More

    6 ರೂಪಾಯಿಯ ಪೆನ್ನಿ ಸ್ಟಾಕ್​ಗೆ ಡಿಮ್ಯಾಂಡ್​: ಒಂದೇ ದಿನದಲ್ಲಿ ಶೇ. 20ರಷ್ಟು ಏರಿಕೆ, ಅಪ್ಪರ್​ ಸರ್ಕ್ಯೂಟ್​ ಹಿಟ್​

    ಮುಂಬೈ: ಹಲವು ದಿನಗಳ ಒತ್ತಡದ ನಂತರ ಗುರುವಾರ ಮತ್ತೊಮ್ಮೆ ಷೇರುಪೇಟೆಯಲ್ಲಿ ಏರಿಕೆ ಕಂಡುಬಂದಿತು. ಈ ಸಕಾರಾತ್ಮಕ ವಾತಾವರಣದಲ್ಲಿ, ಅನೇಕ ಪೆನ್ನಿ ಸ್ಟಾಕ್‌ಗಳಿಗೆ ಭಾರಿ ಬೇಡಿಕೆ ಇತ್ತು. ಈ ಪೆನ್ನಿ ಸ್ಟಾಕ್‌ಗಳಲ್ಲಿ ಒಂದು ಕೆನ್ವಿ ಜ್ಯುವೆಲ್ಸ್ ಲಿಮಿಟೆಡ್ (Kenvi Jewels Ltd stock) ಒಂದಾಗಿದೆ. ವಾರದ ನಾಲ್ಕನೇ ವಹಿವಾಟಿನ ದಿನವಾದ ಗುರುವಾರ ಈ ಸ್ಟಾಕ್ 20% ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್ ಹಿಟ್​ ಆಯಿತು. ದಿನದ ವಹಿವಾಟಿನ ವೇಳೆ ಈ ಷೇರಿನ ಬೆಲೆ 7.22 ರೂ. ತಲುಪಿತ್ತು. ಅಂತಿಮವಾಗಿ, 6.95 ರೂ. ತಲುಪಿತು. ಹಿಂದಿನ ದಿನ ಷೇರಿನ ಬೆಲೆ 6.02 ರೂ. ಇತ್ತು. ಈ ಮೂಲಕ ಗುರುವಾರ ಅಂತಿಮವಾಗಿ 15.45% ಹೆಚ್ಚಳವಾಯ್ತು.

    ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 15.70 ಇದೆ. ಜೂನ್ 2023 ರಲ್ಲಿ ಈ ಬೆಲೆ ಮುಟ್ಟಿತ್ತು.

    ಈ ಕಂಪನಿಯಲ್ಲಿ ಶೇ. 64.72 ರಷ್ಟು ಪಾಲು ಪ್ರವರ್ತಕರ ಬಳಿ ಇದೆ. ಸಾರ್ವಜನಿಕ ಷೇರುಗಳು ಶೇಕಡಾ 35.28 ಇದೆ. ಕಂಪನಿಯ ಪ್ರವರ್ತಕರಲ್ಲಿ ನವಿಕ್‌ಕುಮಾರ್ ಚಂಪಕ್ಲಾಲ್ ವಲಾನಿ, ಚಂಪಕ್ಲಾಲ್ ದೇವಚಂದಭಾಯ್ ವಲಾನಿ, ಚಿರಾಗ್ ಚಂಪಕ್ಲಾಲ್ ವಲಾನಿ, ಹೇತಲ್ ಚಿರಾಗ್ ವಲಾನಿ ಸೇರಿದ್ದಾರೆ.

    ಡಿಸೆಂಬರ್ ತ್ರೈಮಾಸಿಕದಲ್ಲಿ ಕೆನ್ವಿ ಜ್ಯುವೆಲ್ಸ್ ಲಿಮಿಟೆಡ್‌ನ ಮಾರಾಟವು 64.15% ರಷ್ಟು ಏರಿಕೆಯಾಗಿ 36.16 ಕೋಟಿ ರೂಪಾಯಿಗಳಿಗೆ ತಲುಪಿದೆ. ಡಿಸೆಂಬರ್ 2023 ತ್ರೈಮಾಸಿಕದಲ್ಲಿ ಇದು 0.25 ಕೋಟಿ ರೂ. ಲಾಭ ಗಳಿಸಿದೆ. ಡಿಸೆಂಬರ್ 2022 ರ ತ್ರೈಮಾಸಿಕದಲ್ಲಿ ಇದು 0.08 ಕೋಟಿ ರೂ. ಲಾಭ ಗಳಿಸಿತ್ತು. ಲಾಭದ ಪ್ರಮಾಣ ಶೇ. 218.71ರಷ್ಟು ಏರಿಕೆಯಾಗಿದೆ.

    ಒಳಉಡುಪು ತಯಾರಿಕೆ ಕಂಪನಿಯ ಷೇರುಗಳಿಗೆ ಬೇಡಿಕೆ: ಐಪಿಒದಲ್ಲಿ ರೂ 395 ಇದ್ದ ಷೇರು ಬೆಲೆ ರೂ. 44000ಕ್ಕೆ ಏರಬಹುದು ಎನ್ನುತ್ತದೆ ಬ್ರೋಕರೇಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts