More

    3.69 ಕೋಟಿ ಫಲಾನುಭವಿಗಳಿಗೆ ಧನಭಾಗ್ಯ ಯೋಜನೆ ಹಣ ಜಮೆ

    ಬೆಂಗಳೂರು:ಧನಭಾಗ್ಯ ಯೋಜನೆಯಡಿ ಬಿಪಿಎಲ್,ಅಂತ್ಯೋದಯ ಕಾರ್ಡ್‌ದಾರರ ಖಾತೆಗೆ ಪ್ರಸ್ತುತ ತಿಂಗಳಿನ 2ನೇ ಕಂತು ಹಣ ಸಂದಾಯವಾಗಿದೆ.

    ಕೋಲಾರ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಡಿಬಿಟಿ ಮುಖೇನ ಹಣ ಪಾವತಿಸಲಾಗಿದೆ.ರಾಜ್ಯಾದ್ಯಂತ 1.03 ಕೋಟಿ ಕಾರ್ಡ್‌ಗಳಿಂದ ಒಟ್ಟು 3.69 ಕೋಟಿ ಫಲಾನುಭವಿಗಳಿಗೆ 605 ಕೋಟಿ ರೂ.ಜೆಮ ಮಾಡಲಾಗಿದೆ.

    ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ವರ್ಗಾವಣೆ ವ್ಯವಸ್ಥೆಯು ರಾಜ್ಯದಲ್ಲಿ ಜು.10ರಿಂದ ಜಾರಿಗೆ ಬಂದಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ (ಎನ್‌ಐಸಿ) ಫಲಾನುಭವಿಗಳ ಮಾಹಿತಿಯನ್ನು ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಡಿಬಿಟಿ ಪೋರ್ಟಲ್ ಹಾಗೂ ಖಜಾನೆ ಇಲಾಖೆಯ ಕೆ2 ಪೋರ್ಟಲ್ ಮೂಲಕ ಬಿಪಿಎಲ್ ಕಾರ್ಡ್‌ನಲ್ಲಿರುವ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ.ನಂತೆ 5 ಕೆಜಿ ಅಕ್ಕಿಗೆ 170 ರೂ.ನಗದು ಹಣವನ್ನು ಡಿಬಿಟಿ ಮುಖೇನ ಕುಟುಂಬದ ಮುಖ್ಯಸ್ಥರ ಖಾತೆಗೆ ಹಾಕಲಾಗತ್ತಿದೆ.

    ಇದನ್ನೂ ಓದಿ:ಪಾಲಿಕೆ ಕಟ್ಟಡಗಳ ಸುರಕ್ಷತಾ ಬಗ್ಗೆ ಮಾಹಿತಿ ಒದಗಿಸಿ:ಬಿಬಿಎಂಪಿ ಸೂಚನೆ

    ಅದೇರೀತಿ, ಅಂತ್ಯೋದಯ ಕಾರ್ಡ್‌ನಲ್ಲಿರುವ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರೂ, ಐದು ಸದಸ್ಯರಿದ್ದರೆ 510 ರೂ, ಆರು ಸದಸ್ಯರಿದ್ದರೆ 850 ರೂ.ಹಣ ಹಾಕಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts