More

    ಬಾಲ್ಯವಿವಾಹ ತಡೆಗೆ ಸಹಕಾರ ಅಗತ್ಯ

    ದೇವದುರ್ಗ: ಬಾಲ್ಯ ವಿವಾಹ ಸಮಾಜಕ್ಕೆ ಅಂಟಿದ ಶಾಪ. ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಿಸಲು ಸಮುದಾಯ ಸಹಕಾರ ಅಗತ್ಯ ಎಂದು ಪುರಸಭೆ ಅಧ್ಯಕ್ಷ ಶರಣಗೌಡ ಗೌರಂಪೇಟೆ ಹೇಳಿದರು.

    ಪಟ್ಟಣದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಬಾಲ್ಯ ವಿವಾಹ ತಡೆ ಕುರಿತ ಸಂಚಾರಿ ವಾಹನ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟಲು ಹಲವು ಇಲಾಖೆಗಳು ಶ್ರಮಿಸುತ್ತಿವೆ ಎಂದು ತಿಳಿಸಿದರು.

    ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ. ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನಹರಿಸಬೇಕು. ಶಿಕ್ಷಣದಿಂದ ಸಮುದಾಯಗಳು ಅಭಿವೃದ್ಧಿ ಹೊಂದಲಿವೆ. ಶಿಕ್ಷಣಕ್ಕಾಗಿ ಸರ್ಕಾರ ಹಲವು ಯೋಜನೆ ರೂಪಿಸಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.

    ಜಾಗೃತಿ ಜಾಥಾ ಗೂಗಲ್, ಕೊಪ್ಪರ, ಮಸರಕಲ್ ಸೇರಿ ವಿವಿಧೆಡೆ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸುವ ಜತೆಗೆ ಬಾಲ್ಯ ವಿವಾಹ ಮಾಡಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಜನರಿಗೆ ಪ್ರತಿಜ್ಞೆ ಬೋಧಿಸಲಾಯಿತು. ಪುರಸಭೆ ಸದಸ್ಯ ಖಾಜಾ ಹುಸೇನ್, ಅಮೀನರೆಡ್ಡಿ, ಸಿಡಿಪಿಒ ವೆಂಕಟಪ್ಪ, ಎಸಿಡಿಪಿಒ ನಾಗರತ್ನಾ, ಮೇಲ್ವಿಚಾಕ ಕಮಲಾಕ್ಷಿ, ಕಸ್ತೂರಿ ಬಿ.ಪೂಜಾರ, ಇಸಿಒ ಯಲ್ಲನಗೌಡ, ಸಿದ್ದಲಿಂಗಪ್ಪ ಕಾಕರಗಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts