More

  ಕರೊನಾದಿಂದ ಸತ್ತವರ ಹೆಣವಿಡಲು ಜಾಗವಿಲ್ಲ, ಚಿತಾಗಾರದಲ್ಲಿ ಸುಡಲೂ ಆಗುತ್ತಿಲ್ಲ, ದೆಹಲಿಯಲ್ಲಿ ಬಿಗಡಾಯಿಸಿದೆ ಸ್ಥಿತಿ..!

  ನವದೆಹಲಿ: ಇಲ್ಲಿನ ಲೋಕ್​ ನಾಯಕ್​ ಜಯಪ್ರಕಾಶ್​ ನಾರಾಯಣ್​ ಆಸ್ಪತ್ರೆಯಲ್ಲಿ ಕರೊನಾ ಸೋಂಕಿಗೆ ಒಳಗಾದವರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ 600ಕ್ಕೂ ಅಧಿಕ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇಲ್ಲಿನ ಶವಾಗಾರದ ಸ್ಥಿತಿ ಹೇಗಿದೆ ಗೊತ್ತಾ…?

  ದೆಹಲಿಯ ಅತ್ಯಾಧುನಿಕ ಹಾಗೂ ಸುಸಜ್ಜಿತ ಆಸ್ಪತ್ರೆಗಳಲ್ಲಿ ಲೋಕ ನಾಯಕ ಜಯಪ್ರಕಾಶ ನಾರಾಯಣ್ (ಎಲ್​ಎನ್​ಜೆಪಿ) ಆಸ್ಪತ್ರೆಯು ಒಂದಾಗಿದೆ. ಇಲ್ಲಿನ ಶವಾಗಾರದಲ್ಲಿ ಕರೊನಾ ಸೋಂಕು ಹಾಗೂ ಶಂಕೆಯಿಂದ ಮೃತಪಟ್ಟವರ 108 ಶವಗಳಿವೆ. ಶೀತಲೀಕೃತ ಘಟಕದಲ್ಲಿ 80 ಶವಗಳನ್ನಿಡಲಷ್ಟೇ ವ್ಯವಸ್ಥೆ ಇದೆ. ಇನ್ನುಳಿದ 28 ಶವಗಳನ್ನು ನೆಲದ ಮೇಲೆ ಅಲ್ಲಲ್ಲಿ ಇಡಲಾಗಿದೆ. ದುರಂತವೆಂದರೆ ಅದಕ್ಕೂ ಜಾಗ ಸಾಕಾಗದೆ, ಒಂದರ ಮೇಲೊಂದರಂತೆ ಪೇರಿಸಲಾಗಿದೆ…!

  ಇದಷ್ಟೇ ಅಲ್ಲ, ಈ ಗಾಯದ ಮೇಲೆ ಬರೆ ಎಳೆಯುವಂಥ ಸ್ಥಿತಿಯೂ ಅಲ್ಲಿ ಉದ್ಭವವಾಗಿದೆ. ಬುಧವಾರ ದಹಿಸಲೆಂದು ಚಿತಾಗಾರಕ್ಕೆ ಕಳುಹಿಸಲಾಗಿದ್ದ ಎಂಟು ಶವಗಳನ್ನು ಅಲ್ಲಿನ ಸಿಬ್ಬಂದಿ ವಾಪಸ್​ ಕಳುಹಿಸಿದ್ದಾರೆ. ಅಲ್ಲಿಗೆ ಆಸ್ಪತ್ರೆಯೇ ಶವಾಗಾರವಾಗಿ ಮಾರ್ಪಟ್ಟಿದೆ. ಈ ಎಲ್ಲ ಸಂಗತಿಗಳು ದೆಹಲಿಯಲ್ಲಿ ಕರೊನಾದಿಂದಾಗಿ ಉಂಟಾಗಿರುವ ಅವ್ಯವಸ್ಥೆಗೆ ನಿದರ್ಶನವಾಗಿವೆ.

  ಇದನ್ನೂ ಓದಿ; ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳ ಚಿಕಿತ್ಸೆಗೆ ಖರ್ಚಾಗೋದೆಷ್ಟು?

  ರಾಷ್ಟ್ರ ರಾಜಧಾನಿಯಲ್ಲಿ ಕರೊನಾದಿಂದಾಗಿ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈವರೆಗೆ 303 ಜನರು ಮೃತಪಟ್ಟಿದ್ದಾರೆ. ಬುಧವಾರ ಒಂದೇ ದಿನ 792 ಹೊಸ ಪ್ರಕರಣಗಳು ವರದಿಯಾಗಿದ್ದರೆ, 15 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ.

  ಆಸ್ಪತ್ರೆ ಸಿಬ್ಬಂದಿ ಹೇಳುವ ಪ್ರಕಾರ ಐದು ದಿನಗಳ ಹಿಂದೆ ಮೃತಪಟ್ಟವರ ಶವಗಳನ್ನು ಇನ್ನೂ ದಹಿಸಿಲ್ಲ. ಕಾರಣ, ಕೋವಿಡ್​ ಸೋಂಕಿತ ಶವಗಳ ಅಂತ್ಯಕ್ರಿಯೆ ನಡೆಸಲಾಗುವ ನಿಗಮ್​ಬೋಧ್​ನ ಅನಿಲ ಆಧಾರಿತ ಚಿತಾಗಾರದಲ್ಲಿ ಹೆಣ ಸುಡುವ ಆರು ಫರ್ನೆಸ್​ಗಳ ಪೈಕಿ ಎರಡು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿಗೆ ಆಸ್ಪತ್ರೆಯಿಂದ ಶವ ತಂದು ಸುಡುವ ತನಕವೂ ಸಿಬ್ಬಂದಿ ಕಾಯಲೇಬೇಕು. ಸಂಜೆ ಬಳಿಕ ಉಳಿದ ಶವಗಳನ್ನು ಆಸ್ಪತ್ರೆಗೆ ಒಯ್ಯಬೇಕು. ಏಕೆಂದರೆ, ಹೆಚ್ಚುವರಿ ಕೆಲಸ ಮಾಡಿದರೂ ಒಂದು ದಿನಕ್ಕೆ 15 ಶವಗಳನ್ನು ಸುಡಲಷ್ಟೇ ಅಲ್ಲಿ ಸಾಧ್ಯವಾಗುತ್ತಿದೆ.

  See also  ಹಣಕ್ಕಾಗಿ ಸರ್ಕಾರಿ ಜಾಬ್​ ಮಾರುವ ಗ್ಯಾಂಗ್​ಗಳಿಗೆ ಗೃಹ ಸಚಿವರಿಂದ ಖಡಕ್​ ಎಚ್ಚರಿಕೆ

  ಎನ್ಎಲ್​ಜೆಪಿ ಆಸ್ಪತ್ರೆ ಮಾತ್ರವಲ್ಲದೇ, ದೆಹಲಿಯ ಇತರ ಕೋವಿಡ್​ ಶವಗಳನ್ನು ಇಲ್ಲಿಯೇ ದಹಿಸಲಾಗುತ್ತಿದೆ. ಈವರೆಗೆ ಕೋವಿಡ್​ನಿಂದ ಹಾಗೂ ಶಂಕಿತ ಕೋವಿಡ್​ ಕಾರಣದಿಂದ ಮೃತಪಟ್ಟ 244 ಜನರನ್ನು ಇಲ್ಲಿ ದಹಿಸಲಾಗಿದೆ.

  ಇದನ್ನೂ ಓದಿ; ನಾಲ್ವರ ಪ್ರಯಾಣಕ್ಕೆ ಇಡೀ ವಿಮಾನವನ್ನೇ ಬುಕ್​ ಮಾಡಿದ…! 

  ಸುಡುವ ಬಿಸಿಲಿನಿಲ್ಲಿ, ಪಿಪಿಇ ಕಿಟ್​ ಧರಿಸಿ ಸಂಜೆವರೆಗೂ ಕಾದು ಹೆಣಗಳನ್ನು ಮರಳಿ ಕೊಂಡೊಯ್ಯುವುದೇ ನಮ್ಮ ಕೆಲಸವಾಗಿದೆ. ಕಳೆದ ವಾರ 34 ಶವಗಳು ನೆಲದ ಮೇಲೆ, ಒಂದರ ಮೇಲೊಂದರ ಮೇಲೆ ಇಡಲಾಗಿತ್ತು. ಈ ವಾರ 28 ಶವಗಳು ನೆಲದ ಮೇಲೆ ಇಡಲಾಗಿದೆ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ.

  ಆರಂಭದಲ್ಲಿ 4-5 ಶವವಷ್ಟೇ ತರಲಾಗುತ್ತಿತ್ತು. ಕೋವಿಡ್​ನಿಂದ ಮೃತಪಡುವವರ ಸಂಖ್ಯೆಯಲ್ಲಿ ಈ ಮಟ್ಟದ ಹೆಚ್ಚಳವಾಗುತ್ತದ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇದೀಗ ಸರ್ಕಾರ ಚಿತಾಗಾರದ ದುರಸ್ತಿಗೆ ಹಣ ನೀಡಿದ್ದು, ರಿಪೇರಿ ನಡೆಸಲಾಗುತ್ತಿದೆ ಎಂದು ಚಿತಾಗಾರದ ಸಿಬ್ಬಂದಿ ವಿವರಿಸುತ್ತಾರೆ. ನಿಗಮ್​ಬೋಧ್ ಮಾತ್ರವಲ್ಲದೇ, ಪಂಜಾಬಿ ಬಾಗ್​ ಚಿತಾಗಾರದಲ್ಲೂ ಕೋವಿಡ್​ನಿಂದ ಮೃತಪಟ್ಟವರನ್ನು ದಹಿಸಲಾಗುತ್ತಿದೆ. ಇನ್ನು, ದಫನ್​ ಬಯಸುವ ಕ್ರೈಸ್ತ ಹಾಗೂ ಮುಸ್ಲಿಮರಿಗಾಗಿ ಸ್ಮಶಾನದಲ್ಲಿ ಅವಕಾಶ ನೀಡಲಾಗಿದೆ.

  ಕರೊನಾ ಸಂಕಷ್ಟದಲ್ಲೂ ಈ ಕಂಪನಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ…!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts