More

    ಇಂಡೋ-ಸೋವಿಯತ್‌ನಿಂದ ಇಂಡೋ-ರಷ್ಯಾ ತನಕ ರಕ್ಷಣಾ ಪಾಲುದಾರಿಕೆಯ ಅಭಿವೃದ್ಧಿಯ ಹಾದಿ..

    ಇಂಡೋ-ಸೋವಿಯತ್‌ನಿಂದ ಇಂಡೋ-ರಷ್ಯಾ ತನಕ ರಕ್ಷಣಾ ಪಾಲುದಾರಿಕೆಯ ಅಭಿವೃದ್ಧಿಯ ಹಾದಿ..| ಗಿರೀಶ್ ಲಿಂಗಣ್ಣ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
    ಶೀತಲ ಸಮರದ ಕಾಲಾವಧಿಯಲ್ಲಿ, ಸೋವಿಯತ್ ಒಕ್ಕೂಟ ಮತ್ತು ಭಾರತ ಎರಡೂ ಔಪಚಾರಿಕ ಮೈತ್ರಿಕೂಟದ ಭಾಗವಾಗಿರಲಿಲ್ಲ. ಆದರೂ ಎರಡೂ ರಾಷ್ಟ್ರಗಳಿಗೆ ಕಾರ್ಯತಂತ್ರದ ಪಾಲುದಾರಿಕೆ ಎಂಬ ಪದದ ಕುರಿತು ಸೂಕ್ತ ಅರಿವಿತ್ತು. ಸೋವಿಯತ್ ನೌಕಾಪಡೆಯ ನೌಕೆಗಳು ಹಿಂದೂ ಮಹಾಸಾಗರದಲ್ಲಿ ಉಪಸ್ಥಿತವಿದ್ದು, ಅಮೆರಿಕದ ಕಾರ್ಯಾಚರಣೆಗಳ ಸಾಧ್ಯತೆಗಳನ್ನು ನಿಯಂತ್ರಿಸಿದ್ದವು. ಅದರೊಡನೆ ಸೋವಿಯತ್ ಒಕ್ಕೂಟ ಮಧ್ಯಪ್ರಾಚ್ಯದ ಕುರಿತ ಭಾರತದ ನೀತಿಯನ್ನು ಬೆಂಬಲಿಸಿದ್ದವು. ಇರಾಕ್, ಮಾಸ್ಕೋ ಮತ್ತು ನವದೆಹಲಿಗಳು ಒಂದಾಗಿ, ‘ರೂಬಲ್ – ರುಪೀ’ ಎಂಬ ತ್ರಿಕೋನ ರಚಿಸಿಕೊಂಡು, ದ್ವಿಪಕ್ಷೀಯ ವ್ಯವಹಾರಗಳಲ್ಲಿ ಡಾಲರ್ ಬದಲಿಗೆ ಭಾಗಿಯಾಗುವ ರಾಷ್ಟ್ರಗಳಿಗೆ ಸಹಕಾರಿಯಾದ, ಲಾಭದಾಯಕವಾದ ಯಾಂತ್ರಿಕ ವ್ಯವಸ್ಥೆ ಜಾರಿಗೆ ತಂದಿದ್ದವು. ಆದರೆ ಸೋವಿಯತ್ ಒಕ್ಕೂಟದ ಪತನವಾದ ಬಳಿಕ ರಷ್ಯಾದ ಪ್ರಭಾವ ಸಾಕಷ್ಟು ಕಡಿಮೆಯಾಯಿತು.

    ಸೋವಿಯತ್ ಒಕ್ಕೂಟ ಯಾವುದೇ ಆಯುಧ ವ್ಯವಸ್ಥೆಯನ್ನಾದರೂ ಸ್ನೇಹಯುತ ದರದಲ್ಲಿ ಭಾರತಕ್ಕೆ ಮಾರಾಟ ಮಾಡಲು ಸಿದ್ಧವಾಗಿತ್ತು. ಶೀತಲ ಸಮರ ಉತ್ತುಂಗಕ್ಕೇರಿದ ಸಮಯದಲ್ಲೂ ಸೋವಿಯತ್ ಒಕ್ಕೂಟ ಭಾರತಕ್ಕೆ ಒಂದು ನ್ಯೂಕ್ಲಿಯರ್ ಸಬ್‌ಮರೀನ್ ಅನ್ನೂ ಗುತ್ತಿಗೆ ಆಧಾರದಲ್ಲಿ ಒದಗಿಸಿತ್ತು. ಆದರೆ ಅಮೆರಿಕ ತನ್ನೊಡನೆ ಅತ್ಯಂತ ಆತ್ಮೀಯ ಮೈತ್ರಿ ಹೊಂದಿರುವ ರಾಷ್ಟ್ರಗಳಿಗೂ ಕಾರ್ಯತಂತ್ರದ ಉಪಕರಣಗಳನ್ನು ಒದಗಿಸಲು ಸಿದ್ಧವಿರಲಿಲ್ಲ.

    ಯುನೈಟೆಡ್ ಕಿಂಗ್‌ಡಮ್ ಸಹ ತನ್ನ ಆಧುನಿಕ ಆಯುಧ ಉಪಕರಣಗಳನ್ನು ಭಾರತಕ್ಕೆ ಮಾರಾಟ ಮಾಡಲು ಹಿಂದೇಟು ಹಾಕುತ್ತಿತ್ತು. ಭಾರತ ಆಗಲೇ ಸ್ವತಂತ್ರ ರಾಷ್ಟ್ರವಾಗಿದ್ದರೂ, ಮಿಲಿಟರಿ ಉಪಕರಣಗಳಿಗಾಗಿ ಯುಕೆ ಮೇಲೆ ಅವಲಂಬಿತವಾಗಿತ್ತು. ಆದರೆ 1950ರ ದಶಕದಲ್ಲಿ ಸೋವಿಯತ್ ಒಕ್ಕೂಟ ತಾನು ಭಾರತಕ್ಕೆ ಆಯುಧಗಳನ್ನು ಪೂರೈಸಲು ಸಿದ್ಧ ಎಂದು ಸೂಚಿಸಿತ್ತು. ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ನಿರ್ಲಕ್ಷ್ಯ ಮತ್ತು ಸೋವಿಯತ್ ಒಕ್ಕೂಟದ ಆಸಕ್ತಿ ಭಾರತದ ರಾಜತಾಂತ್ರಿಕತೆಯಲ್ಲಿ ಬದಲಾವಣೆಗೆ ಕಾರಣವಾಯಿತು.

    ಸೋವಿಯತ್ ಒಕ್ಕೂಟದ ಪತನಾನಂತರ, ಭಾರತ ರಷ್ಯಾದೊಡನೆ ಆಯುಧ ಆಮದು ಮತ್ತು ರಾಜತಾಂತ್ರಿಕ ಸಹಾಯದಲ್ಲಿ ಹಿನ್ನಡೆ ಎದುರಿಸಬೇಕಾಯಿತು. ಆದರೆ ಸೋವಿಯತ್ ಒಕ್ಕೂಟ ಭಾರತಕ್ಕೆ ಈ ಎಲ್ಲಾ ರೀತಿಯ ಸಹಕಾರ ಒದಗಿಸಿತ್ತು.

    ಆದರೆ, 2000ನೇ ಇಸವಿಯಲ್ಲಿ ಮಾಸ್ಕೋ ದಕ್ಷಿಣ ಏಷ್ಯಾದಲ್ಲಿ ತನ್ನ ಪುನರಾಗಮನವನ್ನು ಘೋಷಿಸಿತು. ಆ ಬಳಿಕ ರಷ್ಯಾ ಹಂತ ಹಂತವಾಗಿ ಈ ಪ್ರಾಂತ್ಯದಲ್ಲಿ ತನ್ನ ಪ್ರಭಾವ ವೃದ್ಧಿಸುತ್ತ ಹೋಯಿತು. ಇಲ್ಲಿ ಅದಕ್ಕೆ ಕಾರ್ಯತಂತ್ರದ ಆಸಕ್ತಿಯೂ ಇತ್ತು. ಅದೇ ಸಮಯದಲ್ಲಿ, ನವ ಭಾರತವೂ ತನ್ನ ಪ್ರಭಾವವನ್ನು ಬೆಳೆಸುತ್ತ ಹೋಯಿತು. ಆ ಮೂಲಕ ಭಾರತ ಒಂದು ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿ, ಪ್ರಾದೇಶಿಕ ನಾಯಕನ ಪಾತ್ರ ನಿರ್ವಹಿಸತೊಡಗಿತು.

    ಇಂಡೋ-ಸೋವಿಯತ್‌ನಿಂದ ಇಂಡೋ-ರಷ್ಯಾ ತನಕ ರಕ್ಷಣಾ ಪಾಲುದಾರಿಕೆಯ ಅಭಿವೃದ್ಧಿಯ ಹಾದಿ..

    ಒಂದು ಸಮಯದಲ್ಲಿ, ಹಿಂದಿನ ಸೋವಿಯತ್ ಒಕ್ಕೂಟ ಭಾರತೀಯ ಸೇನೆ ಬಳಸುತ್ತಿದ್ದ ಬಹುತೇಕ ಶೇ.90 ಆಯುಧಗಳನ್ನು ಪೂರೈಸುತ್ತಿತ್ತು. ಅಂಥ ಅವಲಂಬನೆಯಿಂದ ಹೊರಬರುವ ಹಾದಿ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಕಷ್ಟಕರವೂ ಆಗಿರುತ್ತದೆ. ಆದರೆ ಕಾಲಕ್ರಮೇಣ ಇದು ಸಾಧ್ಯವಾಗುತ್ತದೆ. ಪ್ರಸ್ತುತ ಆಯುಧ ಖರೀದಿಯಲ್ಲಿ ರಷ್ಯಾ ಮೇಲೆ ಭಾರತದ ಅವಲಂಬನೆ ಶೇ.60ಕ್ಕೆ ಇಳಿಕೆಯಾಗಿದ್ದು, ಶೇಕಡಾವಾರು ಇನ್ನಷ್ಟು ಹೆಚ್ಚು ಇಳಿಕೆಯಾಗುವ ಸಾಧ್ಯತೆಗಳಿವೆ. ಆದರೆ ಹಣಕಾಸಿನ ಮೌಲ್ಯದಲ್ಲಿ ಇಳಿಕೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

    ರಷ್ಯಾ ಆಯುಧಗಳ ಖರೀದಿಯಲ್ಲಿ ಭಾರತಕ್ಕೆ ವಿಶಿಷ್ಟ ಅವಕಾಶಗಳನ್ನೂ ಒದಗಿಸಿತ್ತು. ಆ ಕಾರಣದಿಂದಲೇ ಭಾರತ ರಷ್ಯಾದಿಂದ 14 ಬಿಲಿಯನ್ ಡಾಲರ್ ಮೊತ್ತದ ಆಯುಧಗಳನ್ನು ಖರೀದಿಸಲು ಸಾಧ್ಯವಾಯಿತು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಳೆದ ಡಿಸೆಂಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಿದಾಗ 2021ರಿಂದ 2030ರ ಅವಧಿಗೆ ಭಾರತ ಮತ್ತು ರಷ್ಯಾ ಸರ್ಕಾರಗಳ ಮಧ್ಯ ಮಿಲಿಟರಿ ಟೆಕ್ನಿಕಲ್ ಕೋ-ಆಪರೇಷನ್ (ಎಂಟಿಸಿ) ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದ ಆಯುಧಗಳ ಮತ್ತು ಮಿಲಿಟರಿ ಉಪಕರಣಗಳ ಪೂರೈಕೆ ಮತ್ತು ಅಭಿವೃದ್ಧಿಯನ್ನೂ ಒಳಗೊಂಡಿತ್ತು.

    2013ರಿಂದ 2018ರ ಅವಧಿಯಲ್ಲಿ, ಎಸ್-400 ಒಪ್ಪಂದ ಮಾಡಿಕೊಳ್ಳುವ ಮೊದಲು, ಭಾರತಕ್ಕೆ ರಷ್ಯಾದ ಆಯುಧ ಪೂರೈಕೆ ಕಡಿತಗೊಂಡಿದೆ ಎನ್ನಲಾಗಿತ್ತು. ತಜ್ಞರು ಈ ಆಯುಧ ಆಮದಿನಲ್ಲಿ ಉಂಟಾಗಿರುವ ಕಡಿತಕ್ಕೆ ಪಾಶ್ಚಾತ್ಯ ಸರ್ಕಾರಗಳ ಆವರ್ತಕತೆ ಮತ್ತು ತಂತ್ರಜ್ಞಾನ ವರ್ಗಾವಣೆಯೂ ಕಾರಣಗಳಾಗಿರಬಹುದು ಎಂದು ಅಂದಾಜಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಷ್ಯಾದ ಆಯುಧ ಖರೀದಿ ಮರಳಿ ಸಾಕಷ್ಟು ಏರಿಕೆ ಕಂಡಿದೆ.

    ಇಂಡೋ-ಸೋವಿಯತ್‌ನಿಂದ ಇಂಡೋ-ರಷ್ಯಾ ತನಕ ರಕ್ಷಣಾ ಪಾಲುದಾರಿಕೆಯ ಅಭಿವೃದ್ಧಿಯ ಹಾದಿ..

    ಒಂದೆಡೆ ಭಾರತ ತಾನು ಪಡೆದುಕೊಳ್ಳುವ ಆಯುಧಗಳ, ಉಪಕರಣಗಳ ಗುಣಮಟ್ಟದ ಕುರಿತು ಅತ್ಯಂತ ಕಟ್ಟುನಿಟ್ಟಾದ ಮಾನದಂಡ ಪಾಲಿಸುವ ಗ್ರಾಹಕನಾಗಿದೆ. ಅದರೊಡನೆ, ಇನ್ನೊಂದೆಡೆ ಭಾರತದ ಜಾಗತಿಕ ರಾಜಕೀಯ ಪ್ರಭಾವ ಭಾರತ ಆಯುಧ ಖರೀದಿಯ ವಿಚಾರದಲ್ಲಿ ಸ್ವತಂತ್ರ ನೀತಿಗಳನ್ನು ಪಾಲಿಸಲು ಸಹಕರಿಸುತ್ತದೆ. ಅಮೆರಿಕ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಆಯುಧ ಮಾರುಕಟ್ಟೆಯಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿ, ರಷ್ಯಾದ ಪ್ರಭಾವವನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿತ್ತು. ಆದರೆ ಭಾರತದ ಸ್ವತಂತ್ರ ನೀತಿಯ ಪರಿಣಾಮವಾಗಿ ಅದು ಸಾಧ್ಯವಾಗಿಲ್ಲ.

    ಇದಕ್ಕೆ ಉದಾಹರಣೆಯಾಗಿ ಗಮನಿಸುವುದಾದರೆ, ಭಾರತ ಸು-30ಎಂಕೆಐ ಯುದ್ಧ ವಿಮಾನಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡಿತು. ಇದಕ್ಕೆ ಎರಡನೆಯ ಉದಾಹರಣೆ ಎಂದರೆ, ಭಾರತ ರಷ್ಯಾದಿಂದ ಎಸ್-400 ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವುದರ ಸುತ್ತಲೂ ಇದ್ದ ವಿಚಾರವನ್ನು ಗಮನಿಸಬಹುದು. ಈ ಆಯುಧದ ಹತ್ತು ಘಟಕಗಳ ಖರೀದಿಯ ಒಪ್ಪಂದವನ್ನು ಕೊನೆಗೂ 2018ರಲ್ಲಿ ಪೂರ್ಣಗೊಳಿಸಲಾಯಿತು. ಇದನ್ನು ಸಿಎಎಟಿಎಸ್ಎ ಮೇಲೆ ಅಮೆರಿಕಾ ನಿರ್ಬಂಧ ಹೇರಿದ್ದ ಸಂದರ್ಭದಲ್ಲೂ ಪೂರ್ಣಗೊಳಿಸಲಾಯಿತು. ಈ ಒಪ್ಪಂದದಡಿ ಭಾರತಕ್ಕೆ ಮೊದಲ ಪೂರೈಕೆ 2021ರ ಆರಂಭದಲ್ಲೇ ನಡೆಯಬೇಕಾಗಿತ್ತು. ಅದಕ್ಕಾಗಿ ಇದರ ಕುರಿತು ಕಾರ್ಯ ನಿರ್ವಹಿಸಬೇಕಾದ ಮೊದಲ ಭಾರತೀಯ ವೃತ್ತಿಪರರ ತಂಡ ಆಗಲೇ ರಷ್ಯಾಗೆ ಭೇಟಿ ನೀಡಿತ್ತು. ಮೊದಲ ಹಂತದ ಆಯುಧ ಪೂರೈಕೆ 2022ರಲ್ಲಿ ನಡೆಯಿತು.

    ರಷ್ಯಾ ಮೇಲೆ ಪ್ರಸ್ತುತ ಇರುವ ನಿರ್ಬಂಧಗಳ ಕಾರಣದಿಂದ ಭಾರತ ಮತ್ತು ರಷ್ಯಾಗಳ ವ್ಯವಹಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳ ಕಾಣುವ ಸಾಧ್ಯತೆಗಳಿವೆ. ವಿಶ್ವಾದ್ಯಂತ ಇರುವ ರಷ್ಯಾದ ಉಪಕರಣಗಳ ದುರಸ್ತಿ, ನಿರ್ವಹಣೆ ಮತ್ತು ಅಭಿವೃದ್ಧಿಯ ಜವಾಬ್ದಾರಿ ಭಾರತದ ಹೆಗಲೇರುವ ಸಾಧ್ಯತೆಗಳಿವೆ. ಇದಕ್ಕಾಗಿ ಗ್ರಾಹಕರಿಗೆ ಸಹಕಾರ ಒದಗಿಸಲು ಭಾರತಕ್ಕೆ ರಷ್ಯಾದಿಂದ ತಾಂತ್ರಿಕ ಸಹಾಯ, ಬಿಡಿಭಾಗಗಳ ಪೂರೈಕೆಯ ಅಗತ್ಯವಿದೆ.

    ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ನಿರೀಕ್ಷೆಗೂ ಮೀರಿ ನಿಜವಾಯ್ತಾ ಕಾರ್ಣಿಕ?

    ರಕ್ತದ ಬದಲು ಮೂಸಂಬಿ ಜ್ಯೂಸ್​ ಕೊಟ್ಟು ರೋಗಿ ಸಾವು ಪ್ರಕರಣ; ಬಯಲಾಯ್ತು ಅಸಲಿ ಕಾರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts