More

    ಅಪರಾಧದಲ್ಲಿ ಮುಂಚೂಣಿಯಲ್ಲಿರುವ ರಾಜಧಾನಿ! ಕೊಲೆ, ರೇಪ್, ಎಲ್ಲದರಲ್ಲೂ ಮುಂದೆ!

    ನವದೆಹಲಿ: ಭಾರತದಲ್ಲಿ ಅಪರಾಧ ಜಗತ್ತಿನಲ್ಲಿ ರಾಷ್ಟ್ರ ರಾಜಧಾನಿಯೇ ಮೇಲುಗೈ ಸಾಧಿಸಿದೆ. 2020ರಲ್ಲಿ ಅತಿಹೆಚ್ಚು ಕೊಲೆ ಮತ್ತು ರೇಪ್​​ ಪ್ರಕರಣಗಳು ದಾಖಲಾಗಿರುವ ಮೆಟ್ರೊಪೊಲಿಟನ್ ನಗರವೆಂದರೆ ದೆಹಲಿ. ಇನ್ನು ಕೊಲೆ ಪ್ರಕರಣಗಳಲ್ಲಿ ಎರಡನೇ ಸ್ಥಾನ ಗಳಿಸಿರುವ ನಗರವೆಂದರೆ ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರು.

    ಈ ಅಂಕಿಅಂಶಗಳನ್ನು ಕೇಂದ್ರ ಗೃಹ ಸಚಿವಾಲಯದ ನ್ಯಾಷನಲ್ ಕ್ರೈಂ ರೆಕಾರ್ಡ್ಸ್​ ಬ್ಯೂರೋ(ಎನ್​ಸಿಆರ್ಬಿ) ನೀಡಿದೆ. ಎನ್​ಸಿಆರ್​ಬಿ ವರದಿಯ ಪ್ರಕಾರ 2020 ರಲ್ಲಿ ದೇಶದ 19 ಮೆಟ್ರೊಪೊಲಿಟನ್ ನಗರಗಳಲ್ಲಿ ದೆಹಲಿಯೇ ಶೇಕಡ 40 ರಷ್ಟು ಅತ್ಯಾಚಾರ ಪ್ರಕರಣಗಳನ್ನು ಮತ್ತು ಶೇಕಡ 25 ರಷ್ಟು ಕೊಲೆ ಪ್ರಕರಣಗಳನ್ನು ದಾಖಲಿಸಿದೆ. ತನ್ಮೂಲಕ ದೆಹಲಿ ಕ್ರೈಂ ಸಿಟಿಯಾಗಿರುವ ಹಣೆಪಟ್ಟಿ ಗಳಿಸಿದೆ.

    ಇದನ್ನೂ ಓದಿ: ಕರ್ನಾಟಕ ಧರ್ಮಛತ್ರ ಆಗೋದಕ್ಕೆ ಬಿಡಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

    ಕೋವಿಡ್​ ಹೊಡೆತಕ್ಕೆ ಒಳಗಾದ 2020 ರ ವರ್ಷದಲ್ಲಿ ದೇಶಾದ್ಯಂತ ಒಟ್ಟಾರೆಯಾಗಿ 1,849 ಕೊಲೆ ಪ್ರಕರಣಗಳು ಮತ್ತು 2,533 ರೇಪ್​ ಪ್ರಕರಣಗಳು ದಾಖಲಾಗಿವೆ. ದಾಖಲಾದ ಕೊಲೆ ಪ್ರಕರಣಗಳಲ್ಲಿ ದೆಹಲಿ 461 ಪ್ರಕರಣಗಳೊಂದಿಗೆ ಮೊದಲನೇ ಸ್ಥಾನದಲ್ಲಿದ್ದರೆ, 179 ಪ್ರಕರಣಗಳೊಂದಿಗೆ ಬೆಂಗಳೂರು ನಗರ ಎರಡನೇ ಸ್ಥಾನದಲ್ಲಿದೆ, ಚೆನ್ನೈ ಮೂರನೇ ಸ್ಥಾನದಲ್ಲಿದೆ.

    ಇನ್ನು 192 ‘ಕೊಲೆ ಎಂದು ಹೇಳಲಾಗದ ನರಹತ್ಯೆ’ ಪ್ರಕರಣಗಳು ಕೂಡ ದಾಖಲಾಗಿದ್ದು, ಇವುಗಳಲ್ಲೂ 57 ಪ್ರಕರಣಗಳೊಂದಿಗೆ ದೆಹಲಿ ಮುಂಚೂಣಿಯಲ್ಲಿದೆ. 28 ಪ್ರಕರಣಗಳೊಂದಿಗೆ ಲಖನೌ ಎರಡನೇ ಸ್ಥಾನದಲ್ಲಿದ್ದರೆ, 10 ಪ್ರಕರಣಗಳೊಂದಿಗೆ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.

    ಇದನ್ನೂ ಓದಿ: ಕಾಮುಕನಿಂದ ಕ್ರೂರ ಹಿಂಸೆ ಅನುಭವಿಸಿದ ಮುಂಬೈ ಮಹಿಳೆ ಸಾವು

    ದೆಹಲಿಯಲ್ಲಿ ಸಂಭವಿಸಿರುವ ರೇಪ್​ ಪ್ರಕರಣಗಳೂ ಅತ್ಯಾಧಿಕ. ಒಂದು ವರ್ಷದ ಕಾಲದಲ್ಲಿ ದೆಹಲಿಯಲ್ಲಿ 967 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಎರಡನೇ ಸ್ಥಾನದಲ್ಲಿರುವ ಜೈಪುರದಲ್ಲಿ 409 ಕೇಸುಗಳು, ನಂತರದ ಸ್ಥಾನದಲ್ಲಿರುವ ಮುಂಬೈನಲ್ಲಿ 322 ಕೇಸುಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 108 ರೇಪ್​ ಕೇಸುಗಳು ದಾಖಲಾಗಿವೆ. (ಏಜೆನ್ಸೀಸ್)

    ಉಗ್ರಾತಂಕ! ಹೈ ಅಲರ್ಟ್​ನಲ್ಲಿ ಮೈಸೂರು, ಬೆಂಗಳೂರು

    ನಟ ಸೋನು ಸೂದ್ ಮನೆಗೆ ಐಟಿ ಅಧಿಕಾರಿಗಳು!

    ಗಣಪತಿಗೆ ಮನೆಯಲ್ಲೇ ಸಿದ್ಧವಾಗಿರುವ ಭವ್ಯ ಮಂಟಪ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts