More

    ಸಿದ್ದರಾಮಯ್ಯ ಸೋಲಿಸಲು ರಣತಂತ್ರ! ಶ್ರೀನಿವಾಸ್ ಪ್ರಸಾದ್-ವಿ.ಸೋಮಣ್ಣ ಮಹತ್ವದ ಚರ್ಚೆ; ಪ್ರತಾಪ್ ಸಿಂಹ ಸಾಥ್

    ಮೈಸೂರು: ಸಚಿವ ವಿ.ಸೋಮಣ್ಣ ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ವರುಣಾ ವಿಧಾನಸಭಾ ಕ್ಷೇತ್ರದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ 100ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ. ಸಭೆ ಬಳಿಕ ಸೋಮಣ್ಣ ಮಾತನಾಡುತ್ತಾ, ಮೊದಲ ದಿನವೇ ಜನರ ಉತ್ಸಾಹ ಕಂಡು ಖುಷಿಯಾಗಿದೆ. ಸೋಮಣ್ಣ ನಿಂತ ನೀರಲ್ಲ, ಮೇ 10 ರ ವರೆಗೂ ಓಡಾಟ ಮಾಡುತ್ತೇನೆ. ಕ್ಷೇತ್ರದಲ್ಲಿ ಪೂರಕ ವಾತಾವರಣ ಇರುವುದು ಗೊತ್ತಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಹೈಕಮಾಂಡ್ ಒತ್ತಾಯಕ್ಕೆ ಮಣಿದರಾ?

    ಸಚಿವ ವಿ.ಸೋಮಣ್ಣ ಸಂಸದ ಶ್ರೀನಿವಾಸ್ ಪ್ರಸಾದ್​ ಅವರನ್ನು ಭೇಟಿಯಾಗಿದ್ದು, ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಹೈಕಮಾಂಡ್ ಒತ್ತಾಯಕ್ಕೆ ಮಣಿದು ಇಷ್ಟವಿಲ್ಲದಿದ್ದರೂ ಎರಡು ಕ್ಷೇತ್ರಗಳಲ್ಲಿ ಸೋಮಣ್ಣ ಚುನಾವಣೆಗೆ ನಿಲ್ಲುತ್ತಿದ್ದಾರಾ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

    ಇದನ್ನೂ ಓದಿ: ಬಿಜೆಪಿ 2ನೇ ಪಟ್ಟಿ ಬಿಡುಗಡೆ; ಈಶ್ವರಪ್ಪ, ಜಗದೀಶ್ ಶೆಟ್ಟರ್ ಕ್ಷೇತ್ರ ಇನ್ನೂ ಸಸ್ಪೆನ್ಸ್

    ವರುಣ ಕ್ಷೇತ್ರದ ಅಭ್ಯರ್ಥಿಯಾದ ನಂತರ ಮೊದಲ‌ ಬಾರಿಗೆ ಮೈಸೂರಿಗೆ ಆಗಮಿಸಿರುವ ವಿ.ಸೋಮಣ್ಣ, ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸೋಮಣ್ಣಗೆ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದ್ದಾರೆ. ಅರ್ಧ ಗಂಟೆಗೂ ಹೆಚ್ಚುಕಾಲ ಮಾತನಾಡಿದ ನಾಯಕರು, ವರುಣಾ ಕ್ಷೇತ್ರದ ಚುನಾವಣೆ ಸಂಬಂಧ ಚರ್ಚೆ ನಡೆಸಿದ್ದು, ಸಿದ್ದರಾಮಯ್ಯ ಅವರನ್ನು ಸೋಲಿಸಲು ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

    ಎಲ್ಲವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ!

    ಸೋಮಣ್ಣ ಭೇಟಿ ನಂತರ ಮೈಸೂರಿನ ಜಯಲಕ್ಷ್ಮಿ ಪುರಂ ನಿವಾಸದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಮಾತನಾಡುತ್ತಾ, ವರುಣಾ ಕ್ಷೇತ್ರದ ಚುನಾವಣೆ ಸಂಬಂಧ‌ ಚರ್ಚೆ ಮಾಡಿದ್ದೇವೆ. ಎಲ್ಲವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಈ ಮೂವರು ಇನ್ಸ್​​ಪೆಕ್ಟರ್​​ಗಳನ್ನು ಕೂಡಲೇ ವರ್ಗಾವಣೆ ಮಾಡಿ; ಚುನಾವಣಾ ಅಧಿಕಾರಿಗೆ ದೂರು ನೀಡಿದ ಮಾಜಿ ಪ್ರಧಾನಿ

    ಶ್ರೀನಿವಾಸ್ ಪ್ರಸಾದ್ ಬಳಿ ಸೋಮಣ್ಣ ತಮ್ಮ ನೋವು ತೋಡಿಕೊಂಡರಾ? ಎಂಬ ಪ್ರಶ್ನೆ ಎದುರಾಗುತ್ತಿದ್ದಂತೆ, ನನ್ನದೊಂದು ರೀತಿ ಇಕ್ಕಟ್ಟಿನ ಸ್ಥಿತಿ‌ ಇದೆ. ಹೈಕಮಾಂಡ್ ಎರಡು ಕ್ಷೇತ್ರದಲ್ಲಿ ನಿಲ್ಲಲೇ ಬೇಕೆಂದು ಹೇಳಿದೆ. ಆ ಪ್ರಕಾರ ನಾನು ಚುನಾವಣೆಗೆ ನಿಲ್ಲಲೇಬೇಕಿದೆ. ಎರಡು‌ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಿರುವುದರ ಹಿಂದೆ ಯಾವುದೇ ಚುನಾವಣೆ ತಂತ್ರ ಇಲ್ಲ. ಎರಡು ಕಡೆ ನಿಲ್ಲುವುದರ ಬಗ್ಗೆ ಹೈಕಮಾಂಡ್ ಬಲವಂತದಿಂದ ನಿಲ್ಲುತ್ತಿದ್ದೇನೆ ಎಂದಿದ್ದಾರೆ ಎಂದು ಹೇಳಿದರು.

    ಸಿದ್ದರಾಮಯ್ಯ ವಿರುದ್ದು ಪ್ರಚಾರ ಮಾಡಬೇಕಿದೆ!

    ನಾನು ಸಿದ್ದರಾಮಯ್ಯ ಪರ ಚುನಾವಣೆ ಮಾಡುವುದಿಲ್ಲ, ಅವರ ವಿರುದ್ದು ಪ್ರಚಾರ ಮಾಡಲೇಬೇಕಿದೆ. ಚಾಮುಂಡೇಶ್ವರಿಯಲ್ಲೂ ವಿರೋಧ ಮಾಡಿದ್ದೆ, ಈಗಲೂ ವಿರೋಧ ಮಾಡುತ್ತೇನೆ. ರಾಮದಾಸ್​ಗೆ ಟಿಕೆಟ್ ಕೈ ತಪ್ಪಿರುವ ವಿಚಾರ ನನಗೆ ಗೊತ್ತಿಲ್ಲ. ಅಲ್ಲಿನ ಸ್ಥಳೀಯರ ಅಭಿಪ್ರಾಯದ ಜೊತೆಗೆ ಸಮೀಕ್ಷೆಗಳ ಆಧರಿಸಿ ಟಿಕೆಟ್ ನೀಡುತ್ತಿದ್ದಾರೆ ಎಂದು ಶ್ರೀನಿವಾಸ ಪ್ರವಾಸ್ ಹೇಳಿದ್ದಾರೆ.

    ಇದನ್ನೂ ಓದಿ: ಈಶ್ವರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಪಕ್ಷಕ್ಕಾಗಿ 30 ವರ್ಷ ದುಡಿದಿದ್ದಾರೆ; ಅವರಿಗೆ ಟಿಕೆಟ್ ಇಲ್ಲ ಎನ್ನುವುದು ಸರಿಯಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts