More

    ಪ್ರತಿ ಕಾಮಗಾರಿ ಸ್ಥಳ ಪರಿಶೀಲನೆ


    ಸಾಮಾಜಿಕ ಲೆಕ್ಕಪರಿಶೋಧನಾ ಕಾರ್ಯಕ್ರಮ ವ್ಯವಸ್ಥಾಪಕ ಲಕ್ಷ್ಮಣ ಮಂಗಸುಳೆ ಚಿಕ್ಕೋಡಿ ಹೇಳಿಕೆ

    ದೇವದುರ್ಗ: ಜಾಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 743 ಕಾಮಗಾರಿ ಕೈಗೊಳ್ಳಲಾಗಿದ್ದು, ಎಲ್ಲ ಸ್ಥಳಕ್ಕೂ ಭೇಟಿನೀಡಿ ಪರಿಶೀಲಿಸಲಾಗುವುದು ಎಂದು ನರೇಗಾ ಕಾಮಗಾರಿ ಪರಿಶೀಲನೆ ತಂಡದ ಸಾಮಾಜಿಕ ಲೆಕ್ಕಪರಿಶೋಧನಾ ಕಾರ್ಯಕ್ರಮ ವ್ಯವಸ್ಥಾಪಕ ಲಕ್ಷ್ಮಣ ಮಂಗಸುಳೆ ಚಿಕ್ಕೋಡಿ ಹೇಳಿದರು.

    ತಾಲೂಕಿನ ಜಾಲಹಳ್ಳಿ ಗ್ರಾಪಂ ಕಚೇರಿಯಲ್ಲಿ ಏರ್ಪಡಿಸಿದ್ದ ಸಾಮಾಜಿಕ ಲೆಕ್ಕಪರಿಶೋಧನಾ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ನರೇಗಾ ಕಾಮಗಾರಿಗಳ ಸಮಗ್ರ ತನಿಖೆ ನಡೆಯುತ್ತಿದೆ. ಜಾಲಹಳ್ಳಿ ಪಂಚಾಯಿತಿ ವ್ಯಾಪ್ತಿಯಯಲ್ಲಿ ಒಟ್ಟು 743 ಕಾಮಗಾರಿ ಕೈಗೊಂಡಿದ್ದು ಅದರಲ್ಲಿ ಅತಿಹೆಚ್ಚು 240ಕೃಷಿ ಜಮೀನುಗಳಲ್ಲಿ ಬದು ನಿರ್ಮಾಣ ಕಾಮಗಾರಿಗಳಿವೆ. ಇವಲ್ಲದೇ ಜಾನುವಾರುಗಳ ಶೇಡ್ ನಿರ್ಮಾಣ, ಕೃಷಿಹೊಂಡ, ನಮ್ಮ ಹೊಲ ನಮ್ಮ ರಸ್ತೆ, ಅಂಗನವಾಡಿ ಕಟ್ಟಡ, ರಕ್ಷಣಾ ಗೋಡೆಯಂತಹ ಕಾಮಗಾರಿ ಮಾಡಲಾಗಿದೆ ಎಂದು ದಾಖಲೆ ಫೈಲ್ ಸಲ್ಲಿಸಲಾಗಿದೆ ಎಂದು ತಿಳಿಸಿದರು.

    ಪ್ರತಿ ಕಾಮಗಾರಿ ಸ್ಥಳ ಪರಿಶೀಲನೆ ಮಾಡಲಾಗುವುದು. ಅ ಸಂದರ್ಭದಲ್ಲಿ ಕಾಮಗಾರಿ ನಿರ್ವಹಣೆ ಮಾಡಿರುವ ಕಾಯಕಬಂಧು, ಬಿಎಫ್‌ಟಿ ಹಾಗೂ ತಾಂತ್ರಿಕ ಸಹಾಯಕರು ತನಿಖೆಗೆ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ತಿಳಿಸಿದರು.

    ನರೇಗಾ ಕಾಮಗಾರಿಗಳಿಂದ ಜನತೆಗೆ ಎಷ್ಟರ ಮಟ್ಟಿಗೆ ಅನುಕೂಲವಾಗಿದೆ ಎನ್ನುವುದನ್ನು ಪತ್ತೆ ಹಚ್ಚುವುದು ತನಿಖೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

    ವ್ಯವಸ್ಥಾಪಕರಾದ ನಾಗೇಶ ಮಡಿವಾಳ ಖಾನಾಪುರ, ಸಂಜೀವ್ ಕೋಲ್ಕಾರ್ ಸವದತ್ತಿ, ಪಿಡಿಒ ಪತ್ಯೆಪ್ಪ ರಾಠೋಡ್, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ, ಸೋಲಬಣ್ಣ, ಶಿವಪ್ಪ ನಾಯಕ, ಕುಮಾರ ಚಪ್ಪಳಕಿ, ಮುಖಂಡರಾದ ಶಂಕರಗೌಡ, ಮೋಹನ್ ದೇಸಾಯಿ, ಬಿಎಪ್ಟಿ ರವಿ ನಾಯಕ, ಸಿಬ್ಬಂದಿ ಮುದ್ದರಂಗಪ್ಪ ಯರಕಮಟ್ಟಿ, ಯಂಕೋಬ, ಬಸವರಾಜ, ನಾಗರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts