More

    ಈ ಭೂಗತ ಪಾತಕಿಯ ರಕ್ಷಣೆಯೇ ಪೊಲೀಸರಿಗೆ ದೊಡ್ಡ ಸವಾಲು!

    ಬೆಂಗಳೂರು: ಗಣ್ಯರು, ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಬೆದರಿಕೆ ಒಡ್ಡಿ ಹಣ ವಸೂಲಿ ಮಾಡುತ್ತಿದ್ದ ಭೂಗತ ಪಾತಕಿ ರವಿ ಪೂಜಾರಿಗೂ ಜೀವ ಬೆದರಿಕೆ ಇರುವುದರಿಂದ ಆತನ ಮೇಲೆ ಯಾರೂ ದಾಳಿ ನಡೆಸದಂತೆ ಕಾಯುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

    ಹಳೆಯ ದ್ವೇಷಕ್ಕೆ ಅಥವಾ ಹೆಸರು ಮಾಡುವ ಉದ್ದೇಶಕ್ಕೆ ರವಿ ಪೂಜಾರಿ ಮೇಲೆ ಎದುರಾಳಿ ತಂಡದವರು ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚಾಗಿವೆ. ಅದಕ್ಕಾಗಿ ಆತನ ಭದ್ರತೆಗಾಗಿ ನಾಲ್ವರು ಇನ್‌ಸ್ಪೆಕ್ಟರ್‌ಗಳು ಸೇರಿ 30 ಪೊಲೀಸರನ್ನು ನೇಮಿಸಲಾಗಿದೆ. ಎಲ್ಲಿಗೆ ಹೋದರೂ ಸದಾಕಾಲ ಪೊಲೀಸ್ ಭದ್ರತೆಯಲ್ಲಿಯೇ ಕರೆದುಕೊಂಡು ಹೋಗಲಾಗುತ್ತದೆ.

    ಇದನ್ನೂ ಓದಿ: ಇಲ್ಲಿ ಯಾರನ್ನೂ ಉದ್ಧಾರ ಆಗೋಕೆ ಬಿಡಲ್ಲ …

    ರವಿ ಪೂಜಾರಿ ವಿರುದ್ಧ ಒಟ್ಟು 97 ಪ್ರಕರಣಗಳಿವೆ. ಈ ಪೈಕಿ ಬೆಂಗಳೂರಿನಲ್ಲಿ 47, ಮಂಗಳೂರಿನಲ್ಲಿ 39, ಮೈಸೂರು, ಉಡುಪಿ ಸೇರಿದಂತೆ ಒಟ್ಟು 97 ಪ್ರಕರಣಗಳು ದಾಖಲಾಗಿವೆ. ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕ ವಿನಯ್ ಕುಲಕರ್ಣಿ, ಮಾಜಿ ಸಚಿವ ಯು.ಟಿ. ಖಾದರ್ ಸೇರಿ ಇನ್ನಿತರ ಗಣ್ಯರಿಗೆ ಬೆದರಿಕೆ ಕರೆಗಳು ಮಾಡಿದ್ದ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರ, ಗುಜರಾತ್ ಮತ್ತು ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ಕೂಡಾ ಪ್ರಕರಣಗಳಿವೆ.

    ಈ ಮಧ್ಯೆ, ಆತನ ವಿರುದ್ಧ ದಾಖಲಾಗಿರುವ ಎಲ್ಲ 97 ಪ್ರಕರಣಗಳ ತನಿಖೆಯನ್ನು ಸಿಸಿಬಿಗೆ ವಹಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ 2009ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಭೂಗತ ಪಾತಕಿ ರಶೀದ್ ಮಲಬಾರಿ ಪರ ವಕೀಲ ನೌಶಾದ್ ಕೊಲೆ ಪ್ರಕರಣದ ತನಿಖೆಯನ್ನು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಸಿಸಿಬಿಗೆ ವಹಿಸಲಾಗಿದೆ. ಹಂತ ಹಂತವಾಗಿ ಇನ್ನುಳಿದ ಪ್ರಕರಣಗಳನ್ನು ಸಿಸಿಬಿಗೆ ಹಸ್ತಾಂತರಿಸಲು ಡಿಜಿಪಿ ತೀರ್ಮಾನಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಇದನ್ನೂ ಓದಿ ಮದುವೆಗೆ ಸಜ್ಜಾಗುತ್ತಿದ್ದ ಸುಶಾಂತ್​ ಸಿಂಗ್​; ಹೊಸ ಮನೆ ಹುಡುಕಾಟದಲ್ಲಿದ್ದ ಗೆಳತಿ

    ರವಿ ಪೂಜಾರಿ ಪತ್ತೆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂದೀಪ್ ಪಾಟೀಲ್‌ಗೆ ರವಿ ಹಿನ್ನೆಲೆ ಕುರಿತು ಸಮಗ್ರ ಮಾಹಿತಿ ಇದೆ. ಒಂದೇಸಂಸ್ಥೆ ತನಿಖೆ ನಡೆಸಿದರೆ ಶೀಘ್ರ ಮುಗಿಯಲಿದೆ. ಪೂಜಾರಿಗೆ ಭದ್ರತೆ ಕಲ್ಪಿಸಲು ಅನುಕೂಲವಾಗಲಿದೆ ಎನ್ನುವ ಕಾರಣಕ್ಕೆ ಈ ನಿರ್ಧರಕ್ಕೆ ಬರಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ದಾಖಲಾಗಿದ್ದ 47 ಪ್ರಕರಣಗಳ ಕುರಿತು ಸಿಸಿಬಿ ತನಿಖೆ ಕೈಗೊಂಡಿದೆ. ಹೀಗಾಗಿ ಮಂಗಳೂರಿನಲ್ಲಿ ದಾಖಲಾಗಿದ್ದ ನೌಶಾದ್ ಕೊಲೆ ಕೃತ್ಯವು ಸಿಸಿಬಿಗೆ ತನಿಖೆ ಕೈಗೆತ್ತಿಕೊಂಡಿದೆ. ಹಳೆಯ ಪ್ರಕರಣಗಳಲ್ಲಿ ಆತನ ಕೆಲ ಸಹಚರರಿಗೆ ಶಿಕ್ಷೆಗೆ ಗುರಿಯಾಗಿದ್ದರೆ, ಕೆಲವರು ಸಾಕ್ಷೃಧಾರಗಳ ಕೊರತೆಯಿಂದ ದೋಷಮುಕ್ತರಾಗಿದ್ದಾರೆ. ಬಹುಪಾಲು ಪ್ರಕರಣಗಳ ತನಿಖಾಧಿಕಾರಿಗಳು ಕೂಡಾ ಬದಲಾಗಿದ್ದಾರೆ. ನಿವೃತ್ತಿ ಸಹ ಹೊಂದಿದ್ದಾರೆ. ಹೀಗಾಗಿ ಮತ್ತೆ ಪೂಜಾರಿ ವಿರುದ್ಧ ತನಿಖೆಗೆ ಸ್ಥಳೀಯ ಪೊಲೀಸರಿಗೆ ವಹಿಸಿದರೆ ತನಿಖೆಯ ಹಾದಿ ತಪ್ಪಬಹುದು.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೂಜಾರಿ ಅಪರಾಧ ಕೃತ್ಯಗಳನ್ನು ಎಸಗಿದ್ದಾನೆ. ಆತನಿಗೆ ಜೀವ ಬೆದರಿಕೆ ಸಹ ಇದೆ. ಅತಿ ಸೂಕ್ಷ್ಮ ಪ್ರಕರಣಗಳು ಇದ್ದು, ಆತನ ಪಾತಕ ಚರಿತ್ರೆ ಶೋಧಿಸಿದರೆ ದೇಶದ ಭದ್ರತೆ ಸಂಬಂಧ ಮಹತ್ವದ ಮಾಹಿತಿ ತಿಳಿಯಬಹುದು. ಸ್ಥಳೀಯ ಪೊಲೀಸರಿಗೆ ತನಿಖೆ ವಹಿಸಿದರೆ ಆರಂಭದಲ್ಲಿ ಹುಮ್ಮಸ್ಸು ತೋರಿಸಿ ಬಳಿಕ ತನಿಖೆಯಲ್ಲಿ ಲೋಪ ಎಸಗುವ ಸಾಧ್ಯತೆಗಳು ಇವೆ.

    ಇದನ್ನೂ ಓದಿ: ಲವ್​ ಮಾಕ್ಟೇಲ್​ 2 ಚಿತ್ರದ ಸ್ಕ್ರಿಪ್ಟ್​ ಪೂಜೆ ಆಯ್ತು!

    ಇದಲ್ಲದೆ, ರವಿ ಪೂಜಾರಿ ನ್ಯಾಯಾಲಯದಲ್ಲಿ ಜೀವ ಬೆದರಿಕೆ ಇರುವುದಾಗಿ ರಕ್ಷಣೆ ಕೋರಿದ್ದಾನೆ. ತನಿಖೆ ಸಲುವಾಗಿ ಕರೆದೊಯ್ಯುವಾಗ ಭದ್ರತೆಗೆ ಬಗ್ಗೆ ನಿಗಾ ವಹಿಸಬೇಕಿದೆ. ಪ್ರತಿ ಬಾರಿ ಬೇರೆ ಬೇರೆ ತನಿಖಾ ತಂಡಗಳು ಕಸ್ಟಡಿಗೆ ಪಡೆದರೆ ಭದ್ರತೆ ಒದಗಿಸಲು ತೊಂದರೆ ಆಗಬಹುದು. ಅದಕ್ಕಾಗಿ ಒಂದೇ ಸಂಸ್ಥೆಗೆ ತನಿಖೆಗೆ ವಹಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಗಾಂಧಿ ಜಯಂತಿ ಸೇರಿ ಎಲ್ಲ ಜಯಂತಿಗಳ ರಜೆ ರದ್ದು ಮಾಡಲು ದೊರೆಸ್ವಾಮಿ ಶಿಫಾರಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts