More

    ಶಿಕ್ಷಣ ಇಲಾಖೆ ಆದೇಶ ಹಿಂಪಡೆಯಲಿ, ಅತಿಥಿ ಉಪನ್ಯಾಸಕರ ಒಕ್ಕೂಟ ಪ್ರತಿಭಟನೆ

    ದೇವದುರ್ಗ: ಉನ್ನತ ಶಿಕ್ಷಣ ಇಲಾಖೆ ಜ.14ರಂದು ಹೊರಡಿಸಿರುವ ಅವೈಜ್ಞಾನಿಕ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ತಾಲೂಕು ಆಡಳಿತ ಸೌಧದ ಎದುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟ ಮಂಗಳವಾರ ಪ್ರತಿಭಟನೆ ನಡೆಸಿತು.

    ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಅವೈಜ್ಞಾನಿಕ, ಅಮಾನವೀಯ ಮತ್ತು ಅಸಂವಿಧಾನಿಕವಾಗಿದೆ. ಇಲಾಖೆ ಅದೇಶ ರಾಜ್ಯದ ಸುಮಾರು 8500 ಉಪನ್ಯಾಸಕರಿಗೆ ಮರಣ ಶಾಸನವಾಗಲಿದೆ. ಸಂವಿಧಾನ ಬದ್ಧವಾದ ಉದ್ಯೋಗ ಹಕ್ಕು ಕಸಿದುಕೊಂಡು ನಿರುದ್ಯೋಗಿಗಳನ್ನಾಗಿ ಮಾಡಲಿದೆ. ಸರ್ಕಾರದ ಅಧೀನದಲ್ಲಿ ದುಡಿಯುವ ಉಪನ್ಯಾಸಕರನ್ನು ಏಕಾಏಕಿ ತೆಗೆದು ಹಾಕಿದರೆ ಅವರು ಹೇಗೆ ಜೀವನ ನಡೆಸಬೇಕು ಎಂದು ದೂರಿದರು.

    ರಾಜ್ಯದಲ್ಲಿ ಹಲವು ವರ್ಷಗಳಿಂದ ಸುಮಾರು 14500 ಜನರು ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸಮರ್ಪಕ ವೇತನ, ಉದ್ಯೋಗ ಭದ್ರತೆ, ಸೌಲಭ್ಯವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಉನ್ನತ ಶಿಕ್ಷಣ ಸುಧಾರಣೆಗೆ ಅತಿಥಿ ಉಪನ್ಯಾಸಕರು ಕೊಡುಗೆ ನೀಡಿದ್ದಾರೆ. ಅವಶ್ಯವಿದ್ದಾಗ ಬಳಸಿಕೊಂಡು ಈಗ ಕೈಬಿಡುವ ನಿರ್ಧಾರ ಮೋಸದ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ 14500 ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts