತರ ಪ್ರಗತಿ ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದೆ. ಅನುಭವಿಕ ಸಂಪನ್ಮೂಲ ವ್ಯಕ್ತಿಗಳಿಂದ ಮಹಿಳೆಯರಿಗೆ ಮಾಹಿಸಿ ಒದಗಿಸಲು ಸಭೆ, ವಿಚಾರ ಸಂಕಿರಣ ಹಮ್ಮಿಕೊಳ್ಳುತ್ತಿದೆ.
    ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಖೆಯರು ಕೇಂದ್ರ ಸಮಿತಿಯಿಂದ ತಮ್ಮ ದೈನದಿಂದ ಬದುಕಿಗೆ ಸಹಾಯವಾಗುವ ಮಾಹಿತಿ ಸಂಗ್ರಹಿಸಬಹುದಾಗಿದೆ. ಈ ಎಲ್ಲ ಬಹುವಿಧ ಕಾರ್ಯಕ್ರಮಗಳ ವಿಸ್ತೃತ ಭಾಗವೇ ಯೂಟ್ಯೂಬ್ ಚಾನೆಲ್ ಆಗಿದೆ.

    ಇದನ್ನೂ ಓದಿ; ಅಂತಿಮ ವರ್ಷ, ಸೆಮಿಸ್ಟರ್​ ಪರೀಕ್ಷೆಗಳು ರದ್ದುಗೊಳಿಸಿದ ವಿವಿ

    ಮಾಹಿತಿಯನ್ನು ಪರಿಷ್ಕರಿಸಿ ಮಹಿಳೆಯರಿಗೆ ಅತ್ಯಗತ್ಯವಾದ ಮತ್ತು ಅವರಿಗೆ ಸಂಬಂಧಿಸಿದ ಮಾಹಿತಿ ಲಭ್ಯವಾಗುವಂತೆ ಯೂಟ್ಯೂಬ್ ಚಾನೆಲ್ ಮಾಡುತ್ತದೆ. ಈ ಮೂಲಕ ಎಸ್​​ಡಿಎಂನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿರುವ ಸಂಪನ್ಮೂಲ ಸಾಮಗ್ರಿಯನ್ನು ಅದರ ಸದಸ್ಯರಿಗೆ ಒದಗಿಸುತ್ತದೆ. ಸಮಾಲೋಚನೆ, ಮಕ್ಕಳ ಮಾನಸಿಕ ಅಭಿವೃದ್ಧಿ ವಿಷಯ ಸೇರಿ ಗ್ರಾಮೀಣ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳನ್ನು ಒದಗಿಸಲಾಗುತ್ತದೆ.

    ಕರೊನಾ ವೈರಸ್​​ ನ ಈ ಸಮಯದಲ್ಲಿ ವೈಯಕ್ತಿಕ ನೈರ್ಮಲ್ಯ, ಸಾಮಾಜಿಕ ಅಂತರ ನಿಯಮಾವಳಿಗಳಿಗೆ ಸಂಬಂಧಿಸಿ ವಿಷಯಗಳು, ಯೋಗಾಸನ, ಸಾವಯವ ಗೊಬ್ಬರ ತಯಾರಿಕೆಯ ಕಿರು ವಿಡಿಯೋಗಳು, ಸರ್ಕಾರದ ಯೋಜನೆಗಳು ಇತ್ಯಾದಿ ವಿಷಯಗಳನ್ನು ಚಾನೆಲ್ ಮೂಲಕ ನೀಡಲಾಗುತ್ತದೆ.

    ಇದನ್ನೂ ಓದಿ; ಮಗಳ ಮದುವೆಯಲ್ಲಿ ಕೇರಳ ಸಿಎಂಗೆ ಮುಜುಗರ; ಗೃಹ ಇಲಾಖೆ ವೈಫಲ್ಯ ಪಕ್ಷಕ್ಕೂ ಕಿರಿಕಿರಿ

    ವೀರೇಂದ್ರ ಹೆಗ್ಗಡೆ ಹಾಗೂ ಅವರ ಪತ್ನಿ ಹೇಮಾವತಿ ಹೆಗ್ಗಡೆ ಈ ಚಾನೆಲ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಎಸ್​ಕೆಡಿಆರ್​ಡಿಪಿ ಬಿಸಿ ಟ್ರಸ್ಟ್​​​ನ ಹಿರಿಯ ಅಧಿಕಾರಿಗಳು ಹಾಜರಿದ್ದರು.

    ಕರೊನಾದ ಸಾವಿನ ಕುಣಿಕೆಯಿಂದ ಪಾರು ಮಾಡುತ್ತಿದೆ ಈ ಔಷಧ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts