More

  ನೇಪಾಳ ಬ್ಯಾಂಕ್​ನಲ್ಲಿವೆ 7 ಕೋಟಿ ರೂಪಾಯಿ ಹಳೆಯ ನೋಟುಗಳು: ಬದಲಾಯಿಸಿ ಕೊಡಲು ಭಾರತಕ್ಕೆ ಅಲ್ಲಿನ ಸಚಿವರ ಮನವಿ

  ಭಾರತ ಸರ್ಕಾರ 8 ನವೆಂಬರ್​ 2016ರಂದು 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿತು. ಸರ್ಕಾರದ ಈ ನಡೆಯಿಂದ ಕಪ್ಪು ಹಣದ ನಿಯಂತ್ರಣಕ್ಕೆ ಕಡಿವಾಣ ಬಿದ್ದಿತ್ತು.

  ನೋಟು ಅಮಾನ್ಯಿಕರಣದಿಂದ ನೇಪಾಳದಲ್ಲಿ 7 ಕೋಟಿ ರೂಪಾಯಿ ಹಳೇ ನೋಟುಗಳು ಅಲ್ಲಿನ ಸೆಂಟ್ರಲ್​ ಬ್ಯಾಂಕ್​ನಲ್ಲಿ ಜಮೆ ಆಗಿವೆ. ಇವುಗಳನ್ನು ಬದಲಾಯಿಸಿಕೊಡಿ ಎಂದು ಈಗ ಭಾರತದ ಸರ್ಕಾರಕ್ಕೆ ದುಂಬಾಲು ಬಿದ್ದಿದೆ.

  ಈ ನೋಟುಗಳನ್ನು ಭಾರತ ಸರ್ಕಾರ ಹೊಂದಾಣಿಕೆ ಮಾಡುತ್ತಿಲ್ಲ ಎಂದು ನೇಪಾಳದ ವಿದೇಶಾಂಗ ಸಚಿವ ಪ್ರದೀಪ್​ಕುಮಾರ್​ ಗ್ಯಾವಾಲಿ ದೂರಿದ್ದಾರೆ.

  ಅನೌಪಚಾರಿಕ ವ್ಯವಹಾರಗಳ ಮೂಲಕ ನಡೆದ ವಹಿವಾಟಿನ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ಇದು ಬ್ಯಾಂಕಿಂಗ್ ಚಾನೆಲ್ ಮೂಲಕ ನಡೆದಿರುವ ವ್ಯವಹಾರ. ಹಾಗಾಗಿ ಬಾಕಿ ಇರುವ ಈ ವಿಷಯದ ಬಗ್ಗೆ ಯೋಚಿಸುವಂತೆ ನಾನು ಭಾರತಕ್ಕೆ ವಿನಂತಿಸುತ್ತಿದ್ದೇನೆ ಎಂದಿದ್ದಾರೆ.

  ಭಾರತದಲ್ಲಿ ಜಾರಿ ಇರುವ ನೋಟುಗಳನ್ನು ಉಪ ಖಂಡಗಳಾದ ಭೂತಾನ್​ ಮತ್ತು ನೇಪಾಳದಲ್ಲಿ ಬಳಸಲಾಗುತ್ತದೆ. ನವೆಂಬರ್​ 8 ರ ಹೊತ್ತಿಗೆ ನೇಪಾಳದಲ್ಲಿ 500 ಮತ್ತು 1000 ರೂಪಾಯಿ ನೋಟುಗಳು 15.41 ಲಕ್ಷ ಕೋಟಿಯಷ್ಟು ವಹಿವಾಟು ನಡೆದಿದೆ. ಇದರಲ್ಲಿ ಶೇ.99.3 ನೋಟುಗಳು ಬ್ಯಾಂಕ್​ಗಳಿಗೆ ಜಮಾ ಆಗಿದೆ.

  “ಈ ಬಗ್ಗೆ ಅಂತಿಮ ತೀರ್ಮಾನ ಭಾರತಕ್ಕೆ ಬಿಟ್ಟದ್ದು. ಕಳೆದ ವರ್ಷಗಳಿಂದ ನಾವು ಮನವಿ ಮಾಡುತ್ತಿದ್ದೇವೆ. ಭಾರತವು ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ” ಎಂದು ಸಚಿವ ಪ್ರದೀಪ್​ಕುಮಾರ್​ ಹೇಳಿದ್ದಾರೆ. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts