More

    ಟೈರ್​ ಕಂಪನಿ ನೀಡುತ್ತಿದೆ 20ನೇ ಬಾರಿಗೆ ಡಿವಿಡೆಂಡ್​​: ಫೆ. 14ರ ಮೊದಲೇ ಸಿಗಲಿದೆ ಲಾಭಾಂಶದ ಹಣ

    ಮುಂಬೈ: ಡಿವಿಡೆಂಡ್ ಪಾವತಿಸುವ ಕಂಪನಿಗಳ ಮೇಲೆ ಬೆಟ್ಟಿಂಗ್ ಮಾಡುವ ಹೂಡಿಕೆದಾರರಿಗೆ ಒಳ್ಳೆಯ ಸುದ್ದಿ. ಗುಡ್ಇಯರ್ ಇಂಡಿಯಾ ಲಿಮಿಟೆಡ್ (Goodyear India Ltd.) ಕಂಪನಿಯ ಲಾಭಾಂಶ ಘೋಷಿಸಲಾಗಿದೆ. ಒಂದು ಷೇರಿನ ಮೇಲೆ 26 ರೂಪಾಯಿ ಲಾಭಾಂಶ ನೀಡಲು ಕಂಪನಿ ನಿರ್ಧರಿಸಿದೆ. ಈ ಡಿವಿಡೆಂಡ್ ವಿತರಣೆಗೆ ದಾಖಲೆ ದಿನಾಂಕವನ್ನೂ ಘೋಷಿಸಲಾಗಿದೆ. ಫೆ. 14ರ ಮೊದಲು ಈ ಡಿವಿಡೆಂಡ್​ ನೀಡಲಾಗುತ್ತಿದೆ.

    ಷೇರು ಮಾರುಕಟ್ಟೆಗಳಿಗೆ ನೀಡಿರುವ ಮಾಹಿತಿಯಲ್ಲಿ ಕಂಪನಿಯು, 10 ರೂಪಾಯಿ ಮುಖಬೆಲೆಯ ಒಂದು ಷೇರಿನ ಮೇಲೆ 26 ರೂಪಾಯಿ ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದೆ. ಈ ಲಾಭಾಂಶಕ್ಕಾಗಿ
    ಕಂಪನಿಯು ದಾಖಲೆಯ ದಿನಾಂಕವನ್ನು ಫೆಬ್ರವರಿ 12, 2024 ಎಂದು ನಿಗದಿಪಡಿಸಿದೆ. ಅಂದರೆ, ಈ ದಿನದಂದು ಕಂಪನಿಯ ದಾಖಲೆ ಪುಸ್ತಕದಲ್ಲಿ ಹೆಸರು ಉಳಿದಿರುವ ಯಾವುದೇ ಹೂಡಿಕೆದಾರರು ಈ ಲಾಭಾಂಶವನ್ನು ಸ್ವೀಕರಿಸುತ್ತಾರೆ.

    ಕಂಪನಿಯು 20ನೇ ಬಾರಿಗೆ ಹೂಡಿಕೆದಾರರಿಗೆ ಲಾಭಾಂಶವನ್ನು ನೀಡಲಿದೆ. ಮೊದಲ ಬಾರಿಗೆ ಕಂಪನಿಯು 29 ಏಪ್ರಿಲ್ 2008 ರಂದು ಲಾಭಾಂಶವನ್ನು ನೀಡಿತ್ತು. ಅಂದು ಅರ್ಹ ಹೂಡಿಕೆದಾರರಿಗೆ ಪ್ರತಿ ಷೇರಿಗೆ 6 ರೂ.ಗಳ ಲಾಭಾಂಶ ದೊರೆತಿತ್ತು. ಕಂಪನಿಯು ಕೊನೆಯದಾಗಿ ಜುಲೈ 26, 2023 ರಂದು ಡಿವಿಡೆಂಡ್ ನೀಡಿತ್ತು. ಆಗ ಅರ್ಹ ಹೂಡಿಕೆದಾರರು 26.50 ರೂ.ಗಳ ಲಾಭಾಂಶವನ್ನು ಪಡೆದಿದ್ದರು.

    ಶುಕ್ರವಾರ ಫೆ. 2ರಂದು ಬಿಎಸ್‌ಇಯಲ್ಲಿ ಕಂಪನಿಯ ಒಂದು ಷೇರಿನ ಬೆಲೆ 1428.45 ರೂ. ಇತ್ತು. ಕಳೆದ ಒಂದು ವರ್ಷದಲ್ಲಿ ಈ ಕಂಪನಿಯ ಷೇರುಗಳ ಬೆಲೆ 34 ರಷ್ಟು ಏರಿಕೆಯಾಗಿದೆ. ಇದೇ ಸಮಯದಲ್ಲಿ, ಕಳೆದ 6 ತಿಂಗಳ ಅವಧಿಯಲ್ಲಿ, ಕಂಪನಿಯ ಷೇರುಗಳ ಬೆಲೆಗಳು ಕೇವಲ 3 ಪ್ರತಿಶತದಷ್ಟು ಹೆಚ್ಚಾಗಿದೆ.

    ಗುಡ್​ ಇಯರ್ ಇಂಡಿಯಾ ಷೇರಿನ 52 ವಾರದ ಗರಿಷ್ಠ ಬೆಲೆ 1451.10 ರೂ. ಮತ್ತು ಕನಿಷ್ಠ ಬೆಲೆ 1017.10 ರೂ. ಆಗಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ 3294.94 ಕೋಟಿ ರೂ. ಇದೆ.

    ಗುಡ್‌ಇಯರ್ ಟೈರ್ ಇಂಡಿಯಾ ಕಂಪನಿಯು ಟೈರ್​ ಉತ್ಪಾದಿಸುವ ಕಂಪನಿಯಾಗಿದೆ. ಹೆಚ್ಚಿನ ಕಾರ್ಯಕ್ಷಮತೆಯ ಕಾರ್ ಟೈರ್‌ಗಳು, SUV ಮತ್ತು 4×4 ಟೈರ್‌ಗಳ ವ್ಯಾಪಕ ಶ್ರೇಣಿಯನ್ನು ಆನ್‌ಲೈನ್‌ನಲ್ಲಿ ನೀಡುತ್ತದೆ.

    ನಿಮ್ಮ ಮನೆ ಮೇಲ್ಛಾವಣಿಯಲ್ಲಿ ಏನೂ ಖರ್ಚಿಲ್ಲದೆ ವಿದ್ಯುತ್​ ಉತ್ಪಾದಿಸಿ: ರೂಫ್​ ಟಾಪ್​ ಸೋಲಾರ್​ ಸಬ್ಸಿಡಿ ಹೆಚ್ಚಳ; ಸೂರ್ಯೋದಯ ಯೋಜನೆಯ ವಿವರ ಹೀಗಿದೆ…

    ಮಾರುವವರೆ ಇಲ್ಲ, ಎಲ್ಲರೂ ಖರೀದಿಸುವರೇ… ರೂ. 14 ಇದ್ದ ಷೇರು ಈಗ 165 ರೂ; ಫೆ. 6ರಂದು ಸ್ಟಾಕ್ ಸ್ಪ್ಲಿಟ್, ಬೋನಸ್ ಷೇರು ಹಂಚಿಕೆ

    ರಫ್ತು ಆರ್ಡರ್ ಪಡೆದುಕೊಂಡ ಕಂಪನಿ: 20% ಅಪ್ಪರ್ ಸರ್ಕ್ಯೂಟ್ ಹಿಟ್, 8 ರೂಪಾಯಿ ಪೆನ್ನಿ ಸ್ಟಾಕ್​ ಖರೀದಿ ಜೋರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts