More

    ದೇವರ ದಾಸಿಮಯ್ಯನ ವಚನ ಇಂದಿಗೂ ಪ್ರಸ್ತುತ

    ಉಡುಪಿ: ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ದೇವರ ದಾಸಿಮಯ್ಯನ ವಚನಗಳ ಕೊಡುಗೆ ಮಹತ್ತರವಾಗಿದೆ. ಅವರ ವಚನಗಳ ಅರ್ಥ, ಭಾವನೆ ಹಾಗೂ ಆಲೋಚನೆಗಳು ಇಂದಿಗೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.

    ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ದೇವರ ದಾಸಿಮಯ್ಯಅವರ ಆದರ್ಶ ಹಾಗೂ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗಮಹನೀಯರ ಜಯಂತಿ ಆಚರಣೆಗೂ ಅರ್ಥ ಲಭಿಸುತ್ತದೆ ಎಂದರು.

    ಶ್ರೇಷ್ಠ ನಿಲುವು

    ಪದ್ಮಶಾಲಿ ಒಕ್ಕೂಟದ ಅಧ್ಯಕ್ಷ ರಾಮದಾಸ್​ ಶೆಟ್ಟಿಗಾರ್​ ಮಾತನಾಡಿ, ಸಾಮಾಜಿಕ ಪಿಡುಗು ತೊಲಗಿಸಲು ಶ್ರಮಿಸಿದ ದೇವರ ದಾಸಿಮಯ್ಯ, ತನ್ನ ಶ್ರೇಷ್ಠ ವೈಚಾರಿಕ ನಿಲುವಿನೊಂದಿಗೆ ಎಲ್ಲರ ಗಮನ ಸೆಳೆಯುತ್ತಾರೆ ಎಂದರು. ಸಮುದಾಯದ ಮುಖಂಡ ಗಿರೀಶ್​ ಶೆಟ್ಟಿಗಾರ್​ ಮಾತನಾಡಿ, ಸಾಮಾಜಿಕ ಸಮಾನತೆಯ ಮಹತ್ವವನ್ನು ವಚನಗಳ ಮೂಲಕ ಸರಳವಾದ ರೀತಿಯಲ್ಲಿ ಜನರಿಗೆ ಬೋಧಿಸಿದ್ದಾರೆ. ಸಾಮಾಜಿಕ ಶೋಷಣೆ ತಪ್ಪಿಸುವಲ್ಲಿ ಅವರು ಮಹತ್ತರ ಪಾತ್ರ ನಿಭಾಯಿಸಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಪ್ರತಿಕ್​ ಬಾಯಲ್​, ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್​, ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಎಸ್​.ಟಿ. ಸಿದ್ದಲಿಂಗಪ್ಪ, ಡಿಎಫ್​ಒ ಗಣಪತಿ ಇತರರು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts