More

    ಧರ್ಮದ ದಾರಿಯಲ್ಲಿ ಸಾಗಿದರೆ ನೆಮ್ಮದಿ

    ಹುಕ್ಕೇರಿ: ಮನುಷ್ಯ ಧರ್ಮದ ದಾರಿಯನ್ನು ಎಂದಿಗೂ ತಪ್ಪಬಾರದು. ಅಧರ್ಮದಲ್ಲಿ ನಡೆದರೆ ಜೀವನದಲ್ಲಿ ಸುಖ ಶಾಂತಿ ಲಭಿಸುವುದಿಲ್ಲ. ಪ್ರತಿಯೊಬ್ಬರೂ ಸಿದ್ಧಾರೂಢರ ತತ್ತ್ವಾದರ್ಶಗಳನ್ನು ಪಾಲಿಸಬೇಕು ಎಂದು ಬಾಗಲಕೋಟೆ ರಾಮಾರೂಢಾಶ್ರಮದ ಪರಮರಾಮಾರೂಢ ಸ್ವಾಮೀಜಿ ಹೇಳಿದ್ದಾರೆ.

    ಅವರು ಶುಕ್ರವಾರ ತಾಲೂಕಿನ ಝಂಗಟಿಹಾಳ ಗ್ರಾಮದಲ್ಲಿ ಜಗದ್ಗುರು ಶ್ರೀ ಸಿದ್ಧಾರೂಢ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಸದ್ಗುರು ಶ್ಯಾಮಾನಂದ ಮಹಾ ಸ್ವಾಮೀಜಿಯವರ ಆಗಮನದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬೀದರ ಜಿಲ್ಲೆ ಮುಚಳಂಬಾದ ನಾಗಭೂಷಣ ಶಿವಯೋಗಿ ಮಠದ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಝಂಗಟಿಹಾಳ ಗ್ರಾಮ ಚಿಕ್ಕದಾದರೂ ಇಲ್ಲಿನ ಜನರ ಭಕ್ತಿ ದೊಡ್ಡದಾಗಿದೆ. ಎಲ್ಲರೂ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಧರ್ಮ ತಾಂಡವವಾಡುವಾಗ ಮನುಷ್ಯ ಹತಾಶನಾಗಬಾರದು. ಭೂಮಿಯ ಮೇಲೆ ಅಧರ್ಮವೇ ಹೆಚ್ಚಾಗಿದೆ. ಶ್ರೀ ಸಿದ್ಧಾರೂಢರು ತಮ್ಮ ಜೀವನದುದ್ದಕ್ಕೂ ಸಮಾಜ ಸುಧಾರಣೆಗೆ ಶ್ರಮಿಸಿದರು ಎಂದರು.

    ದೇವರ ಹುಬ್ಬಳ್ಳಿಯ ಸಿದ್ಧಾರೂಢಾಶ್ರಮದ ಸಿದ್ಧ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿದರು. ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ, ಗೋಕಾಕದ ಅತ್ಯಾನಂದ ಸ್ಮಾಮೀಜಿ, ಹರಳಕಟ್ಟಿ ಶಿವಾನಂದ ವಿದ್ಯಾಶ್ರಮದ ನಿಜಗುಣ ದೇವರು, ಝಂಗಟಿಹಾಳದ ಯಲ್ಲಾಲಿಂಗ ಮಠದ ಚಂದ್ರಶೇಖರ ಮಹಾರಾಜರು, ಗುಡಸ ಸಿದ್ಧಾರೂಢ ಮಠದ ಈಶ್ವರಾನಂದ ಸ್ವಾಮೀಜಿ ಸೇರಿ ಇತರ ಶರಣರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ವಿವಿಧ ಶ್ರೀಗಳು ಶ್ರೀಮಠದ ಮಹಾದ್ವಾರ ಉದ್ಘಾಟಿಸಿದರು. ಸಂಜೆ ದಾತಾ ಭವತಿ ವಾ ನವಾ ಎಂಬ ವಿಷಯದ ಕುರಿತು ವಿವಿಧ ಶ್ರೀಗಳು ಪ್ರವಚನ ನೀಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಕಾರ್ಯಕ್ರಮ ಉದ್ಘಾಟಿಸಿದರು.

    ಬಿಜೆಪಿ ಮುಖಂಡ ಅಂಬಿರಾವ ಪಾಟೀಲ, ಕೆ.ಎಂ.ಎಫ್. ನಿರ್ದೇಶಕ ಅಮರನಾಥ ಜಾರಕಿಹೊಳಿ, ಜಿ.ಪಂ. ಸದಸ್ಯ ಪವನ ಕತ್ತಿ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಮರಡಿ ಅತಿಥಿಗಳಾಗಿ ಆಗಮಿಸಿದ್ದರು. ಜಾತ್ರಾ ಕಮಿಟಿ ಅಧ್ಯಕ್ಷ ಲಗಮಪ್ಪ ನಾಯಿಕ, ಉಪಾಧ್ಯಕ್ಷ ಬಸವಣ್ಣಿ ಲ ನಾಯಿಕ, ಸದಸ್ಯರಾದ ಮಾರುತಿ ಮಗದುಮ್ಮ, ಶಶಿಧರ ಬಡಿಗೇರ, ಸತ್ಯಪ್ಪ ಸಾ.ಪಾಟೀಲ, ಲಕ್ಷ್ಮೀಬಾಯಿ ನಾಯಿಕ, ನಾಗಪ್ಪ ನಾಯಿಕ, ಬಸವರಾಜ ಪಾಟೀಲ, ಶಿವಲಿಂಗ ಹಟ್ಟಿ, ಭೀಮಪ್ಪ ಮಗದುಮ್ಮ, ಬಸವರಾಜ ಮಗದುಮ್ಮ, ಚಂದ್ರಪ್ಪ ನಾಯಿಕ, ಶಾಂತೇಶ್ವರ ತೇಲಿ, ರವಿ ಮಗದುಮ್ಮ, ಜಗದೀಶ ಮಗದುಮ್ಮ, ಯಲ್ಲಪ್ಪ ಮಿಶ್ಯಾಳಿ, ಕಾಮಣ್ಣ ಚನ್ನಯ್ಯಗೋಳ, ಶಿವಬಾಳಪ್ಪ ತೇಲಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts