More

    ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್​ಗೆ ಕರೊನಾ ಸೋಂಕು; 72 ಕುಟುಂಬಗಳಿಗೆ ಕ್ವಾರಂಟೈನ್​

    ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲೇ ಇರಬೇಕಾಗಿ ಬಂದಿರುವ ಹಿನ್ನೆಲೆಯಲ್ಲಿ ಜನರು ತಮ್ಮ ಜಿಹ್ವಾಚಾಪಲ್ಯ ತೀರಿಸಿಕೊಳ್ಳಲು ಆನ್​ಲೈನ್​ನಲ್ಲಿ ಆಹಾರವನ್ನು ತರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪಿಜ್ಜಾ ಕೂಡ ಹೊರತಲ್ಲ. ಆದರೆ, ಹೀಗೆ ಆನ್​ಲೈನ್​ನಲ್ಲಿ ಆಹಾರ ತರಿಸಿಕೊಳ್ಳುವ ಮುನ್ನ ಆಲೋಚಿಸುವುದು ಒಳಿತು.

    ಏಕೆಂದರೆ, ದಕ್ಷಿಣ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಮಾಡುವ ಕೆಲಸದಲ್ಲಿ ತೊಡಗಿರುವ 19 ವರ್ಷದ ಯುವಕನಿಗೆ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ಆತ ಪಿಜ್ಜಾ ಸರಬರಾಜು ಮಾಡಿದ್ದ 72 ಕುಟುಂಬಗಳನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

    ಈ ಯುವಕ ಏಪ್ರಿಲ್​ 12ರವರೆಗೆ ಪಿಜ್ಜಾ ಡೆಲಿವರಿ ಮಾಡಿದ್ದ. ಕಳೆದ 15 ದಿನಗಳಲ್ಲಿ ಈತ ದಕ್ಷಿಣ ದೆಹಲಿಯ ಹೌಜ್​ ಖಾಸ್​, ಮಾಲ್ವಿಯಾನಗರ್​ ಮತ್ತು ಸಾವಿತ್ರಿ ನಗರದ ಸುತ್ತಮುತ್ತಲ ಪ್ರದೇಶದಲ್ಲಿನ 72 ಕುಟುಂಬಗಳಿಗೆ ಪಿಜ್ಜಾ ಕೊಟ್ಟಿದ್ದ. ಇದೀಗ ಈತನಿಗೆ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಆದ್ದರಿಂದ, ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈತನಿಂದ ಪಿಜ್ಜಾ ಪಡೆದ 72 ಕುಟುಂಬಗಳನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಿರುವುದಾಗಿ ವೈದ್ಯರು ವಿವರಿಸಿದ್ದಾರೆ.

    ಈತನ ಸಂಪರ್ಕಕ್ಕೆ ಬಂದಿದ್ದ 20 ಡೆಲಿವರಿ ಬಾಯ್​ಗಳನ್ನು ಕೂಡ ಛತ್ರಪುರ ಕ್ವಾರಂಟೈನ್​ ಸೌಲಭ್ಯದಲ್ಲಿ ಕ್ವಾರಂಟೈನ್​ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಕೋವಿಡ್​ 19ಗೆ ಹೋಮಿಯೋಪಥಿ, ಯುನಾನಿ ಔಷಧ ಸಂಶೋಧನೆಗೆ ಅವಕಾಶ ಇಲ್ಲ ಎಂದ ಸುಪ್ರೀಂಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts