More

    ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಿ

    ಕೊಳ್ಳೇಗಾಲ: ತಾಲೂಕಿನ ತಿಮ್ಮರಾಜೀಪುರದ ಪರಿಶಿಷ್ಟ ವರ್ಗಗಳ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಶಾಲೆಯ ಪ್ರಾಂಶುಪಾಲ ಬಿ.ಗಿರೀಶ್ ಮಾತನಾಡಿ, ಮಕ್ಕಳು ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು. ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು.

    ನಿವೃತ್ತ ಪ್ರಾಂಶುಪಾಲ ಪ್ರೊ.ದೊಡ್ಡಲಿಂಗೇಗೌಡರು ಮಾತನಾಡಿ, ನಾಡಿನ ಸಂಸ್ಕೃತಿ, ಭಾಷಾಭಿಮಾನ ಇಂದಿನ ಕಲಿಕೆಗೆ ಅವಶ್ಯಕವಾಗಿ ಬೇಕಾಗಿದೆ. 1 ರಿಂದ 5ನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡ ಬೋಧನೆ ನಡೆಸಬೇಕೆಂದು ತಿಳಿಸಿದರು. ಹಾಗೆಯೇ, ಕರ್ನಾಟಕದ ಇತಿಹಾಸ ಹಾಗೂ ವಸ್ತು ಸ್ಥಿತಿ, ಕರ್ನಾಟಕದ ಸಾಂಸ್ಕೃತಿಕ, ಭೌಗೋಳಿಕ, ಐತಿಹಾಸಿಕ ವಿವರಗಳನ್ನು ಬಗ್ಗೆ ಮಕ್ಕಳಿಗೆ ತಿಳಿಸಿದರು.

    ಕಸಾಪ ತಾಲೂಕು ಅಧ್ಯಕ್ಷ ನಾಗರಾಜು ಎಸ್.ಕೊಂಗರಹಳ್ಳಿ ಮಾತನಾಡಿ, ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ, ಶಿಲ್ಪಕಲೆ, ರಾಜಮನೆತನದ ಬಗ್ಗೆ ಪರಿಚಯಿಸಿದರು. ಶಿಕ್ಷಕ ರಾಜೇಂದ್ರ ಪ್ರಸಾದ್, ನಿಲಯ ಪಾಲಕ ಬೈರಯ್ಯ, ವಸತಿ ಶಾಲೆಯ ಸಿಬ್ಬಂದಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts