More

    ವಾಟ್ಯಾಪ್ ಗ್ರೂಪ್‌ನಿಂದ ಪಾಕ್ ಕ್ರಿಕೆಟಿಗರು ಎಕ್ಸಿಟ್! ಕಾರಣವೇನು ಗೊತ್ತೇ?

    ಕರಾಚಿ: ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಎಲ್ಲವೂ ಸರಿಯಿಲ್ಲ. ಆಟಗಾರರ ನಡುವೆ ಮೈಮನಸ್ಸು, ತಂಡದ ಕೋಚ್ ವಿರುದ್ಧವೇ ಧ್ವನಿ ಎತ್ತುವುದು ಸರ್ವೆಸಾಮಾನ್ಯ. ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕ್ರಿಕೆಟ್ ಮಂಡಳಿ ಕೈಬಿಟ್ಟಿದ್ದೆ ತಡ, ಇಬ್ಬರು ಆಟಗಾರರ ಕೋಪ ನೆತ್ತಿಗೇರಿದೆ. ಫಿಟ್ನೆಸ್, ತರಬೇತಿ ಸೇರಿದಂತೆ ಇನ್ನಿತರ ಮಾಹಿತಿಗಾಗಿ ಮುಖ್ಯಕೋಚ್ ಮಾಡಿದ್ದ ವಾಟ್ಸಾಪ್ ಗುಂಪಿನಿಂದಲೇ ಹೊರಹೋಗುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

    ಇದನ್ನೂ ಓದಿ: VIDEO: ಕೊಹ್ಲಿಯನ್ನು ಹೋಲುವ ಡೈನಾಸರಸ್ ಸೆರೆ ಹಿಡಿದ ಅನುಷ್ಕಾ!

    ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ (ಪಿಸಿಬಿ) ಪ್ರಕಟಿಸಿದ ಆಟಗಾರರ ಕೇಂದ್ರ ಗುತ್ತಿಗೆ ಪಟ್ಟಿಯಿಂದ ವೇಗಿಗಳಾದ ಮೊಹಮದ್ ಅಮಿರ್ ಹಾಗೂ ಹಸನ್ ಅಲಿ ಹೆಸರನ್ನು ಕೈಬಿಡಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಆಟಗಾರರು ವಾಟ್ಸಾಪ್ ಗುಂಪಿನಿಂದ ಹೊರ ಹೋಗಿದ್ದಾರೆ. ಇದು ಪಾಕ್ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ‘ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡ ಆಟಗಾರರು ಗುಂಪಿನಲ್ಲಿ ಇರಲೇಬೇಕು ಅಂತ ನಿಯಮವಿಲ್ಲ’ ಎಂದು ಪಿಸಿಬಿ ಮೂಲಗಳು ತಿಳಿಸಿವೆ. ಪಿಸಿಬಿ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಲುವಾಗಿ ಆಟಗಾರರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಮಾಜಿ ಟೆಸ್ಟ್ ಆಟಗಾರರೊಬ್ಬರ ಅಭಿಪ್ರಾಯ.

    ಇದನ್ನೂ ಓದಿ: ಅಪ್ಪ ಲಂಚ ನೀಡದ ಕಾರಣ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ: ವಿರಾಟ್​ ಕೊಹ್ಲಿ

    ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಹಸನ್ ಶಸಚಿಕಿತ್ಸೆಗೆ ಒಳಗಾಗಬೇಕಿದೆ. ಇದರಿಂದ ಕನಿಷ್ಠ 6 ರಿಂದ 8 ತಿಂಗಳು ವಿಶ್ರಾಂತಿಯ ಅಗತ್ಯವಿದೆ. ಹಸನ್ ಹಾಗೂ ಅಮಿರ್ ಫಿಟ್ನೆಸ್ ಕುರಿತು ಕೆಲವೊಂದು ಸಲಹೆ ನೀಡಬೇಕಿತ್ತು. ಆದರೆ, ಈ ವೇಳೆ ವಾಟ್ಯಾಪ್ ಗುಂಪು ಬಿಟ್ಟಿದ್ದು ಒಳ್ಳೆದಲ್ಲ ಎನ್ನುತ್ತಾರೆ ಪಿಸಿಬಿಯ ಟ್ರೇನರ್‌ವೊಬ್ಬರು. ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಪಡೆಯದಿದ್ದರೂ ವೇಗಿ ವಾಹಜ್ ರಿಯಾಜ್ ಗುಂಪಿನಲ್ಲೆ ಮುಂದುವರಿದಿದ್ದಾರೆ. ಪಿಸಿಬಿ ಟ್ರೇನರ್‌ಗಳು, ಸಹಾಯಕ ಸಿಬ್ಬಂದಿ, ರಾಷ್ಟ್ರೀಯ ಆಟಗಾರರು ಒಳಗೊಂಡಂತೆ ಮಿಸ್ಬಾ ಉಲ್ ಹಕ್ ವಾಟ್ಯಾಪ್ ಗುಂಪು ರಚಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಉಳಿದಿರುವ ಆಟಗಾರರಿಗೆ ಆನ್‌ಲೈನ್ ಮೂಲಕ ಫಿಟ್ನೆಸ್ ತರಗತಿ ತೆಗೆದುಕೊಳ್ಳುವ ಸಲುವಾಗಿ ಮಿಸ್ಬಾ ಗುಂಪು ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts