More

    ದೆಹಲಿಯಲ್ಲಿ ಕರೊನಾ ಸೋಂಕು ಇಳಿಕೆ ; ಲಾಕ್​ಡೌನ್ ಒಂದು ವಾರ ವಿಸ್ತರಣೆ

    ನವದೆಹಲಿ : ದೆಹಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಕರೊನಾ ಸೋಂಕಿನ ದರ ಇಳಿಯುತ್ತಿದೆ. ಆದಾಗ್ಯೂ ಈ ಉತ್ತಮ ಬೆಳವಣಿಗೆಯನ್ನು ಮುಂದುವರಿಸುವ ಉದ್ದೇಶದಿಂದ ಸರ್ಕಾರ, ನಾಳೆಯಿಂದ ಮತ್ತೊಂದು ವಾರದ ಅವಧಿಗೆ ಲಾಕ್​ಡೌನ್​ಅನ್ನು ವಿಸ್ತರಿಸುತ್ತಿದೆ ಎಂದು ಸಿಎಂ ಅರವಿಂದ್​ ಕೇಜ್ರಿವಾಲ್ ಹೇಳಿದ್ದಾರೆ.

    “ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 6,000 ಪ್ರಕರಣಗಳು ಕಂಡುಬಂದವು. ಪಾಸಿಟಿವಿಟಿ ರೇಟ್​ ಶೇ. 10 ಕ್ಕೆ ಇಳಿದಿದೆ. ಕ್ರಮೇಣ ದೆಹಲಿ ಮತ್ತೆ ಸುಧಾರಣೆಯ ಹಾದಿಯಲ್ಲಿದೆ. ಈ ಚೇತರಿಕೆ ಮುಂದಿನ ವಾರ ಉತ್ತಮಗೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ. ನಿರ್ಬಂಧಗಳು ಮೊದಲಿನಂತೆಯೇ ಇರುತ್ತವೆ” ಎಂದು ಕೇಜ್ರಿವಾಲ್ ಇಂದು ಸುದ್ದಿಗಾರರಿಗೆ ಹೇಳಿದರು.

    id ಫೇಸ್​ಬುಕ್ ಸ್ನೇಹ: ಯುವಕನನ್ನು ನಂಬಿ ಹೋದ ಮಹಿಳೆಯ ಮೇಲೆ 25 ಮಂದಿಯಿಂದ ಗ್ಯಾಂಗ್​ರೇಪ್!

    ಸೋಂಕಿನ ದರ ಶೇ. 5 ಕ್ಕಿಂತ ಕಡಿಮೆಯಾಗುವ ಅಪೇಕ್ಷೆಯನ್ನು ಸರ್ಕಾರ ಹೊಂದಿದೆ ಎಂದಿರುವ ಕೇಜ್ರಿವಾಲ್​, ಲಾಕ್​ಡೌನ್​ನಿಂದ ಪರಿಸ್ಥಿತಿ ಸುಧಾರಿಸಿದೆ ಎಂದಿದ್ದಾರೆ. “ಕಳೆದ ಕೆಲವು ದಿನಗಳಲ್ಲಾಗಿರುವ ಉತ್ತಮ ಬದಲಾವಣೆಯನ್ನು ನಾವು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಮುಂದಿನ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಲಾಕ್​ಡೌನ್ ಮುಂದುವರಿಯಲಿದೆ” ಎಂದಿದ್ದಾರೆ. (ಏಜೆನ್ಸೀಸ್)

    ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಸ್ವಂತ ಜೇಬಿಂದ ಪರಿಹಾರ ನೀಡಲಿದ್ದಾರೆ ಸಚಿವ ಪಾಟೀಲ್

    “ಬ್ಲಾಕ್​ ಫಂಗಸ್​ ಸೋಂಕು ತಡೆಯಬೇಕೆಂದರೆ ಸ್ಟೆರಾಯ್ಡ್​ಗಳ ದುರ್ಬಳಕೆ ನಿಲ್ಲಿಸಿ”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts