More

    ಗುತ್ತಿಗೆ ಪಟ್ಟಿಯಿಂದ ಶ್ರೇಯಸ್​-ಇಶಾನ್​ಗೆ ಕೊಕ್; ಬಿಸಿಸಿಐ ನಿರ್ಧಾರದ ಕುರಿತು ಕ್ರಿಕೆಟ್ ದಿಗ್ಗಜ​ ಹೇಳಿದ್ದಿಷ್ಟು

    ನವದೆಹಲಿ: ಇತ್ತೀಚಿಗೆ ಬಿಡುಗಡೆ ಮಾಡಿದ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಹಲವು ಆಟಗಾರರಿಗೆ ಕೊಕ್​ ನೀಡುವ ಮೂಲಕ ಬಿಸಿಸಿಐ ಶಾಕ್​ ನೀಡಿತ್ತು. ಮುಖ್ಯವಾಗಿ ಇಶಾನ್​ ಕಿಶನ್​ ಹಾಗೂ ಶ್ರೇಯಸ್​ ಅಯ್ಯರ್​ಗೆ ಕೊಕ್​ ನೀಡುವ ಮುಲಕ ಶಾಕ್​ ನೀಡಿದ್ದ ಬಿಸಿಸಿಐ ಮುಂಬರುವ ಟಿ-20 ವಿಶ್ವಕಪ್​ಗೂ ಈ ಇಬ್ಬರು ಆಟಗಾರರನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅನುಮಾನ ಎಂದು ಹೇಳಲಾಗಿದೆ.

    ಇನ್ನು ಈ ಇಬ್ಬರು ಆಟಗಾರರನ್ನು ಗುತ್ತಿಗೆ ಪಟ್ಟಿಯಿಂದ ಕೈ ಬಿಟ್ಟ ವಿಚಾರ ಕ್ರೀಡಾ ವಲಯದಲ್ಲಿ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿತ್ತು. ಈ ವಿಚಾರವಾಗಿ ಪರ-ವಿರೋಧದ ಚರ್ಚೆಗಳು ನಡೆದಿದ್ದವು. ಇದೀಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕ್ರಿಕೆಟ್​ ದಿಗ್ಗಜ ಕಪಿಲ್​ ದೇವ್​ ಬಿಸಿಸಿಐ ಕ್ರಮವನ್ನು ಬೆಂಬಲಿಸಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆಯನ್ನು ಒಂದನ್ನು ಬಿಡುಗಡೆ ಮಾಡಿದ್ದಾರೆ.

    ಬಿಸಿಸಿಐನ ಈ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ. ಏಕೆಂದರೆ ಈ ರೀತಿಯ ನಿರ್ಧಾರಗಳು ಕೆಲವರಿಗೆ ನೋವಾಗುತ್ತದೆ. ಆದರೆ, ಅವರೆಲ್ಲರೂ ಒಂದು ನೆನಪಿಡಬೇಕಾದ ವಿಚಾರ ಏನೆಂದರೆ ದೇಶಕ್ಕಿಂತ ಯಾರು ದೊಡ್ಡವರಲ್ಲ ಎಂಬುದನ್ನು. ದೇಶೀಯ ಕ್ರಿಕೆಟ್‌ನ ಸ್ಥಾನಮಾನವನ್ನು ರಕ್ಷಿಸಲು ಅಗತ್ಯವಿರುವ ಕ್ರಮವನ್ನು ತೆಗೆದುಕೊಂಡಿದ್ದಕ್ಕಾಗಿ ನಾನು ಬಿಸಿಸಿಐ ಅನ್ನು ಅಭಿನಂದಿಸುತ್ತೇನೆ. ಆಟಗಾರರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಶುರು ಮಾಡಿದ ತಕ್ಷಣ ದೇಶೀಯ ಕ್ರಿಕೆಟ್​ನತ್ತ ಮುಖ ಮಾಡದೆ ಇರುವುದನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಬಿಸಿಸಿಐನ ಈ ಕ್ರಮವನ್ನು ನಾನು ಬೆಂಬಲಿಸುತ್ತೇನೆ ಎಂದು ಕ್ರಿಕೆಟ್​ ದಿಗ್ಗಜ ಕಪಿಲ್​ ದೇವ್​ ಹೇಳಿದ್ದಾರೆ.

    ಇದನ್ನೂ ಓದಿ: ಅತಿ ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ ಮಾಜಿ ಮಿಸ್​ ಇಂಡಿಯಾ

    ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್​ ಸರಣಿಗೂ ಮುನ್ನ ತಂಡದಲ್ಲಿದ್ದ ಇಶಾನ್​ ಕಿಶನ್​ ವೈಯಕ್ತಿಕ ಕಾರಣಗಳನ್ನು ನೀಡಿ ತವರಿಗೆ ಮರಳಿದ್ದರು. ಆ ನಂತರ ಅವರಿಗೆ ರಣಜಿ ಟ್ರೋಫಿಯಲ್ಲಿ ಆಡುವಂತೆ ಬಿಸಿಸಿಐ ಸೂಚಿಸಿತ್ತು. ಆದರೆ, ಬಿಸಿಸಿಐ ಮಾತನ್ನು ದಿಕ್ಕರಿಸಿದ್ದ ಇಶಾನ್​ ತಮ್ಮ ತವರು ತಂಡವನ್ನು ಕೂಡಿಕೊಂಡಿರಲಿಲ್ಲ.

    ಪ್ರಸ್ತುತ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯ ಮೊದಲೆರಡು ಪಂದ್ಯಗಳನ್ನು ಆಡಿದ್ದ ಶ್ರೇಯಸ್​ ಅಯ್ಯರ್ ಗಾಯಗೊಂಡ ಪರಿಣಾಮ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಗುಣಮುಖರಾದ ಬಳಿಕ ಶ್ರೇಯಸ್​ಗೂ ರಣಜಿ ಆಡುವಂತೆ ಹೇಳಲಾಗಿತ್ತು. ಆದರೆ ಅಯ್ಯರ್ ಬಿಸಿಸಿಐ ಆದೇಶವನ್ನು ದಿಕ್ಕರಿಸಿದ ಪರಿಣಾಮ ಶ್ರೇಯಸ್​ ಅಯ್ಯರ್​ಗೂ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೊಕ್​ ನೀಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts