More

    ವೋಟ್​ ಹಾಕುವ ಹಕ್ಕಿಲ್ಲ! ಆದ್ರೆ, ಸಹಾಯ ಮಾಡುವ ಮನಸ್ಥಿತಿ ಇದೆ: ವಿದ್ಯಾರ್ಥಿಗಳ ನಿಲುವಿಗೆ ನೆಟ್ಟಿಗರಿಂದ ಮೆಚ್ಚುಗೆ

    ನವದೆಹಲಿ: ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆಯನ್ನು ಸರ್ಕಾರಿ ಶಾಲೆಗಳು ಸೇರಿದಂತೆ ಖಾಸಗಿ ಸ್ಕೂಲ್​ಗಳಲ್ಲಿ ನಡೆಸಲಾಗುತ್ತದೆ. ಈ ವೇಳೆ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಚುನಾವಣೆಯಲ್ಲಿ ವೋಟ್ ಮಾಡುವ ಹಕ್ಕಿರುತ್ತದೆ. ನಮಗಂತೂ ವೋಟ್ ಹಾಕುವ ಅಧಿಕಾರವಿಲ್ಲ. ಆದ್ರೆ, ಮತ ಹಾಕಲು ಬರುವ ವೃದ್ಧರಿಗಾದರು ಕೈಲಾದಷ್ಟು ಸಹಾಯ ಮಾಡೋಣ ಎಂದು ನಿರ್ಧರಿಸಿದ ದೆಹಲಿ ಶಾಲೆಯ ವಿದ್ಯಾರ್ಥಿಗಳಿಗೆ ಇದೀಗ ಸಾವರ್ಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    ಇದನ್ನೂ ಓದಿ: ಮತ್ತೊಬ್ಬನೊಂದಿಗೆ ಕಾಣಿಸಿಕೊಂಡ ಹಾರ್ದಿಕ್ ಪತ್ನಿ ನತಾಶಾ!; ಮಗನ ಸಾಕ್ಷಿಯಾಗಿ ಮದ್ವೆಯಾದ ಜೋಡಿ ಈಗ ವಿಚ್ಛೇದನದ ಹಾದಿಯಲ್ಲಿ…

    ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದ ವೃದ್ಧರು, ವಿಶೇಷ ಚೇತನರನ್ನು ಗಮನಿಸಿದ ವಿದ್ಯಾರ್ಥಿಗಳು, ಅವರನ್ನು ಗೇಟ್​ ಬಳಿಯೇ ಮಾತನಾಡಿಸಿ, ವೋಟಿಂಗ್ ರೂಮ್​ವರೆಗೂ ಕರೆದೊಯ್ಯುವ ಕೆಲಸ ಮಾಡಿದ್ದಾರೆ. ಕೇವಲ ಕೊಠಡಿಗೆ ಬಿಟ್ಟುಬಂದು ಸುಮ್ಮನಾಗದ ಮಕ್ಕಳು, ಹಿರಿಯರು ಮತ ಚಲಾಯಿಸಿ, ಹೊರಬರುವವರೆಗೂ ಅವರ ಬೆಲೆಬಾಳುವ ಪರ್ಸ್​, ಮೊಬೈಲ್​ಗಳನ್ನು ತಮ್ಮ ಬಳಿಯೇ ಜೋಪಾನವಾಗಿ ಇರಿಸಿಕೊಂಡು, ತದನಂತರ ಹಸ್ತಾಂತರಿಸುವ ಮೂಲಕ ಸಹಾಯ ಮಾಡಿದ್ದಾರೆ. ಇದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.

    “ನಾನು ಮತ ಚಲಾಯಿಸಲು ಸಾಧ್ಯವಿಲ್ಲ. ಆದರೆ, ಇತರರಿಗೆ ಖಂಡಿತ ಸಹಾಯ ಮಾಡಬಲ್ಲೆ. ಇದರಿಂದ ನನಗೆ ಖುಷಿ ನೀಡಿದೆ” ಎಂದು 10ನೇ ತರಗತಿಯ ವಿದ್ಯಾರ್ಥಿ ಶೌರ್ಯ ಶರ್ಮಾ ಹೇಳಿದರು. “ಈ ವಯಸ್ಸಿನಲ್ಲಿ ಪ್ರಜಾಪ್ರಭುತ್ವಕ್ಕೆ ಅವರ ಅತ್ಯುತ್ತಮ ಕೊಡುಗೆ ಇದಾಗಿದೆ “ಎಂದು ಹಿರಿಯರೊಬ್ಬರು ಮಕ್ಕಳ ಸಹಾಯಹಸ್ತ ಕುರಿತು ಸಂತಸ ವ್ಯಕ್ತಪಡಿಸಿದರು,(ಏಜೆನ್ಸೀಸ್).

    ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

    ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ ಅಂದ್ರೆ, ನೀನು 500 ರನ್​ ಗಳಿಸಿ ಏನು ಫಲ? ಸಂಜುಗೆ ಬೆವರಿಳಿಸಿದ ಮಾಜಿ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts