More

    ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್: ಈ ವರ್ಷದ ಕಾರ್ಣಿಕದ ಒಳಾರ್ಥ ಹೀಗಿದೆ…

    ಹಾವೇರಿ: ಈ ದೇವರು ನುಡಿಯುವ ಭವಿಷ್ಯದ ನುಡಿ ಎಂದೂ ಸುಳ್ಳಾಗಲ್ಲ ಎಂಬ ನಂಬಿಕೆ ಜನರದ್ದು. ಕಳೆದ ವರ್ಷ ರಾಜ್ಯದ ಜನರು ನಿಟ್ಟುಸಿರು ಬಿಡುವ ಭವಿಷ್ಯವಾಣಿ ಅಥವಾ ಕಾರ್ಣಿಕ ನುಡಿಯನ್ನು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಪ್ರಸಿದ್ಧ ದೇವರಗುಡ್ಡ ಕ್ಷೇತ್ರದ ಮಾಲತೇಶ ಸ್ವಾಮೀಜಿ ನುಡಿದಿದ್ದರು. ಇದೀಗ ಮತ್ತೆ ಜನರಿಗೆ ಶುಭವಾಗುವಂತಹ ಕಾರ್ಣಿಕಾ ನುಡಿದಿದ್ದಾರೆ.

    ದಸರಾ ಹಬ್ಬದ ಆಯುಧ ಪೂಜೆಯ ದಿನದಂದು ನುಡಿಯುವ ಕಾರ್ಣಿಕ ನುಡಿ ಇದಾಗಿದೆ. “ಎರಿ ದೊರೆ ಆಕತಲೆ ದೈವ ದರ್ಬಾರ್ ಆಕತಲೆ ಪರಾಕ್” ಎಂದು ಗೊರವಯ್ಯ ನಾಗಪ್ಪಜ್ಜ ಬಿಲ್ಲನ್ನೇರಿ ಕಾರ್ಣಿಕ ನುಡಿದಿದ್ದಾರೆ.

    ಇದರರ್ಥ ಈ ಬಾರಿಯ ಕಾರ್ಣಿಕದಿಂದ ರೈತ ವರ್ಗ ದೊರೆಯಾಗಿ ಮೆರೆಯುತ್ತದೆ. ಅವರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿದೆ. ಜನರು ಸಂಕಷ್ಟದಿಂದ ಪಾರಾಗುತ್ತಾರೆ. ಇದಕ್ಕೆ ದೈವದ ಆಶಿರ್ವಾದ ಇರುತ್ತದೆ. ನಾಡಿನ ಸುಭಿಕ್ಷೆಯ ಕುರಿತು ಹಾಗೂ ರಾಜಕೀಯ ಬೆಳವಣಿಗೆ ವಿಚಾರ ಕಾರ್ಣಿಕದಲ್ಲಿದೆ.

    ಎರೆ ಎಂದರೆ ಮಣ್ಣು. ದೊರೆ ಎಂದರೆ ರಾಜ. ಹೀಗಾಗಿ ಇದು ರೈತರ ಮೇಲೆ ಪ್ರಭಾವ ಬೀರುವ ಭವಿಷ್ಯವಾಣಿ ಆಗಿದೆ. ರೈತ ಬೆಳೆದ ಬೆಳೆ ದೊರೆಯಾಗುತ್ತದೆ. ಸಮೃದ್ಧಿಯಾಗಿ ಫಲವನ್ನು ನೀಡುತ್ತದೆ ಎಂದು ವಿಶ್ಲೇಷಣೆ ಮಾಡಬಹುದು. ದೈವ ದೊರೆಯಾದಿತಲೆ ಎಂದರೆ ದೇವರ ಆಶೀರ್ವಾದ ಅಂತಾ, ಕೊರೊನಾ ಮೂರನೇ ಅಲೆ ಬರುವುದಿಲ್ಲ ಎಂದು ಭವಿಷ್ಯವಾಣಿಯ ತಿಳಿದುಕೊಳ್ಳಬಹುದು. ರಾಜಕೀಯವಾಗಿ ಹೇಳುವುದಾದರೆ ಎರೆ ಎಂದರೆ ಕಟ್ಟಕಡೆಯದು ಎಂದು ಅರ್ಥ. ಜನತೆ ಮತ್ತು ದೈವ ಮೆಚ್ಚಿದ ಆಡಳಿತವನ್ನು ಈ ಸರ್ಕಾರ ನೀಡುತ್ತದೆ ಎಂದುಭವಿಷ್ಯವಾಣಿಯನ್ನು ವಿಶ್ಲೇಷಣೆ ಮಾಡಬಹುದು ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ ಭಟ್ ಗೂರೂಜಿ ಹೇಳಿದರು. ಈ ಮೂಲಕ ಸಿಎಂ ಬೊಮ್ಮಾಯಿ ಸರ್ಕಾರ ಉತ್ತಮ ಆಡಳಿತ ನೀಡುತ್ತದೆ ಎಂದು ಪರೋಕ್ಷವಾಗಿ ತಿಳಿಸಿದರು.

    ಕಳೆದ ವರ್ಷ “ವ್ಯಾದಿ ಬೂದಿಯಾದಿತಲೆ ಸೃಷ್ಟಿ ಸಿರಿ ಆಯಿತಲೆ ಪರಾಕ್” ಎಂಬುದು ಕಾರ್ಣಿಕದ ನುಡಿಯಲಾಗಿತ್ತು. ಬಹಳ ದಿನಗಳಿಂದ ಕರೊನಾ ರೋಗ ಕಡಿಮೆ ಆಗುತ್ತಿದೆ. ಮುಂದೆಯೂ ಇನ್ನೂ ಕಡಿಮೆ ಆಗುತ್ತೆ ಎಂದು ದಿಗ್ವಿಜಯ ನ್ಯೂಸ್​ಗೆ ದೇವರಗುಡ್ಡ ಕ್ಷೇತ್ರದ ಅರ್ಚಕರು ಹೇಳಿದ್ದರು. ಕರೊನಾ ಕುರಿತು ನುಡಿದಿದ್ದ ಭವಿಷ್ಯವಾಗಿತ್ತು. (ದಿಗ್ವಿಜಯ ನ್ಯೂಸ್​)

    ವ್ಯಾದಿ ಬೂದಿಯಾದಿತಲೆ, ಸೃಷ್ಟಿ ಸಿರಿ ಆಯಿತಲೆ ಪರಾಕ್: ನಿಜವಾಯ್ತು ಕಾರ್ಣಿಕ ಭವಿಷ್ಯ..!

    ‘ಮುತ್ತಿನ ರಾಶಿಗೆ ಮುತ್ತ ಕೊಟ್ಟಿತಲೇ ಪರಾಕ್​’: ಹಾವನೂರು ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿದ ಗೊರವಪ್ಪ ಹೊನ್ನಪ್ಪ ಬಿಲ್ಲರ

    ಈ ಬಾರಿಯೂ ಗೊರವಯ್ಯ ರಾಮಣ್ಣನೇ ನುಡಿಯಲಿದ್ದಾನೆ ಮೈಲಾರಲಿಂಗೇಶ್ವರ ಕಾರ್ಣಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts