More

    ಪ್ರಯಾಣಿಕರ ಕರೊನಾ ಟೆಸ್ಟ್​ ತಪಾಸಣೆ ಮಾಡದ ನಾಲ್ಕು ವಿಮಾನಯಾನ ಸಂಸ್ಥೆಗಳ ಮೇಲೆ ಕೇಸ್

    ನವದೆಹಲಿ: ಪ್ರಯಾಣಿಕರ ಕೋವಿಡ್ ತಪಾಸಣೆಯ ವರದಿಗಳನ್ನು ಪರೀಕ್ಷಿಸದ ಕಾರಣಕ್ಕೆ ನಾಲ್ಕು ವಿಮಾನಯಾನ ಸಂಸ್ಥೆಗಳ ಮೇಲೆ ದೆಹಲಿ ಸರ್ಕಾರ ದೂರು ದಾಖಲಿಸಿದೆ.

    ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ಕೋವಿಡ್ ತಪಾಸಣೆಯ ವರದಿಗಳನ್ನು ನಿರ್ಲಕ್ಷಿಸಿದ್ದ ಇಂಡಿಗೋ, ವಿಸ್ತಾರ್, ಸ್ಪೈಸ್​ಜೆಟ್ ಮತ್ತು ಏರ್ ಏಷಿಯಾ ವಿಮಾನಯಾನ ಸಂಸ್ಥೆಗಳ ಮೇಲೆ ಪ್ರಕರಣ ದಾಖಲಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ. ಪ್ರಾಕೃತಿಕ ವಿಕೋಪ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

    ಮಹಾರಾಷ್ಟ್ರದಿಂದ ದೆಹಲಿಗೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿತ್ತು. ಪಾಸಿಟಿವ್ ಬಂದವರಿಗೆ 14 ದಿನ ಕ್ವಾರಂಟೈನ್​ಲ್ಲಿ ಇಡಲು ದೆಹಲಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ವಿಮಾನಯಾನ ಸಂಸ್ಥೆಗಳು ಸ್ಪಷ್ಟವಾಗಿ ಉಲ್ಲಂಘಿಸಿವೆ ಎಂದು ಆರೋಪಿಸಲಾಗಿದೆ.

    ದೆಹಲಿಯಲ್ಲಿ ಶನಿವಾರ ದಾಖಲೆಯ ಕರೊನಾ ಸೋಂಕಿತರ ಸಂಖ್ಯೆ ಕಂಡು ಬಂದಿದೆ. ಸುಮಾರು 25 ಸಾವಿರ ಜನಕ್ಕೆ ಪಾಸಿಟಿವ್ ಬಂದಿದೆ.

    ಕರೊನಾಕ್ಕೆ ಸ್ಯಾಂಡಲ್​ವುಡ್ ನಟ, ನಿರ್ಮಾಪಕ ಬಲಿ

    ‘ಎಷ್ಟು ಲಸಿಕೆ ಆರ್ಡರ್ ಮಾಡಿದ್ದೀರಿ ?’ – ಮೋದಿಗೆ ಮನಮೋಹನ್​ ಸಿಂಗ್ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts