More

    ಲಕ್ಷ ರೂ.ವೇತನವಿದ್ದರೂ ನೆಮ್ಮದಿಯಿಲ್ಲ

    ಸಿಂಧನೂರು: ಇಂದಿನ ವಿದ್ಯಾರ್ಥಿಗಳ ಪುಸ್ತಕದೊಂದಿಗೆ ನಂಟು ಹೊಂದಿದಾಗ ಜೀವನದಲ್ಲಿ ಸಾಧಿಸಲು ಸಾಧ್ಯ ಎಂದು ಕಾಲೇಜ್ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಚ್.ಎಂ.ಭೂತನಾಳ ಹೇಳಿದರು.

    ಸೇವಾಕರ್ತರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ

    ನಗರದ ಸರ್ಕಾರಿ ಪದವಿ ಕಾಲೇಜ್‌ನಲ್ಲಿ ಬುಧವಾರ ಸುವರ್ಣ ಸಂಭ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಸೇವಾಕರ್ತರಿಗೆ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಜನರು ಶ್ರಮ ಪಡುತ್ತಿಲ್ಲ. ಇದರಿಂದ ಜೀವನ ಕಷ್ಟವಾಗಿದೆ. ಸೇವೆಗೆ ಸೇರಿದಾಗ 1050 ರೂ. ವೇತನ ಇತ್ತು. ಇವತ್ತು ಅದು ಲಕ್ಷ ರೂ. ಆಗಿದೆ. ಆದರೆ ಅಂದಿನ ನೆಮ್ಮದಿ ಇಂದಿಲ್ಲ ಎಂದರು.

    ಇದನ್ನೂ ಓದಿ: ಮಾಫಿಯಾದಲ್ಲೊಂದು ರೊಮ್ಯಾಂಟಿಕ್ ಸಾಂಗ್ ; ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ ನಟಿಸುತ್ತಿರುವ ಕ್ರೈಂ ಥ್ರಿಲ್ಲರ್

    ಪ್ರಪಂಚ ಬೆಳೆಯುತ್ತಿರುವುದು ಪ್ರಶ್ನೆಯಿಂದ, ಅದನ್ನು ನಾವು ಅರಿತಿಲ್ಲ. ಕ್ಲಾಸ್‌ರೂಂಗಳು ಪ್ರವಚನವಾಗದೆ, ಪ್ರಶ್ನೆಗಳ ಮಳೆ ಸುರಿಸಬೇಕು. ಹಿರಿಯರ ಮಾರ್ಗದರ್ಶನಲ್ಲಿ ಬದುಕು ಕಟ್ಟಿಕೊಂಡಾಗ ತಪ್ಪುಗಳು ಮರುಕಳಿಸುವುದಿಲ್ಲ. ಅನುಭವದ ಮಾತುಗಳು ಅವರಲ್ಲಿರುತ್ತವೆ ಎಂದರು.
    ಕೆಒಎಫ್ ಅಧ್ಯಕ್ಷ ಹಾಗೂ ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ಮಹಾವಿದ್ಯಾಲಯ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ತಾಲೂಕಿನಲ್ಲಿ ಮಾದರಿಯ ಕ್ರೀಡಾಂಗಣ ನಿರ್ಮಾಣ ಮಾಡಿಕೊಡಲಾಗಿದೆ. ಅಗತ್ಯ ಕಟ್ಟಡಗಳನ್ನು ಒದಗಿಸಲಾಗಿದೆಂದರು.
    ರಾಯಚೂರು ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಎಂ.ಯರಿಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಾಲೇಜ್‌ನಲ್ಲಿ ಉನ್ನತ ಶಿಕ್ಷಣದ ಸೌಲಭ್ಯವಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಪ್ರಾಚಾರ್ಯ ಪ್ರಹ್ಲಾದರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಅಮರೇಗೌಡ ವಿರೂಪಾಪುರ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ತಾಲೂಕಾಧ್ಯಕ್ಷೆ ಸರಸ್ವತಿ ಪಾಟೀಲ್, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಚಂದ್ರಶೇಖರ ಹಿರೇಮಠ, ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯ ಅಮರೇಶ ಮಾಡಸಿರವಾರ, ಪ್ರಮುಖರಾದ ನಿರುಪಾದೆಪ್ಪ ಗುಡಿಹಾಳ, ತಿಮ್ಮಣ್ಣ ಸಾಹುಕಾರ, ಸಂಗೀತ ಸಾರಂಗಮಠ, ಹನುಮೇಶ ನಾಯಕ, ಬಸವರಾಜ ಇದ್ದರು. ಸಹಾಯಕ ಪ್ರಾಧ್ಯಾಪಕ ಹನುಮನಗೌಡ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts