More

    ಧನ್ವಂತರಿ| ಕರೊನಾ ನಿರ್ಮೂಲನ ಎಂದು?

    ಧನ್ವಂತರಿ| ಕರೊನಾ ನಿರ್ಮೂಲನ ಎಂದು?ಒಂದು ಬೃಹದಾಕಾರವಾಗಿ ಬೆಳೆದು ನಿಂತ ಮಾವಿನಮರ. ಜೂನ್ ತಿಂಗಳ ಆರಂಭದ ಸಮಯ. ಆ ಮರದ ತುಂಬ ಪುಟ್ಟದಾದ ಸಾವಿರಾರು ಮಾವಿನಕಾಯಿ, ಹಣ್ಣುಗಳು ತುಂಬಿವೆ. ಜೋರಾಗಿ ಗಾಳಿ ಬೀಸಿ, ಗುಡುಗು, ಸಿಡಿಲುಗಳ ಆರ್ಭಟದೊಂದಿಗೆ ವರ್ಷದ ಮೊದಲ ಮಳೆ ಸುರಿದಿದೆ. ಮಳೆನೀರಿಗಿಂತಲೂ ಗಾಳಿಯೇ ಹೆಚ್ಚಾಗಿರುತ್ತದೆ. ಮಾವಿನಮರದಲ್ಲಿದ್ದ ನೂರಾರು ಹಣ್ಣುಗಳು, ಕೆಲವೊಂದು ಬೆಳೆದ ಕಾಯಿಗಳು, ಇನ್ನು ಕೆಲವು ಇನ್ನೂ ಬೆಳೆದಿರದ ಪುಟ್ಟ ಮಾವಿನಮಿಡಿಗಳು ಎಲ್ಲವೂ ನೆಲಕ್ಕೆ ಅಪ್ಪಳಿಸಿಬಿಟ್ಟಿರುತ್ತವೆ!

    ಕೆಲವು ದಿನಗಳ ಬಳಿಕ ಮತ್ತೆ ಇನ್ನಷ್ಟು ಜೋರಾಗಿ ಗಾಳಿಯೊಂದಿಗೆ ಮಳೆ ಹೊಯ್ಯುತ್ತದೆ. ಮರದಲ್ಲಿ ಇನ್ನೂ ಸಾಕಷ್ಟು ಸಂಖ್ಯೆಯಲ್ಲಿ ಮಾವಿನಹಣ್ಣು, ಕಾಯಿಗಳಿದ್ದರೂ ಕೆಲವೇ ಕೆಳಗೆ ಬೀಳುತ್ತವೆ! ಒಂದು ಸಾಂಕ್ರಾಮಿಕ ರೋಗ ಬಂದಾಗಲೂ ನಡೆಯುವುದು ಇದುವೇ!

    ಆರಂಭದಲ್ಲಿ ಆ ಸೂಕ್ಷ್ಮ ವೈರಾಣುವಿನ ಅಬ್ಬರ ತಡೆಯಲಾರದ ವ್ಯಕ್ತಿಗಳು ಬಲುಬೇಗನೆ ಕಾಯಿಲೆಗೆ ಒಳಗಾಗುತ್ತಾರೆ. ಕೆಲವರು ಜೀವವನ್ನೂ ತೊರೆಯುತ್ತಾರೆ. ಅವರಲ್ಲಿ ಹೆಚ್ಚಿನವರಿಗೂ ರೋಗನಿರೋಧಕ ಶಕ್ತಿ ಕಡಿಮೆ ಇದ್ದಿರಬಹುದು. ಧನ್ವಂತರಿ| ಕರೊನಾ ನಿರ್ಮೂಲನ ಎಂದು?ಬೇರೆ ರೋಗಗಳಿದ್ದೂ ಪರಿಸ್ಥಿತಿ ಹದಗೆಟ್ಟಿರಬಹುದು. ಇದಕ್ಕೆ ಅಪವಾದವಾಗಿ ಕೆಲವೊಮ್ಮೆ ಪುಟ್ಟ ಮಕ್ಕಳಿಗೂ, ಗಟ್ಟಿದೇಹದ ಯುವಕರಿಗೂ ಬಂದುಬಿಡಬಹುದು. ಇದರ ಬಳಿಕ ಬರುವ ಗಾಳಿಮಳೆಯ ಪರಿಸ್ಥಿತಿಯೇ ಭಿನ್ನವಾಗಿರುತ್ತದೆ. ಅದರಂತೆ ವೈರಾಣುವಿಗೂ ಕಷ್ಟಗಳಿರುತ್ತವೆ. ಹಲವಾರು ಮಳೆ ಬಿದ್ದ ನಂತರ ಕೊನೆಯಲ್ಲೊಮ್ಮೆ ಬರುವ ಇಂತಹ ಗಾಳಿಮಳೆಗೆ ಯಾವ ಮಾವಿನಕಾಯಿ, ಹಣ್ಣುಗಳೂ ಬೀಳದೆ ಗಟ್ಟಿಯಾಗಿ ಮರದಲ್ಲೇ ಕುಳಿತಿರುತ್ತವೆ!

    ಅಪರೂಪದಲ್ಲಿ ಒಂದೆರಡು ಬೀಳಬಹುದು. ಇದನ್ನೇ ಸಾಮೂಹಿಕ ವ್ಯಾಧಿಕ್ಷಮತ್ವ ಅಥವಾ ವ್ಯಾಪಕವಾಗಿ ರೋಗನಿರೋಧಕ ಶಕ್ತಿ ಪ್ರಬಲವಾಗಿರುವ ಸಮಯ ಎನ್ನಬಹುದು. ಇದು ಆ ನಿರ್ದಿಷ್ಟವಾದ ರೋಗಾಣುವಿಗಷ್ಟೇ ಸಂಬಂಧಿಸಿರುತ್ತದೆ. ಬೇರೆ ರೋಗಗಳು ಬರಬಾರದೆಂದೇನೂ ಇಲ್ಲ.

    ಒಮ್ಮೆ ಸಾಂಕ್ರಾಮಿಕವಾಗಿ ಅನೇಕ ದೇಶಗಳಲ್ಲಿ ಹೆಚ್ಚುವ ರೋಗ ತಕ್ಷಣದಲ್ಲಿ ಸಂಪೂರ್ಣವಾಗಿ ನಿಮೂಲನವಾಗಿರುವ ನಿದರ್ಶನಗಳಿಲ್ಲ. ಹನ್ನೊಂದು ವರ್ಷಗಳ ಹಿಂದೆ ಬಂದ ಎಚ್1 ಎನ್1 ಇನ್ನೂ ಇದೆ! ಹಲವಾರು ವರ್ಷಗಳ ಕೆಳಗೆ ದಾಳಿಯಿಟ್ಟ ಡೆಂಘೀಜ್ವರ, ಚಿಕೂನ್​ಗುನ್ಯಾಗಳು ಇಂದಿಗೂ ಇವೆ. ಕೆಲವು ದಶಕಗಳ ಮೊದಲು ಬಾಧಿಸಿದ ಹೆಪಟೈಟಿಸ್ ಬಿ ಇನ್ನೂ ತೊಲಗಿಲ್ಲ. ಆದರೆ ಹಬ್ಬುವ ರೀತಿ, ಜೀವ ತೆಗೆಯುವ ಪ್ರಮಾಣ ಎರಡೂ ಕಡಿಮೆಯಾಗಿ ವೈರಾಣು ದುರ್ಬಲವಾಗಿರುತ್ತದೆ. ಜನರಿಗೂ ರೋಗದ ಅಭ್ಯಾಸ ಆಗಿರುತ್ತದೆ. ಜಾಗೃತಿ, ಜಾಗ್ರತೆ ಎರಡೂ ತುಸು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಜನರ ಲಕ್ಷ್ಯ ಇನ್ನೊಂದು ಹೊಸ ಕಾಯಿಲೆಯೆಡೆಗೆ ಕೇಂದ್ರೀಕೃತವಾಗಿರುತ್ತದೆ.

    ಹಾಗೆಂದು ಹೆಚ್ಚು ಜನಸಂಪರ್ಕದಲ್ಲಿರುವ, ಸೋಂಕಿತ ರೋಗಿಗಳೊಂದಿಗೆ ನಿಕಟವಾಗಿ ಬೆರೆಯುವ ವೈದ್ಯರು, ದಾದಿಯರು, ಪತ್ರಕರ್ತರು, ರಾಜಕಾರಣಿಗಳು, ಆರಕ್ಷಕರು, ಜನಸೇವಕರು ಮೊದಲಾದವರಿಗೆ ಎಷ್ಟು ಬಲವಿದ್ದರೂ ಕಾಯಿಲೆ ಬಂದೆರಗುವ ಸಾಧ್ಯತೆ ಯಾವತ್ತೂ ಇದ್ದೇ ಇದೆ. ಮನಸ್ಸಿನ ಬಲದಿಂದ, ಸಿದ್ಧವಾಗಿರುವ ಶಾರೀರಿಕ ಬಲದಿಂದ, ಹೆಚ್ಚಿನ ಆತ್ಮಸ್ಥೈರ್ಯದಿಂದ ಜನತೆ ರೋಗವನ್ನು ಗೆದ್ದು ಬರುವುದೂ ಅಷ್ಟೇ ನಿಶ್ಚಿತ.

    ಧನ್ವಂತರಿ| ಕರೊನಾ ನಿರ್ಮೂಲನ ಎಂದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts