More

    ದೆಹಲಿ ಹಿಂಸಾಚಾರ ಅನುಷ್ಠಾನಕ್ಕಾಗಿ 1.61 ಕೋಟಿ ರೂಪಾಯಿ ಐವರ ಖಾತೆಗೆ ಜಮೆ!

    ನವದೆಹಲಿ: ನಮಸ್ತೆ ಟ್ರಂಪ್ ಕಾರ್ಯಕ್ರಮದ ಸಂದರ್ಭದಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ನೆಪದಲ್ಲಿ ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಕಿಚ್ಚು ಹಚ್ಚುವುದಕ್ಕಾಗಿ ಐವರ ಬ್ಯಾಂಕ್​ ಖಾತೆಗೆ 1.61 ಕೋಟಿ ರೂಪಾಯಿ ಜಮೆ ಆಗಿದೆ. ಅವರೇ ಈ ಹಿಂಸಾಚಾರದ ಪಿತೂರಿಗಾರರು ಮತ್ತು ಅನುಷ್ಠಾನದ ಹೊಣೆಗಾರಿಕೆ ಹೊತ್ತವರು ಎಂದು ದೆಹಲಿ ಪೊಲೀಸರು ಸಲ್ಲಿಸಿರುವ ಚಾರ್ಜ್​ಶೀಟ್ ಹೇಳಿದೆ.

    ಕಾಂಗ್ರೆಸ್ ಪಕ್ಷದ ಮಾಜಿ ಕೌನ್ಸಿಲರ್ ಇಶ್ರತ್​ ಜಹಾನ್​, ಆ್ಯಕ್ಟಿವಿಸ್ಟ್ ಖಾಲಿದ್ ಸೈಫಿ, ಅಮಾನತುಗೊಂಡಿರುವ ಎಎಪಿ ಕೌನ್ಸಿಲರ್​ ತಾಹಿರ್ ಹುಸೇನ್​, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಅಲುಮ್ನಿ ಅಸೋಸಿಯೇಷನ್ ಪ್ರೆಸಿಡೆಂಟ್​ ಶಿಫಾ ಉರ್ ರೆಹ್ಮಾನ್​, ಜಾಮಿಯಾ ವಿದ್ಯಾರ್ಥಿ ಮೀರನ್ ಹೈದರ್ ಈ ಗಲಭೆ, ಹಿಂಸಾಚಾರದ ಸಂಚುಕೋರರು. ಫೆಬ್ರವರಿ ತಿಂಗಳಲ್ಲಿ ನಡೆದ ಕೋಮು ಹಿಂಸಾಚಾರದ ಪಿತೂರಿ ದೊಡ್ಡ ಮಟ್ಟದಲ್ಲಾಗಿದ್ದು, 15 ಆರೋಪಿಗಳ ವಿರುದ್ಧ ಸಾಕ್ಷ್ಯ ಸಂಗ್ರಹಿಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ ದೆಹಲಿ ಪೊಲೀಸರು.

    ಇದನ್ನೂ ಓದಿ: 53 ಜನರ ಸಾವಿಗೆ ಕಾರಣವಾದ ದೆಹಲಿ ಹಿಂಸಾಚಾರದ ಬಲೆಗೆ ಮಗನನ್ನೂ ಕೆಡವಿದ್ರು ಅಂತಿದ್ದಾರೆ ಖಾಲಿದ್ ತಂದೆ !

    ಇದರಂತೆ, 2019ರ ಡಿಸೆಂಬರ್ 1ರಿಂದ 2020ರ ಫೆಬ್ರವರಿ 26ರ ನಡುವೆ ಇಶ್ರತ್ ಜಹಾನ್​, ಖಾಲಿದ್​ ಸೈಫಿ, ತಾಹಿರ್ ಹುಸೇನ್​, ಶಿಫಾ ಉರ್​ ರೆಹ್ಮಾನ್​, ಮೀರನ್​ ಹೈದರ್ ಅವರ ಬ್ಯಾಂಕ್ ಖಾತೆಗೆ ಮತ್ತ ನಗದು ರೂಪದಲ್ಲಿ 1.61 ಕೋಟಿ ರೂಪಾಯಿ ಸಂದಾಯವಾಗಿದೆ. ಈ ಪೈಕಿ 1.48 ಕೋಟಿ ರೂಪಾಯಿಯನ್ನು ಅವರು ನಗದೀಕರಿಸಿದ್ದು, ಪ್ರತಿಭಟನಾ ಸ್ಥಳಗಳ ಮತ್ತು ಹಿಂಸಾಚಾರದ ಖರ್ಚು ನಿಭಾಯಿಸಲು ವ್ಯಯಿಸಿದ್ದಾರೆ. ಹೀಗೆ ಹಣ ವರ್ಗಾವಣೆಗೊಂಡ ಸುದೀರ್ಘ ಸ್ಟೋರಿಯನ್ನು ಅವರು ಆರೋಪಪಟ್ಟಿಯಲ್ಲಿ ದಾಖಲಿಸಿದ್ದಾರೆ. (ಏಜೆನ್ಸೀಸ್)

    ಪ್ರಜಾತಂತ್ರದ ಸೌಂದರ್ಯವಿದು- ಪ್ರತಿಭಟನಾನಿರತ ಸದಸ್ಯರ ಬಳಿಗೆ ರಾಜ್ಯಸಭೆ ಉಪಾಧ್ಯಕ್ಷ !: ಪಿಎಂ ಮೆಚ್ಚುಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts