More

    ಜೂಮ್​ಗೆ ಪರ್ಯಾಯ ವಿಡಿಯೋ ಕಾನ್ಫರೆನ್ಸಿಂಗ್​ ಆ್ಯಪ್​ ಅಭಿವೃದ್ಧಿಪಡಿಸಿ, 1 ಕೋಟಿ ರೂ. ಬಹುಮಾನ ಗೆಲ್ಲಿ…

    ನವದೆಹಲಿ: ಕರೊನಾ ಪಿಡುಗು ಜೋರಾದ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ಸರ್ಕಾರದ ಎಲ್ಲ ಸಚಿವರು, ಅಧಿಕಾರಿಗಳು ಜೂಮ್​ ಆ್ಯಪ್​ ಬಳಸಿ ವಿಡಿಯೋ ಕಾನ್ಫರೆನ್ಸಿಂಗ್​ ಮಾಡುತ್ತಿದ್ದರು. ಆದರೆ, ಜೂಮ್​ ಆ್ಯಪ್​ನಲ್ಲಿ ಹಲವು ನ್ಯೂನತೆಗಳಿದ್ದು, ಗೌಪ್ಯ ಮಾಹಿತಿ ಸೋರಿಕೆಯಾಗುವ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಡಿಯೋ ಕಾನ್ಫರೆನ್ಸಿಂಗ್​ಗಾಗಿ ಜೂಮ್​ ಆ್ಯಪ್​ ಅನ್ನು ಬಳಸದಂತೆ ಎಲ್ಲರಿಗೂ ಸೂಚಿಸಿದೆ.

    ಹಾಗಾದರೆ, ಮುಂದೇನು? ಮುಂದೆ ಏನೆಂದರೆ ಮೇಕ್​ ಇನ್​ ಇಂಡಿಯಾ ಅಭಿಯಾನದ ಭಾಗವಾಗಿ ದೇಶಿಯವಾಗಿ, ಹೆಚ್ಚು ಸುರಕ್ಷತಾ ವ್ಯವಸ್ಥೆ ಹೊಂದಿರುವ ವಿಡಿಯೋ ಕಾನ್ಫರೆನ್ಸಿಂಗ್​ ಆ್ಯಪ್​ ಅನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ನಿರ್ಧಾರವಾಗಿದೆ. ಈ ಹಿನ್ನೆಲೆಯಲ್ಲಿ ಅದು ವಿಡಿಯೋ ಕಾನ್ಫರೆನ್ಸಿಂಗ್​ ಆ್ಯಪ್​ ಅಭಿವೃದ್ಧಿಪಡಿಸಿ, 1 ಕೋಟಿ ರೂ. ಬಹುಮಾನ ಗೆಲ್ಲಿ ಯೋಜನೆಯನ್ನು ಘೋಷಿಸಿದೆ.

    ಈ ಆ್ಯಪ್​ ಹೇಗಿರಬೇಕು, ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ಪೂರ್ವಷರತ್ತುಗಳನ್ನು ಹಾಕಿದೆ.

    * ಈ ಆ್ಯಪ್​ ಕಡಿಮೆ ವಿದ್ಯುತ್​ ಮತ್ತು ಪ್ರೊಸೆಸರ್​ ಅನ್ನು ಬಳಸುವಂತಿರಬೇಕು
    * ಯಾವುದೇ ಬಾಹ್ಯ ಉಪಕರಣದ ಅವಲಂಬನೆ ಇರಬಾರದು
    * ಯಾವುದೇ ಕಂಪ್ಯೂಟರ್​ ಅಥವಾ ಉಪಕಣದಲ್ಲಿ ಕಾರ್ಯನಿರ್ವಹಿಸುವಂತಿರಬೇಕು. ಬಹುವ್ಯಕ್ತಿಗಳ ಕಾನ್ಫರೆನ್ಸ್​ ಸೇರಿ ಎಲ್ಲ ಕಾನ್ಫರೆನ್ಸ್​ಗಳಲ್ಲೂ ಬಳಕೆ ಯೋಗ್ಯವಾದ ಚಾಟ್​ ಸೌಲಭ್ಯ ಹೊಂದಿರಬೇಕು.
    * ಕಾನ್ಫರೆನ್ಸ್​ಗೆ ಸೇರ್ಪಡೆಗೊಳ್ಳಲು ಸೈನ್​ ಇನ್​ ಮತ್ತು ನಾನ್​ ಸೈನ್​ಇನ್​ ಸೌಲಭ್ಯ ಹೊಂದಿರಬೇಕು. ಅದು ಬ್ರೌಷರ್​ ಅಥವಾ ಯಾವುದೇ ಆ್ಯಪ್​ನ ಇಂಟರ್​ಫೇಸ್​ ಆಗಿರಬಹುದು
    * ಅದು ಎನ್​ಕ್ರಿಪ್ಟೆಡ್​ ನೆಟ್​ವರ್ಕ್​ ಕಮ್ಯುನಿಕೇಷನ್​ ಹೊಂದಿರಬೇಕು
    * ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್​ ಸೌಲಭ್ಯ ಇರಬೇಕು

    ಆಸಕ್ತ ಡೆವೆಲಪರ್​ ಅಥವಾ ಡೆವೆಲಪರ್​ಗಳ ತಂಡ ಏಪ್ರಿಲ್​ 30ರೊಳಗೆ ಅರ್ಜಿ ಸಲ್ಲಿಸಬೇಕು.

    ತಾವೇ ವಿನ್ಯಾಸಗೊಳಿಸಿದ ಮಾಸ್ಕ್​ ಧರಿಸಿ ಮಿಂಚುತ್ತಿರುವ ಸಚಿನ್​, ದ್ರಾವಿಡ್​, ಗಂಗೂಲಿ… ಏಕೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts