More

    ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ

    ಚಾಮರಾಜನಗರ: ಸರ್ಕಾರ ಆದೇಶ ನೀಡಿ ಎರಡು ತಿಂಗಳಾದರೂ ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅರಿಷಿಣ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ಆರಂಭಿಸಿದ್ದಾರೆ.

    ರಾಜ್ಯ ಅರಿಷಿಣ ಬೆಳೆಗಾರರ ಒಕ್ಕೂಟದ ಸಂಚಾಲಕ ಎಸ್.ಎಂ.ನಾಗಾರ್ಜುನಕುಮಾರ್ ಮಾತನಾಡಿ, ತಾಲೂಕಿನ ರೈತರು ಈ ಸಾಲಿನಲ್ಲಿ 33 ಸಾವಿರ ಎಕರೆಗೂ ಹೆಚ್ಚು ಭೂಮಿಯಲ್ಲಿ ಬೆಳೆದಿದ್ದ ಸೂರ್ಯಕಾಂತಿ ಬೆಳೆ ಕಟಾವಾಗಿದೆ. ಆದರೆ, ಆರಂಭದಿಂದಲೂ ಬೆಲೆಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಸೂರ್ಯಕಾಂತಿಯು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಂಎಸ್‌ಪಿ ಬೆಲೆಗಳ ಅಡಿಯಲ್ಲಿ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಾಗ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬೇಕೆಂಬ ನಿಯಮ ಇದ್ದರೂ ಜಿಲ್ಲಾಡಳಿತ ನಿರ್ಲಕ್ಷೃ ಮಾಡಿದೆ ಎಂದು ಕಿಡಿಕಾರಿದರು.

    ಈ ಬಗ್ಗೆ ಕಳೆದ ತಿಂಗಳು ಒಕ್ಕೂಟವು ಪ್ರತಿಭಟನೆ ಆರಂಭಿಸಿದ ನಂತರ ಚಾಮರಾಜನಗರದ ಜಿಲ್ಲಾಧಿಕಾರಿಗಳು ಜಿಲ್ಲಾ ಟಾಸ್ಕ್ ಫೋರ್ಸ್ ಸಭೆ ನಡೆಸಿ ನಡಾವಳಿಯನ್ನು ಮಾಡಿದ್ದಾರೆ. ಆದರೂ ಇನ್ನೂ ಕೇಂದ್ರ ತೆರೆಯದ ಪರಿಣಾಮ ಬೆಳೆಗಾರರು ತೀವ್ರ ನಷ್ಟ ಎನುಭವಿಸುತ್ತಿದ್ದಾರೆ. ಆದ್ದರಿಂದ, ಜಿಲ್ಲಾಡಳಿತ ಖರೀದಿ ಕೇಂದ್ರ ಆರಂಭಿಸದ ಹಿನ್ನೆಲೆಯಲ್ಲಿ ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟ ಮತ್ತು ರೈತ ಸಂಘಟನೆಗಳು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ವೀರನಪುರ ನಾಗರಾಜು, ಪಂಜು, ಮಂಜುನಾಥ್, ವೃಷಿ, ಗವಿಯಪ್ಪ, ಮಲ್ಲಿಕಾರ್ಜುನ್, ಸ್ವಾಮಿ ಮಾದಪ್ಪ ಹಾಗೂ ಇತರರು ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts