More

    ಧನ್ವಂತರಿ: ಆತ್ಮಬಲವೊಂದಿದ್ದರೆ ಸಾಕು ನೋಡಿ..

    ಧನ್ವಂತರಿ: ಆತ್ಮಬಲವೊಂದಿದ್ದರೆ ಸಾಕು ನೋಡಿ..ಧನ್ವಂತರಿ: ಆತ್ಮಬಲವೊಂದಿದ್ದರೆ ಸಾಕು ನೋಡಿ..ಜೀವನದಲ್ಲಿ ಅನೇಕ ಬಾರಿ ದೊಡ್ಡದಾದ ಸಂಕಷ್ಟ ಎದುರಾದರೆ ಮನಸ್ಸೇ ಮಂಕಾಗಿ ಆತ್ಮವು ಅಧೀರವಾಗುವುದಿದೆ. ಆತ್ಮಬಲ ಚೆನ್ನಾಗಿದ್ದರೆ ಭೀಕರವಾದ ರೋಗವಿರಲಿ, ಅದೆಂತಹ ಘಟನಾವಳಿಯೇ ಇರಲಿ ಏನನ್ನಾದರೂ ಗೆಲ್ಲಬಹುದು ಎಂದು ತೋರಿಸಿಕೊಟ್ಟ ಒಂದು ನೈಜ ಘಟನೆ.
    ಅದು ಮಲೆನಾಡು ಪ್ರದೇಶದ ಕೃಷಿ ಕುಟುಂಬ. ಐವತ್ತರ ಹರೆಯದ ತಾಯಿಗೆ ಸ್ತನದಲ್ಲಿ ಗಡ್ಡೆ ಬೆಳೆದು ಬೆಂಗಳೂರು ಹಾಗೂ ಮುಂಬಯಿಯ ವಿಖ್ಯಾತ ಆಸ್ಪತ್ರೆಗಳಲ್ಲಿ ಪರೀಕ್ಷಿಸಲಾಗಿ ಬೆಳೆದು ನಿಂತ ಕ್ಯಾನ್ಸರ್ ಎಂಬುದು ದೃಢಪಟ್ಟಿತು. ಹೆಚ್ಚು ದಿನ ಬದುಕುವುದು ಸಾಧ್ಯವಿಲ್ಲ ಎಂಬುದಾಗಿ ವೈದ್ಯರೂ ಅಂದಿದ್ದರು. ಸುಮಾರು ಮೂವತ್ತೈದು ವರ್ಷಗಳ ಹಿಂದೆ ಇದರ ಚಿಕಿತ್ಸೆ ಸುಲಭ ಸಾಧ್ಯವಾಗಿರಲಿಲ್ಲ. ಲಕ್ಷಾಂತರ ರೂಪಾಯಿಗಳ ಆವಶ್ಯಕತೆಯಿತ್ತು. ಈಗಿನಂತೆ ವಿಮಾ ಸೌಲಭ್ಯವಾಗಲೀ, ಸಾಲದ ವ್ಯವಸ್ಥೆಯಾಗಲೀ ಇರದಿದ್ದ ಕಾಲವದು. ದುಡಿಯುತ್ತಿದ್ದ ಮಕ್ಕಳಿಗೆ ತಾಯಿಯೇ ಮೊದಲ ದೇವರು. ಹಾಗೂ ಹೀಗೂ ಕಷ್ಟಪಟ್ಟು ಚಿಕಿತ್ಸೆಗೆ ಎಲ್ಲ ಏರ್ಪಾಡುಗಳನ್ನೂ ಮಾಡಲು ಮುಂದಾದರು. ಆಗ ಆ ತಾಯಿ ಹೇಳಿದ್ದಿಷ್ಟೇ, ‘ನನಗೆ ಜೀವನದಲ್ಲಿ ಸಿಗಬೇಕಾದ ಎಲ್ಲವೂ ಸಿಕ್ಕಿದೆ. ನನ್ನನ್ನು ನೀವೆಲ್ಲರೂ ಚೆನ್ನಾಗಿ ನೋಡಿಕೊಂಡಿದ್ದೀರಿ. ಹಾಗಾಗಿ ನಾನು ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಇನ್ನಾವುದೇ ರೀತಿಯ ಚಿಕಿತ್ಸೆಗೆ ಸಿದ್ಧಳಿಲ್ಲ.’ ಹೀಗೆಂದು ತಾಯಿ ಖಚಿತವಾಗಿ ನುಡಿದಾಗ ಯುವ ಮಕ್ಕಳಿಗೆ ದಿಕ್ಕು ತೋಚಲಿಲ್ಲ. ಹಾಗೆಯೇ ಸುಮ್ಮನಾದರು.

    ಧನ್ವಂತರಿ: ಆತ್ಮಬಲವೊಂದಿದ್ದರೆ ಸಾಕು ನೋಡಿ..
    ಆಯುರ್ವೆದ, ಅಲೋಪತಿ, ಹೋಮಿಯೋಪತಿ, ಸಿದ್ಧ, ಯೋಗೋಪಚಾರ, ಮನೆಮದ್ದು ಹೀಗೆ ಯಾವುದೇ ವಿಧವಾದ ಚಿಕಿತ್ಸೆಯನ್ನೂ ತಾಯಿ ಮಾಡದೆ ಇರುವುದನ್ನು ಕಂಡ ಮನೆಮಂದಿಗೆಲ್ಲ ಅಚ್ಚರಿಯೂ ಆಯಿತು. ಜವಾಬ್ದಾರಿಯುತ ಗೃಹಿಣಿಯಾಗಿ ತಾಯಿಯು ತನ್ನೆಲ್ಲ ಚಟುವಟಿಕೆಗಳನ್ನು ತದೇಕಚಿತ್ತದಿಂದ ಮಾಡುತ್ತ ಅದರಲ್ಲೇ ಮಗ್ನಳಾದಳು!
    ಅದೇಕೋ ನೋವು ತೀವ್ರವಾಗಿ ಬಾಧಿಸಲಾರಂಭಿಸಿತು. ನನ್ನಲ್ಲಿಗೆ ಅವರ ಮಕ್ಕಳು ಬಂದು ಚಿಕಿತ್ಸೆಯ ಕುರಿತು ವಿಚಾರಿಸಿದರು. ನಾನು ಅರ್ಬುದಗಳಿಗೆ ಚಿಕಿತ್ಸೆ ನೀಡುವುದೇ ಕಡಿಮೆ. ಒಲ್ಲೆ ಎಂದೆ. ಕೆಲವು ದಿನಗಳ ಬಳಿಕ, ‘ಚಿಕಿತ್ಸೆ ಪಡೆಯುವುದಿದ್ದರೆ ನಿಮ್ಮಲ್ಲಿ ಮಾತ್ರ ಎನ್ನುತ್ತಿದ್ದಾರೆ. ಕರೆದುಕೊಂಡು ಬರಬಹುದೇ?’ ಎಂದು ಒತ್ತಾಯಪಡಿಸಿದಾಗ ಆಯಿತೆಂದೆ. ತಾಯಿ ಬಂದು ಎದುರು ಕೂತಾಗ ಹೊರಗಿನಿಂದಲೇ ಕಾಣುವಷ್ಟು ಆರೇಳು ಸೆಂಟಿಮೀಟರ್ ಗಾತ್ರದ ಅರ್ಬುದವದು. ಕೆಳಗೆ ಬಗ್ಗಿದರೆ ಅರ್ಬುದವೇ ಸ್ವತಃ ರೋಗಿಗೆ ಕಾಣುವಂಥ ಪರಿಸ್ಥಿತಿ!
    ಎದುರಲ್ಲಿ ಕುಳಿತು ಹಿಂದಿನ ಚಿಕಿತ್ಸಾ ವರದಿಗಳನ್ನೆಲ್ಲ ಮುಂದಿಟ್ಟು ಆಕೆ ಹೇಳಿದ ಮಾತನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ‘ಎಲ್ಲ ವರದಿಗಳು ಕ್ಯಾನ್ಸರ್ ಇವೆ ಎನ್ನುತ್ತವೆ. ಎಲ್ಲ ವೈದ್ಯರೂ ಅದನ್ನೇ ಹೇಳಿದ್ದಾರೆ. ಆದರೆ ನನಗೆ ಕ್ಯಾನ್ಸರ್ ಇದೆಯೆಂದು ನಾನು ನಂಬುವುದಿಲ್ಲ!’ ಅದೆಷ್ಟು ದೃಢ ನಂಬಿಕೆ! ಪರಮಾಶ್ಚರ್ಯವೆಂದರೆ ಆರಂಭದ ವೈದ್ಯಕೀಯ ಪರೀಕ್ಷೆಗಳು ನಡೆದು ನನ್ನ ಬಳಿ ಬಂದಾಗ ಬರೋಬ್ಬರಿ 24 ವರ್ಷಗಳಾಗಿತ್ತು!
    ಆಕೆಗಾಗ ಸುಮಾರು 75 ವರ್ಷದ ಪ್ರಾಯ! ಅತಿ ವೇಗವಾಗಿ ಚಲಿಸುತ್ತಿದ್ದ ಕಾರನ್ನು ಕೇವಲ ಒಂದಡಿ ಅಂತರ ಇರುವಾಗ ಬ್ರೇಕ್ ಹಾಕಿ ನಿಲ್ಲಿಸಿ ಅಪಘಾತವನ್ನು ತಡೆದಂತಹ ಪವಾಡಸದೃಶ ಘಟನೆ! ಕ್ಯಾನ್ಸರ್ ಇಲ್ಲವೆಂಬುದು ಆಕೆಯ ಅಂತರಂಗದ ಬಲವಾದ ನುಡಿ. ಮತ್ತೆರಡು ವರ್ಷ ಒದ್ದಾಡದೆ ಬದುಕಿದರು! ರೋಗಿಯೊಬ್ಬರಲ್ಲಿ ಕಂಡ ಆತ್ಮಬಲದ ಉತ್ತುಂಗವಿದು. ಎಂಥ ಕಠಿಣ ಪರಿಸ್ಥಿತಿಯಲ್ಲೂ ರೋಗವನ್ನು ತಡೆದು ಗೆಲ್ಲಬಹುದೆಂಬ ಜೀವನೋತ್ಸಾಹದ ಪರಮ ಪಾಠವಿದು.

    ಧನ್ವಂತರಿ: ಆತ್ಮಬಲವೊಂದಿದ್ದರೆ ಸಾಕು ನೋಡಿ..

    ಫಾರಿನ್ ಕಲರ್ ಟಿವಿ ಆಸೆ ಬಿಟ್ಟುಬಿಡಿ: ಇನ್ನೇನಿದ್ರೂ ಮೇಡ್ ಇನ್ ಇಂಡಿಯಾ ಜಮಾನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts