More

    ಪಾಳು ಬಿದ್ದ ವಾಣಿಜ್ಯ ಮಳಿಗೆಗಳು, ಪುರಸಭೆ ಆದಾಯಕ್ಕೆ ಕೊಕ್ಕೆ

    ಕಂಪ್ಲಿ: ಪಟ್ಟಣದ ಮಾರುತಿನಗರ, ಹಳೇ ಬಸ್ ನಿಲ್ದಾಣದಲ್ಲಿನ ಪುರಸಭೆ ವಾಣಿಜ್ಯ ಮಳಿಗೆಗಳು ಬಾಡಿಗೆದಾರರಿಲ್ಲದೆ ಭಣಗುಡುತ್ತಿವೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಮಳಿಗೆಗಳಿಂದ ನಿರೀಕ್ಷಿತ ಆದಾಯವೂ ಇಲ್ಲದಂತಾಗಿದೆ.

    ಇದನ್ನೂ ಓದಿ: ಮಾದರಿ ತಾಲೂಕನ್ನಾಗಿಸಲು ಸಹಕರಿಸಿ

    ಪುರಸಭೆಯ 92 ಮಳಿಗೆಗಳಿವೆ. ಇವುಗಳಲ್ಲಿ ಮಾರುತಿನಗರದ 9, ಹಳೇ ಬಸ್ ನಿಲ್ದಾಣದ 9 ಸೇರಿ 17 ಮಳಿಗೆಗಳು ಬಾಡಿಗೆದಾರರು ಇಲ್ಲದೆ ಪಾಳು ಬಿದ್ದಿವೆ. ಪುರಸಭೆ ಮಳಿಗೆಗಳಿಂದ ವಾರ್ಷಿಕ 27 ಲಕ್ಷ ರೂ. ಆದಾಯವಿದೆ.

    ಪ್ರಸ್ತುತ 12 ಅಂಗಡಿ ಬಾಡಿಗೆದಾರರು ಹೆಚ್ಚಿನ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಒಟ್ಟು ಬಡ್ಡಿ ಸೇರಿ 17.07ಲಕ್ಷ ರೂ. ಪುರಸಭೆಗೆ ಬರಬೇಕಿದೆ.

    ಮಾರುತಿನಗರದ ಎಡಭಾಗದಲ್ಲಿ ಎಸ್‌ಜೆಎಸ್‌ಆರ್ ಯೋಜನೆಯಡಿ ಅಂದಾಜು 17 ಲಕ್ಷ ರೂ.ವೆಚ್ಚದಲ್ಲಿ ಸುಮಾರು ಹದಿನೇಳು ವರ್ಷಗಳ ಹಿಂದೆ ಪುರಸಭೆ ನಿರ್ಮಿಸಿದ ಒಂಬತ್ತು ಮಳಿಗೆಗಳಿಗೆ ಈತನಕ ಒಬ್ಬ ಬಾಡಿಗೆದಾರ ಬಂದಿಲ್ಲ. ಇದೇ ರೀತಿ ಹಳೇ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ 9 ಮಳಿಗೆಗಳ ಪರಿಸ್ಥಿತಿ ಭಿನ್ನವಾಗಿಲ್ಲ.

    ಮಾರುತಿನಗರದ 9 ಮಳಿಗೆಗಳ ಬಾಡಿಗೆಗಾಗಿ ಮೂರು ಬಾರಿ ಹಾಗೂ ಹಳೇ ಬಸ್ ನಿಲ್ದಾಣ ಮಳಿಗೆಗಳಿಗೆ ಈಗಾಗಲೇ ಒಮ್ಮೆ ಟೆಂಡರ್ ಕರೆದರೂ ಯಾರೂ ಬರುತ್ತಿಲ್ಲ. ಬಾಡಿಗೆದಾರರು ಕಡಿಮೆ ಬಾಡಿಗೆ ನಿರೀಕ್ಷಿಸುತ್ತಿದ್ದಾರೆ. ಬಾಕಿ ಉಳಿಸಿಕೊಂಡಿರುವ ಬಾಡಿಗೆ ವಸೂಲಾತಿಗೆ ಕ್ರಮಕೈಗೊಳ್ಳಲಾಗಿದೆ.
    | ಕೆ.ದುರುಗಣ್ಣ, ಪುರಸಭೆ ಮುಖ್ಯಾಧಿಕಾರಿ, ಕಂಪ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts