More

    10 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹ

    ವಿಜಯವಾಣಿ ಸುದ್ದಿಜಾಲ ಮುಂಡರಗಿ

    ತಾಲೂಕಿನ ಕಪ್ಪತಗುಡ್ಡದ ಪವನ ವಿದ್ಯುತ್ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ವಿುಕರ ಹತ್ತು ತಿಂಗಳ ಬಾಕಿ ವೇತನ ನೀಡುವುದು ಹಾಗೂ ತೆಗೆದು ಹಾಕಲಾದ ಭದ್ರತಾ ಸಿಬ್ಬಂದಿಯನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಭದ್ರತಾ ಸಿಬ್ಬಂದಿ ಕುಟುಂಬ ಸಮೇತ ತಹಸೀಲ್ದಾರ್ ಕಚೇರಿ ಮುಂದೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಶುಕ್ರವಾರ ನಾಲ್ಕು ದಿನ ಪೂರೈಸಿತು.

    ಪ್ರತಿಭಟನಾಕಾರರು ಕಪ್ಪುಪಟ್ಟಿ ಧರಿಸಿ ಸುಜಲಾನ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಲಾವಿದರಾದ ಬಸಯ್ಯ ಗದಗಿನಮಠ, ನಿಂಗಪ್ಪ ಗುಡ್ಡದ ಇತರರು ಬೆಂಬಲ ಸೂಚಿಸಿದರು.

    ಜಾನಪದ ಕಲಾವಿದ ಪುಟ್ಟರಾಜ ಹಿರೇಮಠ ಮಾತನಾಡಿ, ಸುಜಲಾನ್ ಕಂಪನಿಯು ಕಾರ್ವಿುಕರ ಬದುಕಿನ ಜೊತೆಗೆ ಆಟವಾಡುತ್ತಿದೆ. ಪ್ರತಿಭಟನಾಕಾರರನ್ನು ಧಿಕ್ಕರಿಸಿದರೆ ಹೋರಾಟದ ಸ್ವರೂಪ ಬದಲಾಗುತ್ತದೆ ಎಂದರು. ಜಿಲ್ಲಾ ಯುವ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಬಸಯ್ಯ ಗದಗಿನಮಠ, ವಕೀಲ ಎಸ್.ಕೆ. ನದಾಫ್ ಮಾತನಾಡಿದರು.

    ಅಸ್ವಸ್ಥರಾದ ಕಾರ್ವಿುಕರು: ನಾಲ್ಕನೇ ದಿನದ ಅಹೋರಾತ್ರಿ ಧರಣಿ ನಿರತ ಕಾರ್ವಿುಕರಾದ ಶಿವಪ್ಪ ಪೂಜಾರ, ಲೋಕೇಶ ಪಾಟೀಲ, ಮಂಜುನಾಥ ಪೂಜಾರ, ಪರಮೇಶ ಪೂಜಾರ, ಮಂಜುನಾಥ ಹಡಪದ ತೀವ್ರ ಅಸ್ವಸ್ಥಗೊಂಡು ನೆಲಕ್ಕೆ ಕುಸಿದು ಬಿದ್ದರು. ಸ್ಥಳಕ್ಕೆ ಆಯುರ್ವೆದ ಆಸ್ಪತ್ರೆ ವೈದ್ಯರು ಭೇಟಿ ನೀಡಿ ತಪಾಸಣೆ ನಡೆಸಿ ನಂತರ ಆಯುರ್ವೆದ ಕಾಲೇಜ್ ಅಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರು.

    ನೂರಹ್ಮದ ಮಕಾಂದಾರ ಮಾತನಾಡಿ, ‘ಪ್ರತಿಭಟನಾಕಾರರು ಅಸ್ವಸ್ಥಗೊಂಡರೂ ತಾಲೂಕು ಆರೋಗ್ಯ ಇಲಾಖೆಯ ಯಾವೊಬ್ಬ ವೈದ್ಯರೂ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿಲ್ಲ. ಕಾರ್ವಿುಕರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದು ನೋವಿನ ಸಂಗತಿ ಎಂದರು.

    ಪ್ರಕಾಶ ದಂಡಿನ, ಈರಣ್ಣ ಮರಡೂರ, ಎನ್.ಟಿ. ಪೂಜಾರ, ವೀರೇಶ ಹುಬ್ಬಳ್ಳಿ, ನಿಂಗವ್ವ ಇಂಡಿ, ಸುಶೀಲಾ ಹಾರೋಗೇರಿ, ಲಕ್ಷ್ಮೀ ಬಾರಕೇರ, ಸೈಜಾನ್ ನದಾಫ್, ದಾವಲಬಿ ಮುಂಡರಗಿ, ದಾಕ್ಷಾಯಿಣಿ ರ್ಯಾವಣ್ಣವರ, ಖಾಜಾಬಿ ಖತೀಬ್, ಜಾಬಿದಬೇಗಂ ಪಿಂಚಾರ, ಬೀರಪ್ಪ ಸಂಗಟಿ, ಮಹೇಶ ಗೌರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts