More

    ತಾಯಿಯ ಸಾವಿನ ದುಖಃದಲ್ಲೂ ಪರೀಕ್ಷೆ ಬರೆದ SSLC ವಿದ್ಯಾರ್ಥಿನಿ

    ಹಾವೇರಿ: ಮಾ.25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಿದೆ.  ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಲ್ಲಿ ವಿದ್ಯಾರ್ಥಿಗಳು ನಿರತರಾಗಿದ್ದಾರೆ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ಹೆತ್ತ ತಾಯಿಯ ಸಾವಿನ ದುಖಃದ ಮಡುವಿನಲ್ಲೂ ಹೋಗಿ ಪರೀಕ್ಷೆ ಬರೆದು ಬಂದಿದ್ದಾಳೆ.

    ತಾಲೂಕಿನ ದೇವಗಿರಿ ಗ್ರಾಮದ ಸೃಷ್ಟಿ ಪಕ್ಕೀರಪ್ಪ ಪುರದ ಎಂಬ ವಿದ್ಯಾರ್ಥಿನಿ ಹೆತ್ತ ತಾಯಿಯ ಸಾವಿನ ದುಖಃದ ಮಡುವಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾಳೆ.

    ಸೃಷ್ಟಿ ಪುರದ ದೇವಗಿರಿಯ ಬಾಪೂಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಏ.1ರಂದು ರಾತ್ರಿ ಆಕೆಯ ತಾಯಿ ಮಂಜವ್ವ ಪುರದ ನಿಧನ ಹೊಂದಿದ್ದರು. ತಾಯಿಯ ಸಾವಿನ ದುಖಃದಲ್ಲೂ ಮಗಳು ಸೃಷ್ಟಿ ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ಗಣಿತ ಪರೀಕ್ಷೆ ಬರೆದಿದ್ದಾಳೆ.

    ಪರೀಕ್ಷೆ ಬರೆದು ಬಂದ ನಂತರ ಗ್ರಾಮದಲ್ಲಿ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾಳೆ. ಈ ಮೂಲಕ ಸೃಷ್ಟಿ ತಾಯಿಯ ಆಶಯದಂತೆ ಶಿಕ್ಷಣದ ಮಹತ್ವ ಸಾರಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts