More

    VIDEO|ಕಾಂಗ್ರೆಸ್​ ಆಡಳಿತದ ಅವಧಿಯಲ್ಲಿ ರಾಷ್ಟ್ರದಲ್ಲಿ ಅಧಿಕ ಕೋಮು ಗಲಭೆ ನಡೆದಿವೆ: ಸಂಸದ ತೇಜಸ್ವಿ ಸೂರ್ಯ

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಆರಂಭವಾದ ಹಿಂಸಾಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಕೇವಲ 36 ಗಂಟೆಗಳಲ್ಲಿ ನಿಯಂತ್ರಣಕ್ಕೆ ತಂದರು ಎಂದು ಬಿಜೆಪಿ ಸದಸ್ಯ ತೇಜಸ್ವಿ ಸೂರ್ಯ ಸಮರ್ಥನೆ ಮಾಡಿಕೊಂಡರು.

    ಬುಧವಾರ ಸಂಸತ್​ನಲ್ಲಿ ದೆಹಲಿ ಹಿಂಸಾಚಾರ ಕುರಿತು ನಡೆದ ಚರ್ಚೆಯಲ್ಲಿ ಅವರು ಕೇಂದ್ರ ಸರ್ಕಾರ ಕ್ರಮವನ್ನು ಸಮರ್ಥಿಸಿಕೊಂಡರು.

    ದೆಹಲಿ ಹಿಂಸಾಚಾರ ತಡೆಯಲು ಸರ್ಕಾರ ವಿಫಲವಾಗಿದೆ ಎಂದ ಪ್ರತಿಪಕ್ಷಗಳ ಹೇಳಿಕೆಗೆ ಅವರು ತಿರುಗೇಟು ನೀಡಿದರು.

    ಗಲಭೆ ಆರಂಭವಾದ 36 ತಾಸುಗಳಲ್ಲಿ ಗೃಹ ಸಚಿವರು ನಿಯಂತ್ರಣ ಮಾಡಿದ್ದಾರೆ. ಈ ವಿಚಾರದಲ್ಲಿ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದುದು. ಅಮಿತ್​ ಷಾ ಅವರು ದೆಹಲಿ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಗಲಭೆ ನಿಯಂತ್ರಿಸಿದರು. ಇದಕ್ಕಾಗಿ ಕೇಂದ್ರ ಗೃಹ ಸಚಿವರನ್ನು ನಾನು ಶ್ಲಾಘಿಸುತ್ತೇನೆ ಎಂದರು.
    ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಮಲೀಲಾ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಬಗ್ಗೆ ಭಾಷಣೆ ಮಾಡಿದ ಮರುದಿನದಿಂದಲೇ ಶಾಹೀನ್​ಬಾಘ್​ನಲ್ಲಿ ಪ್ರತಿಭಟನೆ ಆರಂಭವಾಗಿದೆ. ಎನ್ನು ತಿಳಿಯದ ಮುಗ್ಧರನ್ನು ಪ್ರತಿಭಟನೆ ಮಾಡುವಂತೆ ಪ್ರಚೋದನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

    ನೆಹರು ಪ್ರಧಾನಿಯಾಗಿದ್ದ ವೇಳೆ 243 ಕೋಮು ಗಲಭೆಗಳು ರಾಷ್ಟ್ರದಲ್ಲಿ ಸಂಭವಿಸಿವೆ. ಇಂದಿರಾಗಾಂಧಿ ಸರ್ಕಾರದ ವೇಳೆ 337 ಕೋಮು ಗಲಭೆ, ರಾಜೀವ್​ಗಾಂಧಿ ಆಡಳಿತದ ವೇಳೆ 291 ಕೋಮು ಗಲಭೆಗಳು ನಡೆದಿವೆ. ದೇಶದಲ್ಲಿ ನಡೆದ ಶೇ.73ರಷ್ಟು ಕೋಮು ಗಲಭೆಗಳು ಕಾಂಗ್ರೆಸ್​ ಆಡಳಿತದ ಅವಧಿಯಲ್ಲಿ ನಡೆದಿವೆ. ದೆಹಲಿಯಲ್ಲಿ ಕಳೆದ ತಿಂಗಳ ನಡೆದ ಹಿಂಸಾಚಾರಕ್ಕೆ ಕಾಂಗ್ರೆಸ್​ ಕುಮ್ಮಕ್ಕು ನೀಡಿದೆ ಎಂದು ಹೇಳಿದರು.

     

    ಇಡೀ ದಿನದ ಕಲಾಪ ನುಂಗಿದ ಬೈಗುಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts