More

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವೆ ಶ್ಲಾಘನೀಯ

    ಘಟಪ್ರಭಾ: ರೈತರ ಮತ್ತು ಬಡಜನರಿಗೆ ಪೂರಕವಾಗುವಂತಹ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವೆ ಶ್ಲಾಘನೀಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಚಾಲಕ ಗಣಪತಿ ಇಳಿಗೇರ ಹೇಳಿದ್ದಾರೆ.

    ಸಮೀಪದ ಅರಬಾವಿ ಗ್ರಾಮದ ವಿಠ್ಠಲ-ರುಕ್ಮೀಣಿ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಯೋಜನೆಯಡಿ ಅಂಗವಿಕಲರಿಗೆ ವೀಲ್‌ಚೇರ್(ಯಂತ್ರೋಪಕರಣ) ಹಾಗೂ ಪ್ರಾಕೃತಿಕ ವಿಕೋಪ ಪರಿಹಾರ ಯೋಜನೆಯಡಿ ಸಹಾಯಧನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

    ಯೋಜನೆಯ ತಾಲೂಕು ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಆರ್ಥಿಕವಾಗಿ ಸ್ವಾವಲಂಬನೆ ಜೀವನ ನಡೆಸಲು ಮುಂದೆ ಬರುವವರಿಗೆ ಧರ್ಮಸ್ಥಳ ಸಂಸ್ಥೆ ಆರ್ಥಿಕ ನೆರವು ನೀಡುತ್ತಿದ್ದು, ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು. ಒಕ್ಕೂಟದ ಅಧ್ಯಕ್ಷೆ ಮಂಜುಳಾ ಬಡಿಗೇರ, ವಿಠ್ಠಲ ಕರೋಶಿ, ಯೋಜನಾಧಿಕಾರಿ ಮಮತಾ ನಾಯ್ಕ, ಮೇಲ್ವಿಚಾರಕ ರಾಜೇಶ ನಾಯ್ಕ, ಕೃಷಿ ಮೇಲ್ವಿಚಾರಕ ಸುರೇಶ ಇದ್ದರು. ಯಲ್ಲಪ್ಪ ತಹಸೀಲ್ದಾರ್, ಲಕ್ಷ್ಮೀ ಕುಂದರಗಿ, ರಮೀಜಾಬಿ ಸಂಗೊಳ್ಳಿ, ಲಕ್ಷ್ಮೀ ಪೊಲೀಸ್ ಅವರಿಗೆ ವೀಲ್‌ಚೇರ್ ಹಾಗೂ ಮಂಜುಳಾ ಮ್ಯಾಗೇರಿ ಅವರಿಗೆ 10 ಸಾವಿರ ರೂ. ಸಹಾಯಧನದ ಚೆಕ್ ವಿತರಿಸಲಾಯಿತು. ಕಲಾವತಿ ಸ್ವಾಗತಿಸಿದರು. ಪ್ರಕಾಶ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts