More

    ‘ಮುತ್ತಿನ ರಾಶಿಗೆ ಮುತ್ತ ಕೊಟ್ಟಿತಲೇ ಪರಾಕ್​’: ಹಾವನೂರು ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿದ ಗೊರವಪ್ಪ ಹೊನ್ನಪ್ಪ ಬಿಲ್ಲರ

    ಹಾವೇರಿ: ಇಲ್ಲಿನ ಚಿಕ್ಕ ಮೈಲಾರ ಖ್ಯಾತಿಯ ಹಾವನೂರು ಗ್ರಾಮದಲ್ಲಿ ಸುಮಾರು 354 ವರ್ಷಗಳ ಇತಿಹಾಸ ಇರುವ ಕಾರ್ಣಿಕೋತ್ಸವ ನಡೆಯಿತು.

    ಈ ವೇಳೆ ಗೊರವಪ್ಪ ಹೊನ್ನಪ್ಪ ಬಿಲ್ಲರ ಅವರು’ ಮುತ್ತಿನ ರಾಶಿಗೆ ಮುತ್ತ ಕೊಟ್ಟಿತಲೇ ಪರಾಕ್​’ ಎಂದು ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿದರು.

    ಹೂವಿನಹಡಗಲಿಯ ಮೈಲಾರದ ಡೆಂಕನಮರಡಿಯಲ್ಲಿ ಕಾರ್ಣಿಕ ನುಡಿಯುವ ಹಿಂದಿನ ದಿನ ಹಾವನೂರಿನಲ್ಲಿ ಕಾರ್ಣಿಕ ಹೇಳಲಾಗುತ್ತದೆ. ಇದನ್ನು ಭವಿಷ್ಯ ಎಂದೇ ಪರಿಗಣಿಸಲಾಗುತ್ತದೆ.

    15-20 ಅಡಿ ಎತ್ತರದ ಬಿಲ್ಲನ್ನು ಏರಿದ ಗೊರವಪ್ಪ ಮುತ್ತಿನ ರಾಶಿಗೆ ಮುತ್ತ ಕೊಟ್ಟಿತಲೇ ಪರಾಕ್​’ ಎಂದು ಹೇಳಿದ್ದನ್ನು ಅನೇಕ ರೀತಿಯಲ್ಲಿ ಅರ್ಥೈಸಲಾಗಿದೆ.

    ಈ ವರ್ಷ ರೈತರಿಗೆ ಹೆಚ್ಚು ಮಹತ್ವವನ್ನು ಕಾರ್ಣಿಕ ನೀಡಿದೆ ಎಂದು ಭಕ್ತರು ಹೇಳಿದ್ದಾರೆ. ಅಲ್ಲದೆ ರಾಜಕೀಯ ವಿಚಾರಕ್ಕೂ ಅದನ್ನು ಅನ್ವಯಿಸಿಕೊಂಡು ತಮ್ಮದೇ ಧಾಟಿಯಲ್ಲಿ ಅರ್ಥೈಸಿದ್ದಾರೆ.

    ಕಾರ್ಣಿಕವನ್ನು ವೀಕ್ಷಿಸಲು ಹಾವನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಆಗಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts