More

    ಧಾರವಾಡ ಕೃಷಿ ಮೇಳದಲ್ಲಿ ಮಿಡತೆ ಫ್ರೈ, ರೇಶ್ಮೆ ಹುಳದ ಬರ್ಗರ್! ವಿನೂತನ ಪ್ರದರ್ಶನದ ಬಗ್ಗೆ ಕೀಟ ತಜ್ಞರು ಹೇಳುತ್ತಿರುವುದು ಏನು?

    ಧಾರವಾಡ: ಪೂರ್ವ ಏಷ್ಯಾ, ಅಂದರೆ ಚೀನಾ, ಥಾಯ್ಲೆಂಡ್, ಕೊರಿಯಾ ದೇಶಗಳಲ್ಲಿ ಹಾಗೂ ಆಫ್ರಿಕಾ ಖಂಡದ ಅನೇಕ ಬುಡಕಟ್ಟು ಜನಾಂಗಗಳು ನಾನಾ ರೀತಿಯ ಕೀಟಗಳನ್ನೂ ಭಕ್ಷ್ಯದ ರೀತಿ ಸೇವಿಸುತ್ತಾರೆ. ಕೆಲವರು ಕರಿದು ತಿಂದರೆ ಇನ್ನೂ ಕೆಲವರು ಹುರಿದು ತಿನ್ನುತ್ತಾರೆ. ಕೆಲ ಕೀಟಗಳನ್ನು ಹಸಿ ಹಸಿಯಾಗಿಯೇ ತಿನ್ನುತ್ತಾರೆ. ಇದೀಗ ಧಾರವಾಡದ ಕೃಷಿ ಮೇಳದಲ್ಲೂ ಕೀಟಗಳಿಂದ ತಯಾರಿಸಿದ ಭಕ್ಷ್ಯಗಳು ಎಂಟ್ರಿ ಕೊಟ್ಟಿದ್ದು, ತಜ್ಞರು ಟ್ರೈ ಮಾಡಿ ನೋಡಿ. ಏನೂ ಆಗಲ್ಲ ಎನ್ನುತ್ತಿದ್ದಾರೆ.

    ಮೂಡಿಸುತ್ತಿದೆ ಧಾರವಾಡ ಕೃಷಿ ಮೇಳದಲ್ಲಿನ ಒಂದು ಪ್ರದರ್ಶನ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದು ಮನುಷ್ಯರು ಕೀಟಗಳನ್ನೇ ಫ್ರೈ ಮಾಡಿ ತಿನ್ನಬಹುದಾ? ಚೀನಿಯರಂತೆ ಭಾರತೀಯರು ಜಿರಲೆ ತಿಂದ್ರೆ ಏನೂ ಆಗೋಲ್ವಾ? ಮುಂದೊಂದು ದಿನ ಕೀಟಗಳ ಭಕ್ಷ್ಯವನ್ನೇ ತಿನ್ನಬೇಕಾಗುತ್ತಾ? ಎಂಬಂತ ಪ್ರಶ್ನೆಗಳನ್ನು ನೋಡುಗರಲ್ಲಿ ಹುಟ್ಟು ಹಾಕುತ್ತದೆ.

    ಕೃಷಿ ವಿವಿಯ ಕೀಟ ಶಾಸ್ತ್ರ ವಿಭಾಗದಿಂದ ವಿನೂತನ ಪ್ರಯೋಗ ನಡೆಯುತ್ತಿದ್ದು  ಇಲ್ಲಿ ವಿವಿಧ ಕೀಟಗಳ 15 ಭಕ್ಷ್ಯಗಳು ಪ್ರದರ್ಶನಕ್ಕಿವೆ. ಪ್ರದರ್ಶನ ವಿವರಿಸಲು ನಿಂತಿರುವ ಕೀಟ ತಜ್ಞರು “ತಿಂದು ನೋಡಿ ಏನೂ ಆಗೋಲ್ಲಾ” ಎಂದು ಜನರನ್ನು ಹುರಿದುಂಬಿಸುತ್ತಿದ್ದಾರೆ. ಆದರೆ ಕೀಟದ ಅಹಾರ ನೋಡಿ ಜನ ಮಾತ್ರ ಶಾಕ್ ಆಗುತ್ತಿದ್ದಾರೆ.

    ಯಾವ್ಯಾವ ಹುಳದ್ದು ಏನೇನು ಖಾದ್ಯ?

    ಕೀಟಗಳ ಪನ್ನೀರ ಟಿಕ್ಕಾ

    ಮಿಡತೆ ಹಾಗೂ ಜಿರಳೆ ಫ್ರೈ, ಮಿಡತೆ ಮಸಾಲಾ, ರೇಷ್ಮೆ ಕೋಶದ ಸೂಪ್, ರೇಷ್ಮೆ ಹುಳುಗಳ ಬರ್ಗರ್, ಕೀಟಗಳ ಪನ್ನೀರ ಟಿಕ್ಕಾ ಸೇರಿದಂತೆ ವಿವಿಧ ಪದಾರ್ಥಗಳ ಪ್ರದರ್ಶನ ಇಲ್ಲಿ ನಡೆಯುತ್ತಿದೆ.

    ರೇಷ್ಮೆ ಕೋಶದ ಸೂಪ್
    ಜಿರಳೆ ಫ್ರೈ
    ರೇಷ್ಮೆ ಕೋಶದ ಡ್ರೈ ಚಿಲ್ಲಿ

    ಮಾಂಸಾಹಾರದ ಥರನೇ ಇರುತ್ತೆ ಪೌಷ್ಟಿಕಾಂಶ!

    ಈ ಹುಳಗಳು ಕೂಡ ಮಾಂಸಾಹಾರದ ರೀತಿಯೇ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಪ್ರೋಟಿನ್ ವಿಟಾಮಿನ್‍ಗಳೇ ತುಂಬಿರುವ ಕೀಟಗಳು ಆರೋಗ್ಯಕ್ಕೆ ಪೂರಕ ಎನ್ನುತ್ತಿದ್ದಾರೆ ಕೀಟ ತಜ್ಞರು. ಇದೇ ಕಾರಣಕ್ಕಾಗಿ ಚೀನಾ, ಥಾಯ್ಲೆಂಡ್, ಕೋರಿಯಾ ದೇಶಗಳ ಜನ ಸೇವಿಸುವ ಪದಾರ್ಥಗಳಲ್ಲಿ ಕೀಟಗಳೂ ಇರುತ್ತವೆ. ಭಾರತೀಯರು ಸೇವಿಸಿದರೂ ಸಮಸ್ಯೆ ಆಗಲಾರದು ಎಂದು ಕೀಟ ತಜ್ಞರು ಹೇಳಿದ್ದಾರೆ. 
    ಫೋಟೋ ಕೃಪೆ: ಶಿವಲಿಂಗ ಪಾಟೀಲ, ವಿಜಯವಾಣಿ ಫೋಟೊಗ್ರಾಫರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts