More

    ಮಹಾ ಕುಸಿತ ಕಂಡ ಪೇಟಿಎಂ ಷೇರುಗಳಿಗೆ ಸೋಮವಾರದಿಂದ ಮತ್ತೆ ಬರಲಿದೆ ಡಿಮ್ಯಾಂಡು: ಸಿಂಗಾಪುರ ಕಂಪನಿಯಿಂದ ರೂ. 243 ಕೋಟಿಯ 50 ಲಕ್ಷ ಷೇರು ಖರೀದಿ

    ಮುಂಬೈ: ಶುಕ್ರವಾರ ಮಾರುಕಟ್ಟೆ ಮುಚ್ಚಿದ ನಂತರ ಪೇಟಿಎಂ (Paytm) ಬಗ್ಗೆ ದೊಡ್ಡ ಸುದ್ದಿ ಬಂದಿದೆ. ಮಹಾ ಕುಸಿತ ಕಂಡಿದ್ದ ಪೇಟಿಎಂ ಷೇರಿಗೆ ಈ ಮೂಲಕ ದೊಡ್ಡ ಬೆಂಬಲ ಸಿಕ್ಕಿದೆ. ಈ ದೈತ್ಯ ಕಂಪನಿಯು 50 ಲಕ್ಷ ಪೆಟಿಎಂ ಷೇರುಗಳನ್ನು ಖರೀದಿಸಿದೆ.

    ಪೇಟಿಎಂನ ಮೂಲ ಕಂಪನಿಯಾದ One97 ಕಮ್ಯುನಿಕೇಷನ್ಸ್‌ನ 244 ಕೋಟಿ ರೂಪಾಯಿ ಮೊತ್ತದ ಷೇರುಗಳನ್ನು ಫೈನಾನ್ಶಿಯಲ್ ಸರ್ವೀಸಸ್ ಕಂಪನಿಯಾದ ಮೋರ್ಗನ್ ಸ್ಟಾನ್ಲಿ ಖರೀದಿಸಿದೆ.

    ಸದ್ಯಕ್ಕೆ ಪೇಟಿಎಂ ತೊಂದರೆಗಳನ್ನು ಎದುರಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರದ ನಂತರ, ಗುರುವಾರ ಮತ್ತು ಶುಕ್ರವಾರ ಕಂಪನಿಯ ಷೇರುಗಳ ಬೆಲೆ ಭಾರಿ ಕುಸಿತವನ್ನು ಕಂಡಿದ್ದವು. ಗುರುವಾರ 20% ಲೋವರ್​ ಸರ್ಕ್ಯೂಟ್ ಹಿಟ್​ ಆಗಿ ಶೇಕಡಾ 20ರಷ್ಟು ಷೇರುಗಳ ಬೆಲೆ ಕುಸಿದಿತ್ತು. ಶುಕ್ರವಾರ ಕೂಡ 20% ಲೋವರ್​ ಸರ್ಕ್ಯೂಟ್ ತಲುಪಿ ಷೇರು ಬೆಲೆ ಮತ್ತೆ ಶೇಕಡಾ 20 ರಷ್ಟು ಕುಸಿತವಾಗಿತ್ತು. ಈ ಎರಡು ದಿನಗಳಲ್ಲಿ ಈ ಷೇರುಗಳ ಬೆಲೆ ಶೇಕಡಾ 40 ರಷ್ಟು ಇಳಿಕೆಯಾಗಿ ಹೂಡಿಕೆದಾರರಿಗೆ ಅಪಾರ ನಷ್ಟವಾಗಿತ್ತು.

    ಆದರೆ ಶುಕ್ರವಾರ ಷೇರು ಮಾರುಕಟ್ಟೆ ಮುಚ್ಚಿದ ನಂತರ, ಕಂಪನಿಯ ಬಗ್ಗೆ ಒಳ್ಳೆಯ ಸುದ್ದಿ ಬಂದಿದೆ. ದೈತ್ಯ ಕಂಪನಿ ಮೋರ್ಗಾನ್ ಸ್ಟಾನ್ಲಿ ಸ್ಟಾನ್ಲಿ) Paytm ನ ಮೂಲ ಕಂಪನಿ One97 ಕಮ್ಯುನಿಕೇಷನ್ಸ್‌ನ 244 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದೆ. ಈ ವಹಿವಾಟು ಮುಕ್ತ ಮಾರುಕಟ್ಟೆಯ ಮೂಲಕ ನಡೆದಿದೆ.

    50 ಲಕ್ಷ ಷೇರುಗಳ ಖರೀದಿ:

    ಮೋರ್ಗನ್ ಸ್ಟಾನ್ಲಿ ತನ್ನ ಸಿಂಗಾಪುರದ ಕಂಪನಿ ಮಾರ್ಗನ್ ಸ್ಟಾನ್ಲಿ ಏಷ್ಯಾ (ಸಿಂಗಪುರ) ಪಿಟಿಇ ಮೂಲಕ ಈ ಡೀಲ್​ ಮಾಡಿದೆ. ಅವರು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (NSE) ನಲ್ಲಿ ಷೇರು ಖರೀದಿಸಿದ್ದಾರೆ. ಬಲ್ಕ್ ಡೀಲ್​ ಮಾಹಿತಿಯ ಪ್ರಕಾರ, ಮಾರ್ಗನ್ ಸ್ಟಾನ್ಲಿ ಏಷ್ಯಾ ಕಂಪನಿಯು 50 ಲಕ್ಷ ಷೇರುಗಳನ್ನು ಖರೀದಿಸಿದೆ. ಈ ಮೂಲಕ Paytm ನಲ್ಲಿ 0.8 ರಷ್ಟು ಪಾಲನ್ನು ಹೊಂದಿದೆ.

    ಫೈನಾನ್ಶಿಯಲ್ ಸರ್ವೀಸಸ್ ಕಂಪನಿಯು ಈ ಷೇರುಗಳನ್ನು ಪ್ರತಿ ಷೇರಿಗೆ 487.20 ರೂಪಾಯಿಯಂತೆ ಖರೀದಿಸಿದೆ. ಕಂಪನಿಯು ಒಟ್ಟು 243.60 ಕೋಟಿ ರೂಪಾಯಿ ಬೆಲೆಯ ಷೇರು ಖರೀದಿಸಿದೆ. ಆದರೆ, ಈ ಷೇರುಗಳನ್ನು ಮಾರಾಟ ಮಾಡಿದವರ ಹೆಸರು ಇನ್ನೂ ತಿಳಿದುಬಂದಿಲ್ಲ.

    ಈಗ ಷೇರುಗಳ ಬೆಲೆ ಅಪಾರ ಕುಸಿತ ಕಂಡಿರುವ ಕಾರಣ ದೊಡ್ಡ ಪ್ರಮಾಣದಲ್ಲಿ ಈ ಷೇರುಗಳನ್ನು ಈ ಕಂಪನಿ ಖರೀದಿಸಿದೆ ಎನ್ನಲಾಗಿದೆ.

    ಭಾರತೀಯ ರಿಸರ್ವ್ ಬ್ಯಾಂಕ್ (RBI) ಫೆಬ್ರವರಿ 29 ರ ನಂತರ Paytm ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ವ್ಯಾಲೆಟ್‌ಗಳು, ಫಾಸ್ಟ್ ಟ್ಯಾಗ್‌ಗಳು, ಗ್ರಾಹಕರ ಖಾತೆಗಳು ಮತ್ತು ಇತರವುಗಳಲ್ಲಿ ಠೇವಣಿ ಮಾಡುವುದನ್ನು ನಿಷೇಧಿಸಿದೆ. Paytm ಪಾವತಿಗಳ ಬ್ಯಾಂಕ್‌ನಲ್ಲಿ ಪ್ರಸ್ತುತ, One97 ಕಮ್ಯುನಿಕೇಷನ್ಸ್ ಶೇಕಡಾ 49 ಪಾಲನ್ನು ಹೊಂದಿದೆ. ಶುಕ್ರವಾರದ ಕುಸಿತದ ನಂತರ, ಕಂಪನಿಯ ಷೇರುಗಳ ಬೆಲೆ ಬಿಎಸ್‌ಇಯಲ್ಲಿ ರೂ 487.05 ತಲುಪಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts