More

    ಸಿಎಂ ಸ್ಥಾನಕ್ಕಾಗಿ ಬಂಡಾಯವೆದ್ದಿರಲಿಲ್ಲ, ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟವಾಗಿತ್ತು: ಏಕನಾಥ್​ ಶಿಂಧೆ

    ಮುಂಬೈ: ನಾನು ಮುಖ್ಯಮಂತ್ರಿಯಾಗಲು ಬಂಡಾಯವೆದ್ದಿರಲಿಲ್ಲ, ಶಿವಸೇನೆ-ಕಾಂಗ್ರೆಸ್​ ಮೈತ್ರಿ ಸರ್ಕಾರದ ಭ್ರಷ್ಟಾಚಾರ ಸಹಿಸಲಾಗದೇ ನಾವೆಲ್ಲರೂ ಹೊರಬಂದಿದ್ದೇವೆ ಎಂದು ಶಿವಸೇನೆಯ ಬಂಡಾಯ ಶಾಸಕ ಏಕನಾಥ್​ ಶಿಂಧೆ ಸಮರ್ಥಿಸಿಕೊಂಡಿದ್ದಾರೆ.

    ಮಹಾರಾಷ್ಟ್ರದ ಮುಂದಿನ ಸಿಎಂ ಏಕನಾಥ್​ ಶಿಂಧೆ ಎಂದು ಮಾಜಿ ಸಿಎಂ ದೇವೆಂದ್ರ ಫಡ್ನವಿಸ್​ ಘೋಷಿಸಿದ ಬೆನ್ನಲ್ಲೇ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಶಿವಸೇನೆ ಹಾಗೂ ಎನ್​ಸಿಪಿ ಸರ್ಕಾರದ ಭ್ರಷ್ಟಾಚಾರದಿಂದ ಸಾಕಾಗಿ ಹೋಗಿದ್ದೆವು ಎಂದು ಹೇಳಿದ್ದಾರೆ.

    ಶಿವಸೇನೆ ಹಾಗೂ ಎನ್​ಸಿಪಿ ಮೈತ್ರಿ ಬಾಳಾಸಾಹೇಬ್​ ಠಾಕ್ರೆ ಅವರ ತತ್ವ ಸಿದ್ಧಾಂತದ ವಿರುದ್ಧವಾಗಿತ್ತು, ಅದೆಲ್ಲವನ್ನೂ ತೊರೆದು ಮೈತ್ರಿ ಮಾಡಿಕೊಂಡಿದ್ದ ಸರ್ಕಾರದಲ್ಲಿ ಸಚಿವರಿಂದಲೇ ನಡೆಯುತ್ತಿದ್ದ ಭ್ರಷ್ಟಾರದಿಂದ ಬೇಸತ್ತು ನಾವು ಹೊರಬಂದಿದ್ದೇವೆ.1980ರ ದಶಕದಲ್ಲಿ ಶಿವಸೇನೆ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ ಶಿಂಧೆ ಬಾಳಾಠಾಕ್ರೆ ಅವರಿಂದ ಹಿಂದುತ್ವದ ರಾಜಕೀಯ ಕಲಿತು ಮಹಾರಾಷ್ಟ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.

    ಕಿಂಗ್​ ಮೇಕರ್​ ಅಲ್ಲ “ಕಿಂಗ್​​”: ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿರುವ ಏಕನಾಥ್​ ಶಿಂಧೆ ಅವರು ಕಿಂಗ್ ಮೇಕರ್ ಅಲ್ಲ ಕಿಂಗ್​​, ಈ ಎಲ್ಲಾ ಬೆಳವಣಿಗೆಗಳಲ್ಲಿ ನಾನು ಯಾವ ಪಾತ್ರವನ್ನೂ ವಹಿಸಿಲ್ಲ, ಇದೆಲ್ಲಾ ಶ್ರೇಯಸ್ಸು ಶಿಂಧೆ ಅವರಿಗೆ ಸೇರಬೇಕಿದೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನವನ್ನು ಅವರಿಗೆ ಬಿಟ್ಟುಕೊಡುವ ಮೂಲಕ ಬಾಳಾಠಾಕ್ರೆ ಅವರಿಗೆ ಗೌರವ ನೀಡುತ್ತಿದ್ದೇವೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಮಹಾರಾಷ್ಟ್ರದ ಮುಖ್ಯಮಂತ್ರಿ ಖುರ್ಚಿಗೆ ಮಹಾ ಟ್ವಿಸ್ಟ್​: ಕೊನೆ ಕ್ಷಣದಲ್ಲಿ ಬದಲಾಯ್ತು ನಿರ್ಧಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts