More

    ಮಾದರಿ ತಾಲೂಕನ್ನಾಗಿಸಲು ಸಹಕರಿಸಿ

    ಕಂಪ್ಲಿ: ಅಧಿಕಾರಿಗಳು ಪರಸ್ಪರ ಒಗ್ಗೂಡಿ, ಸಹಕರಿಸುವ ಮೂಲಕ ಕಂಪ್ಲಿಯನ್ನು ಮಾದರಿ ತಾಲೂಕನ್ನಾಗಿ ರೂಪಿಸುವಲ್ಲಿ ಶ್ರಮವಹಿಸಬೇಕು ಎಂದು ತಹಸೀಲ್ದಾರ್ ಶಿವರಾಜ ಹೇಳಿದರು.

    ಇದನ್ನೂ ಓದಿ: ಜಿಲ್ಲೆಯ 3 ತಾಲೂಕುಗಳು ಬರಪೀಡಿತ; ಕಲಘಟಗಿ, ಅಳ್ನಾವರ, ಅಣ್ಣಿಗೇರಿ ಸೇರ್ಪಡೆ

    ಇಲ್ಲಿನ ತಹಸಿಲ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಮಹತ್ವಾಕಾಂಕ್ಷಿ ತಾಲೂಕು ಯೋಜನೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇಲಾಖೆಯ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಿಸಲು ಅಧಿಕಾರಿಗಳು ಮುಂದಾಗಬೇಕು. ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸಿ ಭೂಮಿ ಬರಡು ಆಗುವುದನ್ನು ತಪ್ಪಿಸಬೇಕು ಎಂದರು.

    ಜಿಪಂ ಮುಖ್ಯಯೋಜನಾಧಿಕಾರಿ ಎಸ್.ಎಂ.ವಾಗೀಶಶಿವಾಚಾರ್ಯ ಮಾತನಾಡಿ, ಗ್ರಾಮೀಣ ಜನರನ್ನು ಆರ್ಥಿಕವಾಗಿ ಬಲಪಡಿಸುವಲ್ಲಿ ಗ್ರಾಮಾಡಳಿತ ಪ್ರಮುಖ ಪಾತ್ರವಹಿಸುತ್ತದೆ. ಸ್ವಚ್ಛತೆ, ಆರೋಗ್ಯ, ಶಿಕ್ಷಣದೊಂದಿಗೆ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವಲ್ಲಿ ಮುಂದಾಗಬೇಕು ಎಂದರು.

    ಕೃಷಿ, ಆರೋಗ್ಯ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸೇರಿ ವಿವಿಧ ಇಲಾಖಾಧಿಕಾರಿಗಳು ಯೋಜನೆಗಳ ಕುಂದುಕೊರತೆ ಕುರಿತು ಪ್ರಸ್ತುತಪಡಿಸಿದರು. ತಾಲೂಕಿನ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಉತ್ಪಾದಿಸಿದ ಕರಕುಶಲ, ಆಹಾರ ಪದಾರ್ಥಗಳ ಮಾರಾಟ ಮಳಿಗೆಗಳಿದ್ದವು. ಇಲಾಖೆಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಗೌರವಿಸಲಾಯಿತು.

    ತಾಪಂ ಇಒ ಆರ್.ಕೆ.ಶ್ರೀಕುಮಾರ್, ಅಧಿಕಾರಿಗಳಾದ ಕೆ.ಎಸ್.ಮಲ್ಲನಗೌಡ, ಕೆ.ದುರುಗಣ್ಣ, ಟಿ.ಎಂ.ಬಸವರಾಜ್, ಡಾ.ಅರುಣ್‌ಕುಮಾರ್, ಡಾ.ರವೀಂದ್ರ ಕನಕೇರಿ, ಶ್ರೀಧರ್, ಮಹ್ಮದ್‌ಶಫಿ, ಶ್ರೀಕಾಂತ್ ವಾಲ್ಮೀಕಿ, ಜಿ.ಪ್ರದೀಪ್, ಬಸವರಾಜ, ವೆಂಕೋಬಪ್ಪ, ಡಾ.ಕೆ.ಯು.ಬಸವರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts