More

    ಗಳಿಕೆಯ ಜತೆಗೆ ಸಾಲವೂ ಹೆಚ್ಚಳ! ನಾಮಪತ್ರ ಸಲ್ಲಿಕೆ ವೇಳೆ ಮುರುಗೇಶ್ ನಿರಾಣಿ ಘೋಷಿಸಿದ ಆಸ್ತಿ ವಿವರ ಹೀಗಿದೆ…

    ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ ಬೀಳಗಿಯ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕಾರ್ಯಕರ್ತರು ಮತ್ತು ಬೆಂಬಲಿಗರೊಂದಿಗೆ ಬೀಳಗಿ ಮತಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆಗೆ ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ.

    ಐದು ವರ್ಷದಲ್ಲಿ ಸಚಿವ ಮುರುಗೇಶ್ ನಿರಾಣಿ ಗಳಿಕೆಯ ಜತೆಗೆ ಸಾಲವನ್ನೂ ಹೆಚ್ಚಳ ಮಾಡಿಕೊಂಡಿದ್ದಾರೆ. ವಿಶೇಷವೆಂದರೆ ಮುರುಗೇಶ್ ನಿರಾಣಿಗಿಂತಲೂ ಅವರ ಪತ್ನಿ ಕಮಲಾ ನಿರಾಣಿ ಅವರು ಗಳಿಕೆ ಹಾಗೂ ಸಾಲದಲ್ಲಿ ಮುಂದಿದ್ದಾರೆ.

    ಇದನ್ನೂ ಓದಿ: ಟಿಕೆಟ್ ಆಕಾಂಕ್ಷಿಯಾಗಿದ್ದ ಸತೀಶ್ ಬಂಡಿವಡ್ಡರ ರಾಜೀನಾಮೆ; ಬಾಗಲಕೋಟೆಯಲ್ಲಿ ಕಾಂಗ್ರೆಸ್​ನ ಮೊದಲ ವಿಕೆಟ್ ಪತನ

    ಸಾಲ ಹೆಚ್ಚಳ!

    ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮುರುಗೇಶ ನಿರಾಣ 27.22 ಕೋಟಿ ರೂಪಾಯಿ ಚರಾಸ್ತಿ ಹಾಗೂ 8.60 ಕೋಟಿ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ. ನಿರಾಣಿ ಹೆಸರಿನಲ್ಲಿ 22.62 ಕೋಟಿ ರೂಪಾಯಿ ಸಾಲವಿದೆ. 350 ಗ್ರಾಂ. ಚಿನ್ನಾಭರಣ ಹಾಗೂ ಮೂರು ಕಾರುಗಳನ್ನು ಮರುಗೇಶ್ ನಿರಾಣಿ ಹೊಂದಿದ್ದಾರೆ.

    ಪತ್ನಿಯ ಹೆಸರಲ್ಲಿ 1150 ಗ್ರಾಂ. ಚಿನ್ನಾಭರಣ

    ಮುರುಗೇಶ್ ನಿರಾಣಿ ಪತ್ನಿ ಕಮಲಾ ನಿರಾಣಿ 38.35. ಕೋಟಿ ರೂಪಾಯಿ ಚರಾಸ್ತಿ ಹಾಗೂ 23.85 ಕೋಟಿ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ. ಜತೆಗೆ 47.56 ಕೋಟಿ ರೂಪಾಯಿ ಸಾಲ ಹೊಂದಿದ್ದಾರೆ. 1150 ಗ್ರಾಂ. ಚಿನ್ನಾಭರಣ ಹಾಗೂ ಒಂದು ಕಾರನ್ನು ಕಮಲಾ ನಿರಾಣಿ ಹೊಂದಿದ್ದಾರೆ.

    ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಚುನಾವಣೆ | ಮೊದಲ ದಿನವೇ 221 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ; ಒಟ್ಟು ವಿವರ ಇಂತಿವೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts