More

    ಬಿಜೆಪಿ 2ನೇ ಪಟ್ಟಿ ಬಿಡುಗಡೆ; ಈಶ್ವರಪ್ಪ, ಜಗದೀಶ್ ಶೆಟ್ಟರ್ ಕ್ಷೇತ್ರ ಇನ್ನೂ ಸಸ್ಪೆನ್ಸ್

    ಬೆಂಗಳೂರು: ಬಿಜೆಪಿ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್​ನಿಂದ ವಲಸೆ ಬಂದಿದ್ದ ನಾಗರಾಜ ಛಬ್ಬಿ ಅವರಿಗೆ ಕಲಟಗಿಯಲ್ಲಿ ಮಣೆ ಹಾಕಿದೆ. ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಶಿಕ್ಷಗೆ ಗುರಿಯಾಗಿದ್ದ ಹಾವೇರಿಯ ನೆಹರೂ ಓಲೇಕಾರ್​ ಹಾಗೂ ಮೂಡಿಗೆರೆಯ ಎಂ.ಪಿ. ಕುಮಾರಸ್ವಾಮಿ ಅವರಿಗೆ ಟಿಕೆಟ್​ ನಿರಾಕರಿಸಿದೆ.

    ಚನ್ನಗಿರಿಯಲ್ಲಿ ಕಳಂಕಿತ ಮಾಡಾಳ್​ ವಿರುಪಾಕ್ಷಪ್ಪ ಬದಲು ಶಿವಕುಮಾರ್​ಗೆ ಹಾಗೂ ಬೈಂದೂರಿನಲ್ಲಿ ಸುಕುಮಾರ್​ ಶೆಟ್ಟಿ ಬದಲು ಗುರುರಾಜ್​ ಗಂಟಿಹೊಳೆ ಟಿಕೆಟ್​ ನೀಡಲಾಗಿದೆ. ಕಲಟಗಿಯಲ್ಲೂ ಛಬ್ಬಿಗೆ ಟಿಕೆಟ್​ ನೀಡಿದ್ದರಿಂದ ಹಾಲಿ ಶಾಸಕ ನಿಂಬಣ್ಣವರ್​ಗೆ ಟಿಕೆಟ್​ ಕೈತಪ್ಪಿದೆ. ಮಾಯಕೊಂಡದಲ್ಲಿ ಶಾಸಕ ನಿಂಗಣ್ಣ ಬದಲು ಬಸವರಾಜ ನಾಯ್ಕ್​ ಅವಕಾಶ ಪಡೆದುಕೊಂಡಿದ್ದಾರೆ. ದಾವಣಗೆರೆ ಉತ್ತರದಲ್ಲಿ ರವೀಂದ್ರನಾಥ ರಾಜಕೀಯ ನಿವೃತ್ತಿ ಘೋಷಿಸಿದ್ದರಿಂದ ಲೋಕಿಕೆರೆ ನಾಗರಾಜ್​ ಅವಕಾಶ ಪಡೆದಿದ್ದಾರೆ.
    ಬಿಜೆಪಿ ಮಂಗಳವಾರ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಜಗದೀಶ್​ ಶೆಟ್ಟರ್​ ಪ್ರತಿನಿಧಿಸುವ ಹುಬ್ಬಳ್ಳಿ&ಧಾರವಾಡ, ಕೆ.ಎಸ್​. ಈಶ್ವರಪ್ಪ& ಶಿವಮೊಗ್ಗ, ಅರವಿಂದ ಲಿಂಬಾವಳಿ ಅವರ ಮಹಾದೇವಪುರ ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಇನ್ನೂ 13 ಕ್ಷೇತ್ರಗಳಿಗೆ ಪ್ರಕಟಿಸುವುದು ಬಾಕಿ ಇದೆ.

    ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಸಂಬಂಧಿ ಸಂತೋಷ್​ ಅರಸೀಕೆರೆಯಿಂದ ಆಕಾಂಯಾಗಿದ್ದರು. ಆದರೆ ಟಿಕೆಟ್​ ನಿರಾಕರಿಸುವ ಮೂಲಕ ಶಾಕ್​ ನೀಡಿದೆ. ಅರಸೀಕೆರೆಗೆ ಜಿವಿ ಬಸವರಾಜು ಅವರಿಗೆ ಟಿಕೆಟ್​ ನೀಡಲಾಗಿದೆ. ಮಾಜಿ ಸಚಿವ ಎಸ್​.ಕೆ. ಬೆಳ್ಳುಬ್ಬಿ ಅವರಿಗೆ ಬಸವನ ಬಾಗೇವಾಡಿಯಿಂದ ಟಿಕೆಟ್​ ನೀಡಲಾಗಿದೆ. ಹರಪ್ಪನಹಳ್ಳಿಯಿಂದ ಮಾಜಿ ಸಚಿವ ಕರುಣಾಕರ ರೆಡ್ಡಿ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಕೆಜಿಎ್​ನಲ್ಲಿ ಮಾಜಿ ಶಾಸಕ ಸಂಪಂಗಿ ಅವರ ಪತ್ನಿ ಅಶ್ವಿನಿಗೆ ಅವಕಾಶ ನೀಡಲಾಗಿದೆ.

    ಬಿಜೆಪಿ ಎರಡನೇ ಪಟ್ಟಿ

    ದೇವರ ಹಿಪ್ಪರಗಿ& ಸೋಮನಗೌಡ ಪಾಟೀಲ್​
    ಬಸವನಬಾಗೇವಾಡಿ& ಎಸ್​.ಕೆ.ಬೆಳ್ಳುಬ್ಬಿ
    ಇಂಡಿ& ಕೆ.ಬಿರಾದಾರ್​
    ಗುರುಮಿಟ್ಕಲ್​& ಲಲಿತಾ ಅನಾಪುರ್​
    ಬೀದರ್​& ಈಶ್ವರ್​ ಸಿಂಗ್​ ಠಾಕೂರ್​
    ಭಾಲ್ಕಿ& ಪ್ರಕಾಶ್​ ಖಂಡ್ರೆ
    ಗಂಗಾವತಿ& ಪರಣ್ಣ ಮುನವಳ್ಳಿ
    ಕಲಟಗಿ& ನಾಗರಾಜ ಛಬ್ಬಿ
    ಹಾನಗಲ್​& ಶಿವರಾಜ್​ ಸಜ್ಜನರ್​
    ಹಾವೇರಿ& ಗವಿಸಿದ್ದಪ್ಪ ದ್ಯಾಮಣ್ಣವರ್​
    ಹರಪನಹಳ್ಳಿ& ಕರುಣಾಕರ ರೆಡ್ಡಿ
    ದಾವಣಗೆರೆ ಉತ್ತರ& ಲೋಕೀಕೆರೆ ನಾಗರಾಜ್​
    ದಾವಣಗೆರೆ ದಣ& ಅಜಯ್​ ಕುಮಾರ್​
    ಮಾಯಕೊಂಡ& ಬಸವರಾಜ ನಾಯಕ್​
    ಚನ್ನಗಿರಿ& ಶಿವಕುಮಾರ್​
    ಬೈಂದೂರು& ಗುರುರಾಜ್​ ಗಂಟಿಹೊಳೆ
    ಮೂಡಿಗೆರೆ& ದೀಪಕ್​ ದೊಡ್ಡಯ್ಯ
    ಗುಬ್ಬಿ& ಎಸ್​.ಡಿ.ದಿಲೀಪ್​ ಕುಮಾರ್​
    ಶಿಡ್ಲಟ್ಟ& ರಾಮಚಂದ್ರ ಗೌಡ
    ಕೋಲಾರ ಗೋಲ್ಡ್​ ಫಿಲ್ಡ್ಡ್​& ಅಶ್ವಿನಿ ಸಂಪಂಗಿ
    ಶ್ರವಣಬೆಳಗೊಳ& ಚಿದಾನಂದ
    ಅರಸೀಕೆರೆ& ಜಿ.ವಿ.ಬಸವರಾಜು
    ಹೆಗ್ಗಡದೇವನಕೋಟೆ& ಕೃಷ್ಣಾ ನಾಯ್ಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts